ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಲೋ ದಿಲ್ಲಿ

Last Updated 28 ಜನವರಿ 2012, 19:30 IST
ಅಕ್ಷರ ಗಾತ್ರ

ದೆಹಲಿಗೆ ಮೊದಲು ರಾಜಧಾನಿ ಪಟ್ಟ ಸಿಕ್ಕಿದ್ದು ಯಾವಾಗ?
ಡಿಸೆಂಬರ್ 12, 1911ರಂದು ಕಿಂಗ್ ಜಾರ್ಜ್ ವಿ. ಭಾರತದ ರಾಜಧಾನಿಯನ್ನು ಕೋಲ್ಕತ್ತದಿಂದ ದೆಹಲಿ ದರ್ಬಾರ್‌ಗೆ ಸ್ಥಳಾಂತರಿಸಲು ತೀರ್ಮಾನಿಸಿದ. ಮೂರು ದಿನಗಳ ನಂತರ ಅವನ ರಾಣಿ ಮೇರಿ ರಾಜಧಾನಿಯ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದಳು. ಹೊಸ ರಾಜಧಾನಿಯಾಗಿ ದೆಹಲಿ ಅನಾವರಣಗೊಂಡದ್ದು ಫೆಬ್ರುವರಿ 13, 1931ರಂದು, ಆಗಿನ ಗವರ್ನರ್ ಜನರಲ್ ಲಾರ್ಡ್ ಇರ‌್ವಿನ್ ಕಾಲಘಟ್ಟದಲ್ಲಿ. 

ದೆಹಲಿ ನಗರದ ವಿನ್ಯಾಸ ಮಾಡಿದ್ದು ಯಾರು?

ಆಗ ಬ್ರಿಟನ್‌ನ ಹೆಸರಾಂತ ವಿನ್ಯಾಸಕಾರರಾಗಿದ್ದ ಸರ್ ಎಡ್ವಿನ್ ಲ್ಯೂಟ್ಯೆನ್ಸ್ ಹಾಗೂ ಸರ್ ಹರ್ಬರ್ಟ್ ಬೇಕರ್ ಈ ನಗರದ ವಿನ್ಯಾಸ ಮಾಡಿದರು.

ಶಹಜಹಾನನ ದೆಹಲಿಗೂ ಬ್ರಿಟನ್ ವಿನ್ಯಾಸಕಾರ ನಗರಿಗೂ ವ್ಯತ್ಯಾಸವೇನು?
ಶಹಜಹಾನ್ ರಾಜಧಾನಿಯಾಗಿದ್ದ ದೆಹಲಿ ಅವನಾಳುತ್ತಿದ್ದ ವಿವಿಧ ಏಳು ಪ್ರಮುಖ ನಗರಗಳಲ್ಲಿ ಒಂದೆನಿಸಿತ್ತು. ಆ ರಾಜಧಾನಿಯ ಭಾಗವನ್ನು ಈಗ ಹಳೆ ದೆಹಲಿ ಎಂದು ಕರೆಯುತ್ತಾರೆ. ಹಳೆ ನಗರಿಯ ದಕ್ಷಿಣ ಭಾಗದಲ್ಲಿ ನವ ದೆಹಲಿ ರೂಪುಗೊಂಡದ್ದು.

ಸ್ವಾತಂತ್ರ್ಯಾ ನಂತರ ದೆಹಲಿಯ ಸ್ಥಾನಮಾನ ಹೇಗಿತ್ತು?
1947ರಲ್ಲಿ ಸ್ವಾತಂತ್ರ್ಯ ಬಂದ ನಂತರ ನವ ದೆಹಲಿಯನ್ನು ಭಾರತದ ರಾಜಧಾನಿ ಎಂದು ಘೋಷಿಸಲಾಯಿತು. 1956ರವರೆಗೆ ಅದರ ಆಡಳಿತವನ್ನು `ಚೀಫ್ ಕಮಿಷನರ್~ ನೋಡಿಕೊಳ್ಳುತ್ತಿದ್ದರು. ಆಗ ಅದಕ್ಕೆ ಒಕ್ಕೂಟ ಪ್ರಾಂತ್ಯದ ಸ್ಥಾನ ಸಿಕ್ಕಿತು. ಆಮೇಲೆ ಲೆಫ್ಟಿನೆಂಟ್ ಗವರ್ನರ್ ಅದರ ಉಸ್ತುವಾರಿ ನೋಡಿಕೊಳ್ಳಲಾರಂಭಿಸಿದರು. 1993ರಲ್ಲಿ ಭಾಗಶಃ ರಾಜ್ಯದ ಸ್ಥಾನಮಾನ ನವದೆಹಲಿಗೆ ಸಿಕ್ಕಿತು. ಈಗ ಅದು ರಾಷ್ಟ್ರದ ರಾಜಧಾನಿಯೇ ಹೌದು.

ದೆಹಲಿಯ ಮೊದಲ ಮುಖ್ಯಮಂತ್ರಿ ಯಾರು?

ಚೌಧರಿ ಬ್ರಹ್ಮ ಪ್ರಕಾಶ್ ಯಾದವ್ (1952-55) ದೆಹಲಿಯ ಮೊದಲ ಮುಖ್ಯಮಂತ್ರಿ. ಸುಷ್ಮಾ ಸ್ವರಾಜ್ (1998) ಮೊದಲ ಮಹಿಳಾ ಮುಖ್ಯಮಂತ್ರಿ. ಶೀಲಾ ದೀಕ್ಷಿತ್ ಈಗಿನ ಮುಖ್ಯಮಂತ್ರಿಯಾಗಿದ್ದು, ದೇಶದಲ್ಲೇ ದೀರ್ಘ ಕಾಲ ರಾಜ್ಯವೊಂದರ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಮೊದಲ ಮಹಿಳೆ ಎಂಬ ಅಗ್ಗಳಿಕೆಗೆ ಪಾತ್ರರಾಗಿದ್ದಾರೆ.  
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT