ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೆಗೂ ಗುರಿ ಮುಟ್ಟಿದ ವಾಯುಪಡೆ ತಂಡ

Last Updated 3 ಜೂನ್ 2011, 19:30 IST
ಅಕ್ಷರ ಗಾತ್ರ

ಕಠ್ಮಂಡು (ಐಎಎಫ್): ಭಾರತೀಯ ವಾಯುಪಡೆಯ 7 ಜನರ ತಂಡ ಮೌಂಟ್ ಎವರೆಸ್ಟ್ ಮೇಲೆ ಹಾರಿಸಿ ಬಂದ ತ್ರಿವರ್ಣ ಧ್ವಜವನ್ನು ನೇಪಾಳದಲ್ಲಿರುವ ಭಾರತೀಯ ರಾಯಭಾರಿ ರಾಕೇಶ್ ಸೂದ್ ಅವರಿಗೆ ಒಪ್ಪಿಸುವುದರೊಂದಿಗೆ ಪರ್ವತಾರೋಹಣವನ್ನು ಯಶಸ್ವಿಯಾಗಿ ಪೂರೈಸಿತು.

6 ವರ್ಷಗಳ ಹಿಂದೆ ವಾಯುಪಡೆಯ ಇತಿಹಾಸದಲ್ಲೇ ಮೊದಲ ಬಾರಿಗೆ 14 ಜನರ ತಂಡ ಎವರೆಸ್ಟ್ ಹತ್ತುವ ಸಾಹಸಕ್ಕೆ ಮುಂದಾಗಿತ್ತು. ಆದರೆ ಕರ್ನಾಟಕದವರಾದ ಸ್ಕ್ವಾಡ್ರನ್ ಲೀಡರ್ ಚೈತನ್ಯ ಅವರು ಕೊರಕಲು ಇಳುಕಲಿನಲ್ಲಿ ಆಮ್ಲಜನಕದ ಕೊರತೆಯಿಂದ ಹಿಮಗಾಳಿಗೆ ಬಲಿಯಾಗಿದ್ದರು. ಆ ತಂಡದಲ್ಲಿ ಮೂವರು ಆಗ ಸಾಧನೆ ಪೂರ್ಣಗೊಳಿಸಿದ್ದರಾದರೂ, ಸಹೋದ್ಯೋಗಿಯ ಸಾವಿನ ಕಹಿನೆನಪಿನಲ್ಲಿ ಅದಕ್ಕೆ  ಸೂತಕದ ಛಾಯೆ ಆವರಿಸಿಕೊಂಡಿತ್ತು. ಇದೀಗ ಆರು ವರ್ಷಗಳ ಬಳಿಕ ಇದೇ ತಂಡದ 7 ಜನ ಛಲ ಬಿಡದೆ ತಮ್ಮ ಗುರಿ ಮುಟ್ಟಿದ್ದಾರೆ.

ಕ್ಯಾಪ್ಟನ್ ನರೇಂದ್ರ ಕುಮಾರ್ ದಹಿಯಾ ನೇತೃತ್ವದ ತಂಡದಲ್ಲಿ ಮೂವರು ಮಹಿಳೆಯರಿದ್ದರು. ಇವರಲ್ಲಿ ಮೊದಲು ಗುರಿ ಮುಟ್ಟಿದ ಫ್ಲೈಟ್ ಲೆಫ್ಟಿನೆಂಟ್ ನಿವೇದಿತಾ ಚೌಧರಿ ವಾಯುಪಡೆಯಲ್ಲಿ ಎವರೆಸ್ಟ್ ಏರಿದ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ರಾಜಸ್ತಾನದ ಈ ಯುವತಿ ಶಿಖರ ಹತ್ತುವ ಸಲುವಾಗಿ ತಮ್ಮ ಮದುವೆಯನ್ನೂ ಮುಂದೂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT