ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಫೋಸಿಸ್ ವಾರ್ಷಿಕ ಸಾಮಾನ್ಯ ಸಭೆ

Last Updated 11 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು (ಪಿಟಿಐ):  ದೇಶದ ಎರಡನೆಯ ಅತಿ ದೊಡ್ಡ ಸಾಫ್ಟ್‌ವೇರ್‌ರಫ್ತು ಸಂಸ್ಥೆ ಇನ್ಫೋಸಿಸ್‌ನ 30ನೇ ವಾರ್ಷಿಕ ಸಾಮಾನ್ಯ ಸಭೆ ಶನಿವಾರ ಇಲ್ಲಿ ನಡೆಯಿತು.

ತಮ್ಮ ಕೊನೆಯ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಇನ್ಫೋಸಿಸ್ ಅಧ್ಯಕ್ಷ ಎನ್.ಆರ್ ನಾರಾಯಣ ಮೂರ್ತಿ, `ಹಲವಾರು ದೋಷಗಳಿರುವ ಒಬ್ಬ ಸಾಮಾನ್ಯ ವ್ಯಕ್ತಿ ನಾನು~. ನನ್ನ ಜೀವನ, ಈ ಜಗತ್ತಿನಲ್ಲಿ ಏನಾದರೂ ಭಿನ್ನವಾದ ಸಾಧನೆ ಮಾಡಲು ಹೊರಟ ಶ್ರೀಸಾಮಾನ್ಯನಿಗೆ ಉತ್ತೇಜನ ನೀಡಬಲ್ಲದು, ಆತ್ಮವಿಶ್ವಾಸ ತುಂಬಬಲ್ಲದು ಎಂದರು.

`ಒಬ್ಬ ಸಾಮಾನ್ಯ ಮನುಷ್ಯನಾದ ನಾನು, ನನ್ನ ದೇಶಕ್ಕಾಗಿ, ಈ ಜಗತ್ತಿಗಾಗಿ ಅಲ್ಪವಾದರೂ ಕೊಡುಗೆ ನೀಡಲು ಸಹಾಯ ಮಾಡಿದ ಆ ದೇವರಿಗೆ, ನನ್ನ ಕುಟುಂಬಕ್ಕೆ, ಈ ದೇಶಕ್ಕೆ ವಂದನೆಗಳು. ಒಬ್ಬ ಸಾಮಾನ್ಯ ಮನುಷ್ಯ ಕೂಡ ಚಿಕ್ಕ ಪ್ರಮಾಣದಲ್ಲಿ ಆದರೂ, ಈ ಸಮಾಜಕ್ಕೆ ಭಿನ್ನವಾದ ಕೊಡುಗೆ ನೀಡಲು ನನ್ನ ಜೀವನ ಆತ್ಮವಿಶ್ವಾಸ ತುಂಬಬಹುದು~ ಎಂದರು.

ಇನ್ಫೋಸಿಸ್ ನನ್ನ ಜೀವನದ ಅವಿಭಾಜ್ಯ ಅಂಗ. ನನ್ನಿಂದ ಇನ್ಫೋಸಿಸ್ ಅನ್ನು, ಇನ್ಫೋಸಿಸ್‌ನಿಂದ ನನ್ನನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ನನ್ನ ಸಹೋದ್ಯೋಗಿಗಳು ಆಗಾಗ್ಗ ಹೇಳುತ್ತಾರೆ. ಇಲ್ಲಿಯವರೆಗೆ ಕಂಪೆನಿಯ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಮುಖ ವ್ಯಕ್ತಿ ನಾನಾಗಿದ್ದೆ. ಕಂಪೆನಿ ಸಾಧಿಸಿದ ಪ್ರತಿಯೊಂದು ಮೈಲಿಗಲ್ಲನ್ನೂ ಹತ್ತಿರದಿಂದ ನೋಡಿ ಆನಂದಿಸಿದ್ದೇನೆ. ತಪ್ಪುಗಳಾದಾಗ ಮರುಗಿದ್ದೇನೆ~ ಎಂದರು.

ರಾಜೀನಾಮೆ: ಇನ್ಫೋಸಿಸ್‌ನ ಆವಿಷ್ಕಾರ ವಿಭಾಗದ ಮುಖ್ಯಸ್ಥ ಸುಭಾಶ್ ಧಾರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.  ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಾರಾಯಣ ಮೂರ್ತಿ ಅವರೇ ಈ ವಿಷಯ ಬಹಿರಂಗಪಡಿಸಿದ್ದಾರೆ.

ನಿರ್ದೇಶಕ ಮಂಡಳಿಗೆ ನಾಲ್ವರು  ಹೊಸ ಸದಸ್ಯರು
ಬೆಂಗಳೂರು (ಪಿಟಿಐ): ಇನ್ಫೋಸಿಸ್ ತನ್ನ ನಿರ್ದೇಶಕ ಮಂಡಳಿಗೆ ಈಗಿನ ಮುಖ್ಯ ಹಣಕಾಸು ಅಧಿಕಾರಿ  ವಿ. ಬಾಲಕೃಷ್ಣನ್ ಸೇರಿದಂತೆ ನಾಲ್ವರನ್ನು ಹೊಸದಾಗಿ ನೇಮಿಸಿಕೊಂಡಿದೆ. ಬಿ.ಜಿ ಶ್ರೀನಿವಾಸ್, ಅಶೋಕ್ ವಿಮೂರಿ, ಮತ್ತು ಆ್ಯನ್ ಫುಡ್ ಹೊಸದಾಗಿ ನಿರ್ದೇಶಕ ಮಂಡಳಿ ಸೇರಿದ ಸದಸ್ಯರು.

ಬಾಲಕೃಷ್ಣನ್ ಈಗ ಮುಖ್ಯ ಹಣಕಾಸು ಅಧಿಕಾರಿಯಾಗಿ, ವಿಮೊರಿ ಹಿರಿಯ ಉಪಾಧ್ಯಕ್ಷ ಮತ್ತು ಬ್ಯಾಕಿಂಗ್ ಮತ್ತು ಕ್ಯಾಪಿಟಲ್ ಮಾರುಕಟ್ಟೆಯ ಜಾಗತಿಕ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿ.ಜಿ ಶ್ರೀನಿವಾಸ್ ಇನ್ಫೋಸಿಸ್‌ನ ಕಾರ್ಯಕಾರಿ ಸಮಿತಿಯ ಸದಸ್ಯರೂ ಮತ್ತು ಹಿರಿಯ ಉಪಾಧ್ಯಕ್ಷರೂ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT