ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸಂಪುಟ ಸಮಿತಿ ಅನುಮತಿ

ಕಾರವಾರ `ಸೀ ಬರ್ಡ್' 2ನೇ ಹಂತದ ಯೋಜನೆ
Last Updated 7 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ನವದೆಹಲಿ: ಸುಮಾರು 13,000 ಕೋಟಿ ರೂಪಾಯಿ ವೆಚ್ಚದಲ್ಲಿ ಕರ್ನಾಟಕದ ಕಾರವಾರ ನೌಕಾ ನೆಲೆ ವಿಸ್ತರಣೆ ( ಸೀ ಬರ್ಡ್ ಎರಡನೇ ಹಂತ ) ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ`ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ರಕ್ಷಣೆಗೆ ಸಂಬಂಧಿಸಿದ ಸಂಪುಟ ಸಮಿತಿ ಸಭೆಯಲ್ಲಿ ಈ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಯಿತು' ಎಂದು ನೌಕಾ ಮೂಲ ತಿಳಿಸಿವೆ.

2013ರ ಅಂತ್ಯದೊಳಗೆ ಈ ನೌಕಾ ನೆಲೆಯಲ್ಲಿ ರಷ್ಯಾ ಮೂಲದ ವಿಮಾನ ವಾಹಕ ಅಡ್ಮಿರಲ್ ಗೊರ್ಶ್‌ಕೊವ್ ಅಳವಡಿಸಲಾಗುತ್ತದೆ. ಯೋಜನೆ ಪೂರ್ಣಗೊಂಡ ಬಳಿಕ ಇಲ್ಲಿ ಜಲಾಂತರ್ಗಾಮಿಗಳನ್ನು ಹಾಗೂ ಸುಮಾರು 40ಕ್ಕೂ ಹೆಚ್ಚು ಮುಂಜೂಣಿ ಯುದ್ಧನೌಕೆಗಳನ್ನು ನಿಯೋಜಿಸಲಾಗುತ್ತದೆ.

2017-18ರೊಳಗೆ  ಸೀ ಬರ್ಡ್ -11 ಎ ಪೂರ್ಣಗೊಳ್ಳಲಿದ್ದು, ನಂತರದಲ್ಲಿ ಇಲ್ಲಿ ಸುಮಾರು 30 ಪ್ರಮುಖ ಯುದ್ಧನೌಕೆಗಳನ್ನು ನಿಯೋಜಿಸಲಾಗುತ್ತದೆ.

350 ಕೋಟಿ ರೂಪಾಯಿ ಆರಂಭಿಕ ವೆಚ್ಚದ ಈ ಯೋಜನೆಗೆ 1985ರಲ್ಲಿ ಮೊದಲು ಅನುಮೋದನೆ ನೀಡಲಾಗಿತ್ತು. 1986ರ ಅಕ್ಟೋಬರ್‌ನಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರು ಯೋಜನೆಗೆ ಚಾಲನೆ ನೀಡಿದ್ದರು. 2,629 ಕೋಟಿ ರೂಪಾಯಿ ವೆಚ್ಚದಲ್ಲಿ ಮೊದಲ ಹಂತವು 2005-06ರಲ್ಲಿ ಪೂರ್ಣಗೊಂಡಿತ್ತು. ಆ ಬಳಿಕ ಇಲ್ಲಿ 15ಕ್ಕೂ ಹೆಚ್ಚು ಯುದ್ಧನೌಕೆಗಳನ್ನು ನಿಯೋಜಿಸಲಾಗಿತ್ತು.ಸೇನೆಯ ಸಿಕ್ಕಿಂ ಸ್ಕೌಟ್ಸ್ ಮೊದಲ ತಂಡವನ್ನು ಆರಂಭಿಸುವ ಪ್ರಸ್ತಾವಕ್ಕೂ ರಕ್ಷಣೆಗೆ ಸಂಬಂಧಿಸಿದ ಸಂಪುಟ ಸಮಿತಿ ಅನುಮೋದನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT