ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ: ಮಳೆ, ಮೋಡದ ಮಧ್ಯೆ ಮತದಾನ

Last Updated 8 ಫೆಬ್ರುವರಿ 2012, 9:55 IST
ಅಕ್ಷರ ಗಾತ್ರ

ಲಖನೌ (ಪಿಟಿಐ): ಉತ್ತರ ಪ್ರದೇಶ ವಿಧಾನಸಭೆಗಾಗಿ ಬುಧವಾರ ಬೆಳಿಗ್ಗೆ ಆರಂಭವಾದ ಮತದಾನ ಮಳೆಯ ಪರಿಣಾಮವಾಗಿ ಮಂದಗತಿಯಲ್ಲಿದ್ದರೂ ಮಧ್ಯಾಹ್ನದ ವೇಳೆಗೆ ಚುರುಕುಗೊಂಡಿತು. 1.70 ಕೋಟಿ ಮತದಾರರ ಪೈಕಿ ಶೇಕಡಾ 28.35ರಷ್ಟು ಮತದಾರರು ಮಧ್ಯಾಹ್ನದ ವೇಳೆಗೆ ಮತ ಚಲಾಯಿಸಿದರು.

ಆಗಸದಲ್ಲಿನ ಮೋಡ ಕರಗುತ್ತಿದ್ದಂತೆಯೇ ಮತದಾರರು ದೊಡ್ಡ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸಲಾರಂಭಿಸಿದರು. ಹತ್ತು ಜಿಲ್ಲೆಗಳಲ್ಲಿನ 55 ವಿಧಾನಸಭಾ ಸ್ಥಾನಗಳಿಗಾಗಿ ನಡೆಯುತ್ತಿರುವ ಚುನಾವಣೆಯಲ್ಲಿ ಮೊದಲ ಆರು ಗಂಟೆಗಳ ಅವಧಿಯಲ್ಲಿ ಶೇಕಡಾ 28.35 ರಷ್ಟು ಮತದಾರರು ತಮ್ಮ ಮತ ಚಲಾಯಿಸಿದರು ಎಂದು ಮುಖ್ಯ ಚುನಾವಣಾ ಅಧಿಕಾರಿ ಉಮೇಶ ಸಿನ್ಹ ಪಿಟಿಐಗೆ ತಿಳಿಸಿದರು.

ಎಲೆಕ್ಟ್ರಾನಿಕ್ ಮತಯಂತ್ರಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂಬ ದೂರುಗಳ ನಡುವೆಯೂ ಬಹ್ರಾಯಿಚ್ ಜಿಲ್ಲೆಯಲ್ಲಿ ಶೇಕಡಾ 31ರಷ್ಟು ಮತದಾನ ದಾಖಲಾಯಿತು.

ಯಾವುದೇ ಅಭಿವೃದ್ಧಿ ಕಾರ್ಯ ನಡೆಯದೇ ಇರುವುದನ್ನು ಪ್ರತಿಭಟಿಸಿ ಚುನಾವಣಾ ಬಹಿಷ್ಕಾರಕ್ಕೆ ಕರೆ ನೀಡಲಾಗಿದ್ದ ಸೀತಾಪುರದ ಗುಲಾರಿಯಾ ಗ್ರಾಮದಲ್ಲಿ ಮಧ್ಯಾಹ್ನ 1ರವರೆಗೆ ಶೇಕಡಾ 33ರಷ್ಟು ಮತದಾನ ದಾಖಲಾಯಿತು. ಈ ಗ್ರಾಮ ಮಿಸ್ರಿಖ್ ವಿಧಾನಸಭಾ ಕ್ಷೇತ್ರಕ್ಕೆ ಸೇರಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT