ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡಿಯ ಸಂಭ್ರಮ ಕಾರ್ಯಕ್ರಮ

Last Updated 12 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಹೆರಿಟೇಜ್~ ಸಂಸ್ಥೆಯು ಮುಜರಾಯಿ ಇಲಾಖೆಯ ಸಹಯೋಗದಲ್ಲಿ `ಗುಡಿಯ ಸಂಭ್ರಮ~ ಬೆಂಗಳೂರಿನ ದೇವಾಲಯಗಳ ಉತ್ಸವವನ್ನು ಹಮ್ಮಿಕೊಂಡಿದೆ. ಉತ್ಸವದ ಅಂಗವಾಗಿ ವಿಚಾರ ಸಂಕಿರಣ, ವಿವಿಧ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾರ್ಚ್ 11ರವರೆಗೆ ಆಯೋಜಿಸಿದೆ.

ನಗರದ ಚಾಮರಾಜಪೇಟೆಯಲ್ಲಿರುವ ಮಲೆಮಹದೇಶ್ವರ ವಾರ್ತಾ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಆಯುಕ್ತ ಬಿ.ಜಿ. ನಂದಕುಮಾರ್, `ದೇವಾಲಯಗಳಿಗೆ ಹೆಚ್ಚಿನ ಜನರನ್ನು ಆಕರ್ಷಿಸುವ ಉದ್ದೇಶದಿಂದ ಗುಡಿಯ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ~ ಎಂದರು.

`ಮುಖ್ಯವಾಗಿ ಯುವಜನತೆ ದೇವಾಲಯಗಳಿಗೆ ಭೇಟಿ ನೀಡುವಂತೆ ಮಾಡುವ ಸಲುವಾಗಿ ಆಯ್ದ 20 ದೇವಾಲಯಗಳಲ್ಲಿ ಮಾರ್ಚ್ 11ರವರೆಗೆ ಸಂಗೀತ, ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ~ ಎಂದು ಅವರು  ಹೇಳಿದರು.

ಹೆರಿಟೇಜ್ ಸಂಸ್ಥೆಯ ಕಾರ್ಯದರ್ಶಿ ವಿ. ವಿಜಯಲಕ್ಷ್ಮಿ, ಗುಡಿ ಸಂಭ್ರಮ ಕಾರ್ಯಕ್ರಮಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಉತ್ಸವದ ಅಂಗವಾಗಿ `ಭಾರತೀಯ ಪರಂಪರೆಯಲ್ಲಿ ಪ್ರಕೃತಿ ತಾಯಿಗಿರುವ ಗೌರವ ಮತ್ತು ಪ್ರಸಕ್ತ ದಿನಗಳಲ್ಲಿ ಅದರ ಪ್ರಸ್ತುತತೆ~ ವಿಷಯ ಕುರಿತು ಸ್ಮಜನಾತ್ಮಕ ಲೇಖನ ಸ್ಪರ್ಧೆ ಹಾಗೂ `ಪ್ರಕೃತಿ ತಾಯಿಗೆ ಗೌರವ~ ವಿಷಯ ಕುರಿತು ಛಾಯಾಚಿತ್ರ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.

ಸ್ಪರ್ಧೆಗೆ ಲೇಖನ ಹಾಗೂ ಛಾಯಾಚಿತ್ರ ಕಳುಹಿಸಲು ಫೆಬ್ರುವರಿ 5 ಕೊನೇ ದಿನ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರತ್ಯೇಕವಾಗಿ ಪ್ರಥಮ (ರೂ 10,000), ದ್ವಿತೀಯ (ರೂ 7,500) ಹಾಗೂ ತೃತೀಯ (ರೂ 5,000) ಬಹುಮಾನ ನೀಡಲಾಗುವುದು.

ಹಾಗೆಯೇ ಜೆ.ಸಿ. ರಸ್ತೆಯಲ್ಲಿರುವ ಜೈನ್ ವಿಶ್ವವಿದ್ಯಾಲಯದ ಆವರಣದಲ್ಲಿ ಇದೇ 17ರಂದು `ನೈಸರ್ಗಿಕ ವ್ಯವಸ್ಥೆಯ ವರ್ಧನೆಗಾಗಿ ಭಾರತೀಯ ಪ್ರಜ್ಞೆ~ ಕುರಿತು ವಿಚಾರಗೋಷ್ಠಿ ಏರ್ಪಡಿಸಲಾಗಿದೆ. ಜತೆಗೆ ದೇವಾಲಯದ ಆವರಣ ಮತ್ತು ಸುತ್ತಮುತ್ತ ಗಿಡ ನೆಡುವ ಉದ್ದೇಶವಿದೆ~ ಎಂದು ಮಾಹಿತಿ ನೀಡಿದರು.

ಸಂಸ್ಥೆಯ ಜಂಟಿ ಕಾರ್ಯದರ್ಶಿ ಸುಪ್ರಿಯಾ ಕೊಮಂದೂರ್ ಅವರು ಉಪಸ್ಥಿತರಿದ್ದರು.

ಸ್ಪರ್ಧೆಗಳಲ್ಲಿ ಭಾಗವಹಿಸಲು ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಮಾಹಿತಿಗೆ ವೆಬ್‌ಸೈಟ್ ವಿಳಾಸ: www.gudiyasambhrama.org

ಶಬರಿಮಲೆಗೆ 50 ಜನರ ತಂಡ

`ಶಬರಿಮಲೆ ಕ್ಷೇತ್ರಕ್ಕೆ ಭೇಟಿ ನೀಡುವ ರಾಜ್ಯದ ಭಕ್ತರ ಅನುಕೂಲಕ್ಕಾಗಿ 50 ಮಂದಿಯ ತಂಡ ಈಗಾಗಲೇ ಶಬರಿಮಲೆಗೆ ತೆರಳಿದೆ~ ಎಂದು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಆಯುಕ್ತ ಬಿ.ಜಿ. ನಂದಕುಮಾರ್ ಹೇಳಿದರು.

`ಇಲಾಖೆ ವತಿಯಿಂದ ಐದು ಮಂದಿ ಅಧಿಕಾರಿಗಳು, 30 ಮಂದಿ ಪೊಲೀಸರು ಹಾಗೂ 15 ವೈದ್ಯರ ತಂಡ ಶಬರಿಮಲೆಗೆ ತೆರಳಿದೆ. ದೇವಾಲಯದ ಸನ್ನಿಧಾನ, ಪಂಪಾ ಕ್ಷೇತ್ರ ಹಾಗೂ ನಿಳಕ್ಕಲ್ ಪ್ರದೇಶದಲ್ಲಿ ಮೂರು ಪ್ರತ್ಯೇಕ ತಂಡಗಳು ಇದೇ 17ರವರೆಗೆ ಭಕ್ತರಿಗೆ ನೆರವು ನೀಡಲಿವೆ. ಶಬರಿಮಲೆ ಕ್ಷೇತ್ರದಲ್ಲಿ ವಸತಿ ನಿಲಯ ಹಾಗೂ ವಾಹನ ನಿಲುಗಡೆ ತಾಣ ನಿರ್ಮಾಣಕ್ಕೆ 15 ಎಕರೆ ಭೂಮಿ ನೀಡುವಂತೆ ಕೇರಳ ಸರ್ಕಾರವನ್ನು ಕೋರಲಾಗಿದೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT