ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡ್ ನ್ಯೂಸ್ ಕಾಲೇಜಿಗೆ ಬೆಳ್ಳಿಹಬ್ಬ

Last Updated 25 ಫೆಬ್ರುವರಿ 2012, 9:00 IST
ಅಕ್ಷರ ಗಾತ್ರ

ಕಲಘಟಗಿ: ಪಟ್ಟಣದ ಮೌಂಟ್ ಫೋರ್ಟ್ ಸಂಸ್ಥೆಯ ಅಧೀನದ ಗುಡ್ ನ್ಯೂಸ್ ಕಲಾ ಹಾಗೂ ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನ ಬೆಳ್ಳಿಮಹೋತ್ಸವದ ಅಂಗವಾಗಿ ನಿರ್ಮಾಣವಾಗಿರುವ ನೂತನ ಕಟ್ಟಡದ ಪ್ರಾರಂಭೋತ್ಸವವು ಶನಿವಾರ ಬೆಳಿಗ್ಗೆ 11.30ಕ್ಕೆ ಜರುಗಲಿದೆ.

ಬೆಳಗಾವಿ ಪ್ರಾಂತದ ಬಿಷಪ್ ರೆ.ಫಾ. ಪೀಟರ್ ಮಚಾಡೊ ಹಾಗೂ ಸಂಸ್ಥೆಯ ಸುಪೀರಿಯರ್ ರೇ.ಬ್ರ. ಜಾರ್ಜ್ ಕಲನಗೋಡ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ತಾಲ್ಲೂಕು ದಂಡಾಧಿಕಾರಿ ಡಾ. ವಿಜಯಕುಮಾರ ಹೊನಕೇರಿ, ಪೊಲೀಸ್ ಇನ್ಸ್‌ಪೆಕ್ಟರ್ ಮಹಾಂತೇಶ್ವರ ಜಿದ್ದಿ, ಪ.ಪಂ. ಮುಖ್ಯಾಧಿಕಾರಿ ಈಶ್ವರ ಸಿದ್ನಾಳ ಆಗಮಿಸಲಿದ್ದು, ರೆ.ಫಾ. ಮರಿಯಾ ಆ್ಯಂಥೋನಿ, ಪ್ರಾಚಾರ್ಯೆ ಪಿ.ಎ.ಅಲಿಯಾಕುಟ್ಟಿ ಉಪಸ್ಥಿತರಿರುವರು.

ಸುಮಾರು ನಾಲ್ಕು ದಶಕದ ಹಿಂದೆ ಅರೆಮಲೆನಾಡು ಪ್ರದೇಶವಾದ ಕಲಘಟಗಿ ತಾಲ್ಲೂಕಿನ ತುಮರಿಕೊಪ್ಪ ಚರ್ಚಿಗೆ ಬಂದ ಫಾದರ್ ಪಿ.ಜೆ. ಜೇಕಬ್ ಆರಂಭಿಸಿದ ಮಹಾವಿದ್ಯಾಲಯವು ಇಂದು ಬೆಳ್ಳಿಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಉತ್ತರ ಕರ್ನಾಟಕದ ಹೆಮ್ಮೆಯ ಶಿಕ್ಷಣ ಸಂಸ್ಥೆಗಳೊಂದಾಗಿರುವುದು ತಾಲ್ಲೂಕಿನ ಜನತೆಯಲ್ಲಿ ಸಂತಸವನ್ನುಂಟು ಮಾಡಿದೆ.

1986-87ನೇ ಸಾಲಿನಲ್ಲಿ ಆರಂಭವಾದ ಕಾಲೇಜು 1995ರ ನವೆಂಬರ್ ಒಂದರಿಂದ ನೇರ ಅನುದಾನಕ್ಕೆ ಒಳಪಟ್ಟಿತು. ಗ್ರಾಮೀಣ ಪ್ರದೇಶದಲ್ಲಿ ಯಾವುದೇ ರೀತಿಯ ಆರ್ಥಿಕ ಬೆಂಬಲವಿಲ್ಲದ ಬಡವ, ಹಿಂದುಳಿದ, ನಿರ್ಗತಿಕ, ಅಲ್ಪಸಂಖ್ಯಾತ, ದಲಿತರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಆರಂಭವಾದ ಕಾಲೇಜು, ಎಲ್ಲರಿಗೂ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡುವಂತಹ ಪ್ರಾಮಾಣಿಕ ಕೆಲಸ ಆರಂಭಿಸಿತು.

ಹೀಗಾಗಿ ಸಂಸ್ಥೆ ಆರ್ಥಿಕ ಹಿನ್ನಡೆ ಅನುಭವಿಸುತ್ತಿದ್ದರೂ ನಗರ ಪ್ರದೇಶದ ಕಾಲೇಜುಗಳಿಗಿಂತ ಹೆಚ್ಚಿನ ಶೈಕ್ಷಣಿಕ ಗುಣಮಟ್ಟವನ್ನು ಕಾಯ್ದುಕೊಂಡು ಬರುತ್ತಿದೆ. ಆರ್ಥಿಕ ಸಂಕಷ್ಟವನ್ನು ನೀಗಿಸಲು ಫಾ. ಜೇಕಬ್ ಅವರು ಅಂತರ ರಾಷ್ಟ್ರೀಯ ಖ್ಯಾತಿಯ ಹೊಂದಿರುವ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾದ `ಮೌಂಟ್ ಫೋರ್ಟ್ ಬ್ರದರ್ಸ್ ಆಫ್ ಸೆಂಟ್ ಗ್ಯಾಬ್ರಿಯಲ್~ ಸಂಸ್ಥೆಗೆ 2000ನೇ ಇಸ್ವಿಯಲ್ಲಿ ಗುಡ್ ನ್ಯೂಸ್ ವೆಲ್‌ಫೇರ್ ಸಂಸ್ಥೆಯ ಆಡಳಿತವನ್ನು ಹಸ್ತಾಂತರಿಸಿದರು.

ಮೌಂಟ್ ಫೋರ್ಟ್ ಸಂಸ್ಥೆ 2001ರಲ್ಲಿ ತಾಲ್ಲೂಕಿನಲ್ಲೇ ಸುಸಜ್ಜಿತ ಪದವಿಪೂರ್ವ ಕಾಲೇಜು  ಕಟ್ಟಡ ನಿರ್ಮಿಸಿ ಅದರಲ್ಲಿ ಗ್ರಂಥಾಲಯ, ಸಭಾಭವನ ಸೌಲಭ್ಯ ಕಲ್ಪಿಸಿತು. ಇದೀಗ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡದ ಪ್ರಾರಂಭೋತ್ಸವಕ್ಕೆ ಸಜ್ಜಾಗಿದೆ. ಕಾಲೇಜಿನ ಆಡಳಿತ ವ್ಯವಸ್ಥೆ ಹಾಗೂ ಗ್ರಂಥಾಲಯವು ಸಂಪೂರ್ಣ ಗಣಕೀಕೃತಗೊಂಡಿದ್ದು, ಆಧುನಿಕ ತಂತ್ರಜ್ಞಾನದ ಸೌಲಭ್ಯವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ.

ಪ್ರಸಕ್ತ ಸಾಲಿನಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಕಾಲೇಜು ಹೊಂದಿದೆ.  ಕಾಲೇಜು ನಿರ್ವಹಿಸುತ್ತಿರುವ ಶೈಕ್ಷಣಿಕ ಗುಣಮಟ್ಟವನ್ನು ಗಮನಿಸಿದ ನ್ಯಾಕ್ ಮಾನ್ಯತಾ ಸಂಸ್ಥೆಯು ವಿದ್ಯಾಲಯಕ್ಕೆ `ಬಿ~ಗ್ರೇಡ್ ಮಾನ್ಯತೆಯನ್ನು ನೀಡಿದೆ.

ಈ ವರೆಗೆ ರೆ. ಅಬ್ರಹಾಂ ಪ್ರಲೇಲ, ಬ್ರ.ಲೂಯಿಸ್, ಬ್ರ. ಒಲಿವರ್ ಎರಿಕಟ್, ರೆ.ಬ್ರ.ಥಾಮಸ್ ತೊಟ್ಟಿಯಲ್ ಆಡಳಿತಾಧಿಕಾರಿಯಾಗಿ ನಿರ್ವಹಿಸಿದ್ದಾರೆ. ಈಗ ಬ್ರ.ಸಾಬು ಜೋಸೆಫ್ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT