ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜೆ ಸಾರಾ ಜೀವನ ಸಾರ

Last Updated 27 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಡಿಜೆ ಸಾರಾ ರಾಬರ್ಟ್‌ಸನ್ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನವರು. ಈಕೆ ತಮ್ಮ ಡ್ರೆಸ್ಸಿಂಗ್ ಸೆನ್ಸ್, ಒನಪು-ಒಯ್ಯಾರ, ಚೆಲುವು, ಗಾಸಿಪ್ ಹಾಗೂ ನೇರನುಡಿ ಹೀಗೆ ಹಲವು ವಿಚಾರಗಳಿಂದ ಇಡೀ ವಿಶ್ವದಾದ್ಯಂತ ಸುದ್ದಿಯಲ್ಲಿದ್ದವರು. ಸದ್ಯ ಪ್ಲೇಬಾಯ್ ಮ್ಯಾನ್‌ಶನ್‌ನಲ್ಲಿ ಡಿಜೆ ಆಗಿದ್ದಾರೆ. `ಫ್ಲರ್ಟಿಂಗ್ ಹಾಗೂ ಸಂಗೀತ ಎರಡು ನನ್ನ ರಕ್ತದಲ್ಲೇ ಬಂದಿದೆ~ ಎಂದು ನಿಸ್ಸಂಕೋಚವಾಗಿ ಮಾತನಾಡುವ ಈ ಸುಂದರಿ ಈಚೆಗೆ ನಗರಕ್ಕೆ ಮೊದಲ ಬಾರಿ ಬಂದಿದ್ದರು. ಇವರನ್ನು ಇಲ್ಲಿಗೆ ಕರೆತಂದಿದ್ದು `ವೈಟ್ ಮಿಶ್ಚೀಫ್~.

ರೆಕಾರ್ಡ್ ಪ್ಲೇಯರ್ ಹಾಗೂ ಕ್ಯಾಮೆರಾ ಎರಡರ ಮೂಲಕವೂ ತಮ್ಮ ಚೆಲುವು ಹಾಗೂ ಪ್ರತಿಭೆಯನ್ನು ಹೊರಗೆಡವಿದ ಸಾರ ಎಲ್ಲೆಡೆ ತಮ್ಮದೇ ಅಲೆ ಹುಟ್ಟಿಹಾಕಿದಾಕೆ. ಇವರಿಗೆ ಸ್ಯಾಸ್, ಸ್ವಿಮ್‌ವೇರ್, ಮನಸ್ಸು ಪಲ್ಲಟಗೊಳಿಸುವಂತಹ ಹಾಟ್ ಉಡುಗೆಗಳನ್ನು ತೊಡುವುದೆಂದೆರೆ ತುಂಬಾ ಇಷ್ಟವಂತೆ. ಅಂದಹಾಗೆ ಈಕೆ ಗೋಲ್ಡ್ ಕೋಸ್ಟ್‌ನ ಟಾಪ್ 5 ಸೆಕ್ಸಿಯೆಸ್ಟ್ ಮಹಿಳೆಯರಲ್ಲಿ ಒಬ್ಬರೆಂಬ ಖ್ಯಾತಿಗೂ ಪಾತ್ರರಾದ್ದಾರೆ. ಪ್ರೆಸ್ಟೀಟ್ ಟವರ್‌ನಲ್ಲಿರುವ ಝೀರೋ ಜಿ ಪಬ್‌ನಲ್ಲಿ ಈಕೆ ನೀಡಿದ ಕಾರ್ಯಕ್ರಮ ಸಂಚಲನ ಉಂಟುಮಾಡಿತು. ಈ ಸಂದರ್ಭದಲ್ಲಿ ಮಾತಿಗೆ ಸಿಕ್ಕ ಸಾರಾ ತಮ್ಮ ಪ್ರತಿಭೆ ಹಾಗೂ ಚೆಲುವನ್ನು ವ್ಯಾಖ್ಯಾನಿಸಿದ್ದು ಹೀಗೆ...

`ನಾನು 5 ವರ್ಷದವಳಿದ್ದಾಗಿನಿಂದಲೇ ನನಗೆ ವಯೋಲಿನ್ ಮೇಲೆ ವಿಪರೀತ ವ್ಯಾಮೋಹ. ವಯಸ್ಸು 18ಕ್ಕೆ ಕಾಲಿಡುವವರೆಗೂ ಅದು ನನಗೆ ಅಂಟಿಕೊಂಡೇ ಇತ್ತು. ಮುಂದೆ ಸಂಗೀತ ನನ್ನ ಜೀವನದ ಒಂದು ಭಾಗವಾಯ್ತು. ಆನಂತರದಲ್ಲಿ ನಾನು ಸಾಂಪ್ರದಾಯಿಕ ಸಂಗೀತದಿಂದ ಪಾಶ್ಚಾತ್ಯ ಸಂಗೀತದೆಡೆಗೆ ನನ್ನ ಹರಿವನ್ನು ಬದಲಾಯಿಸಿಕೊಂಡೆ. ಅದು ನನ್ನ ಭವಿಷ್ಯವನ್ನೇ ಬದಲಾಯಿಸಿತು.

ಹಲವಾರು ಡಿಜೆಗಳು, ಪ್ರೊಡ್ಯುಸರ್‌ಗಳು ಹಾಗೂ ಸಂಗೀತ ತಂಡಗಳು ನನ್ನ ಮೇಲೆ ತುಂಬಾ ಪ್ರಭಾವ ಬೀರಿದವು. ನಾನು ಮೊದಲ ಬಾರಿಗೆ ಪ್ಲೇಬಾಯ್ ಪರಿಚಾರಿಕಳಾದಾಗಿನ ಅನುಭವ ಇಂದಿಗೂ ನನ್ನ ಎದೆಯಲ್ಲಿ ಬೆಚ್ಚಗೆ ಕುಳಿತಿದೆ.

ಪರಿಚಾರಿಕೆ (ಬನಿ) ಕನಸು ಮೊದಲು ನನ್ನೊಳಗೆ ಎಷ್ಟು ರೋಚಕ ಭಾವ ಹುಟ್ಟಿಸಿತ್ತೋ ಅಷ್ಟೇ ಭಯಬೀಳಿಸಿತ್ತು. `ಪ್ಲೇಬಾಯ್ ಬನಿ~ಯಾಗಿ ಆಯ್ಕೆಯಾದ ನಾವು 16 ಮಂದಿ ಹುಡುಗಿಯರು ತರಬೇತಿ ಪಡೆಯಲೆಂದು ಮೊದಲ ಬಾರಿಗೆ ಮಕಾ ನಗರಿಗೆ ಪಯಣ ಬೆಳೆಸಿದೆವು. ಅಲ್ಲಿ ಆರು ತಿಂಗಳು ನಮ್ಮನ್ನು ತರಬೇತುಗೊಳಿಸಿದರು. ಪ್ಲೇಬಾಯ್‌ನಲ್ಲಿ ಬನಿ ಆಗಿ ಕೆಲಸ ಮಾಡಬೇಕು ಎಂಬ ನನ್ನ ಬಹುದಿನದ ಕನಸು ತರಬೇತಿ ಮುಗಿಸಿದ ನಂತರ ಈಡೇರಿತ್ತು. ಮೊದಲ ದಿನ ಪ್ಲೇಬಾಯ್‌ಗೆ ಕಾಲಿಟ್ಟಾಗ ಉಂಟಾದ ಪುಳಕ ಇಂದಿಗೂ ನೆನಪಿನಲ್ಲಿದೆ.

ಪ್ಲೇಬಾಯ್ ಬನಿ ಅಂದರೆ ಪ್ಲೇಬಾಯ್ ಕ್ಲಬ್‌ನಲ್ಲಿ ಕೆಲಸ ಮಾಡುವ ಪರಿಚಾರಿಕೆ ಎಂದರ್ಥ. ಈ ಕ್ಲಬ್ ಲಾಸ್ ವೆಗಾಸ್‌ನಲ್ಲಿದೆ. ಈ ಬನಿಗಳು ತೊಡುವ ಕಾಸ್ಟ್ಯೂಮ್‌ಗೆ ಬನಿ ಸೂಟ್ ಎನ್ನುತ್ತಾರೆ. ಇದು ಅಮೆರಿಕನ್ನರು ಸಂಜೆ ಪಾರ್ಟಿಯಲ್ಲಿ ತೊಡುವ ತುಂಡು ಉಡುಪು ಟಕ್ಸೀಡೋನಿಂದ ಪ್ರೇರಣೆಗೊಂಡಿದೆ. ಸರಳವಾಗಿ ಹೇಳುವುದಾದರೆ ಬಿಕಿನಿ ರೂಪದಲ್ಲಿರುತ್ತದೆ.

ನಿತಂಬಗಳನ್ನು ಬಿಗಿದಪ್ಪಿಕೊಂಡ ವಸ್ತ್ರ, ಮೊಲದ ಕಿವಿ ಆಕಾರವನ್ನು ಹೋಲುವ ಜುಂಗುಗಳಿಂದ ಕೂಡಿದ ಮೃದುವಾದ ಬಿಳಿ ತುಪ್ಪಳದ ಕೃತಕ ಕಿವಿಗಳು, ಕಾಲರ್, ಮುಂಗೈಗೊಂದು ಪಟ್ಟಿ ಕಟ್ಟಿಕೊಂಡು ಬನಿಗಳು ಕ್ಲಬ್‌ನಲ್ಲಿ ಮದ್ಯ ಸರಬರಾಜು ಮಾಡುತ್ತಾರೆ. ಬನಿಗಳಲ್ಲಿ ಅನೇಕ ಪ್ರಕಾರಗಳಿವೆ- ಡೋರ್ ಬನಿ, ಸಿಗರೇಟ್ ಬನಿ, ಫ್ಲೋರ್ ಬನಿ, ಜೆಟ್ ಬನಿ ಹೀಗೆ. ಬನಿಗಳ ಕೆಲಸ ಸವಾಲಿನದ್ದು. ಬನಿಗಳು 143 ಬ್ರ್ಯಾಂಡ್ ಲಿಕ್ಕರ್ ತಿಳಿದುಕೊಳ್ಳುವುದು, ಕಾಕ್‌ಟೇಲ್ ಅಣಿಮಾಡುವುದು ಸುಲಭವೇನಲ್ಲ. ಬನಿ ಆಗಿ ಕಾರ್ಯ ನಿರ್ವಹಿಸುವವರಿಗೆ ದೃಢಮನಸ್ಸು ಇರಬೇಕು. ನಾವು ಗ್ರಾಹಕರ ಮುಂದೆ ನಿಲ್ಲುವ ಭಂಗಿ ಇಲ್ಲಿ ತುಂಬಾ ಮುಖ್ಯ.

ವೈಟ್ ಮಿಶ್ಚೀಫ್ ಡಿಜೆ ಟೂರ್‌ನ ಭಾಗವಾಗಿ ನಾನು ಭಾರತಕ್ಕೆ ಬಂದಿದ್ದೇನೆ. ಇಲ್ಲಿನ ಎಂಟು ಮಹಾನಗರಿಗಳ ಪಬ್‌ಗಳಲ್ಲಿ ಕಾರ್ಯಕ್ರಮ ನೀಡುತ್ತೇನೆ. ಈಗ ನಾನು ಪ್ಲೇಬಾಯ್ ಕ್ಲಬ್‌ನ ರೆಸಿಡೆಂಟ್ ಡಿಜೆ ಆಗಿದ್ದೇನೆ. ವಾರಕ್ಕೆ ಆರು ರಾತ್ರಿ ಅಲ್ಲಿರುತ್ತೇನೆ. ಪ್ಲೇಬಾಯ್ ಮ್ಯಾನ್‌ಶನ್ ಪಾರ್ಟಿಗಳು ಅವಿಸ್ಮರಣೀಯವಾದವು. ಅಲ್ಲಿ ಖುಷಿ ಇರುತ್ತದೆ. ಕುಡಿತ, ಕುಣಿತ ಎಲ್ಲವೂ ಇರುತ್ತದೆ. ಜೋಡಿಗಳು ಕಣ್ಮುಚ್ಚಿಕೊಂಡು ಅಧರ ಚುಂಬಿಸುವುದು, ಗುಟುಕು ಗುಟುಕಾಗಿ ಮದ್ಯ ಹೀರುವುದು, ಅಬ್ಬರಿಸುವ ಸಂಗೀತ ಇವೆಲ್ಲವೂ ವಾಹ್ ಎನಿಸುವಂತೆ ಮಾಡುತ್ತದೆ.

ನನಗೆ ವಿಶ್ವದೆಲ್ಲೆಡೆ ಸಂಚರಿಸಿದ ಅನುಭವವಿದೆ. ಪ್ರಭಾವಿ ವ್ಯಕ್ತಿಗಳ ಪರಿಚಯವಿದೆ. ಕೆಲ ದಿನಗಳ ಹಿಂದೆ ಪ್ಲೇಬಾಯ್ ಮ್ಯಾನ್‌ಶನ್‌ನಲ್ಲಿ ಕಾರ್ಯಕ್ರಮ ನೀಡುತ್ತಿದ್ದಾಗ ನನ್ನ ನೋಡಲು ಸೇರಿದ್ದ ಪಿ.ದಿಡ್ಡಿ, ಹೆಫ್ನರ್, ಪಮೇಲಾ ಅಂಡರ್‌ಸನ್, ಬಸ್ಟಾ ರೈಮ್ಸ, ಪ್ಯಾರೀಸ್ ಹಿಲ್ಟನ್ ಹಾಗೂ ಅಫ್ರೋಜಾಕ್ ಅವರನ್ನು ಕಂಡು ನಾನು ದಂಗಾದೆ. ಅವರ ಇರುವಿಕೆ ನನಗೊಂದು ಹೆಮ್ಮೆಯ ವಿಚಾರ. ಹಾಗಾಗಿ ಈ ಘಟನೆಯನ್ನು ನಾನು ಎಲ್ಲಿಯೇ ಹೋದರೂ ನೆನಪಿಸಿಕೊಳ್ಳುತ್ತೇನೆ.

ನಾನು ಡಿಜೆ ಆಗುವುದಕ್ಕಿಂತ ಮುನ್ನ ಮಾಡೆಲಿಂಗ್‌ನಲ್ಲಿ ತೊಡಗಿದ್ದೆ. ನಾಲ್ಕು ವರ್ಷ ರ‌್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದೇನೆ. ನನಗೆ ಪೂಲ್ ಪಾರ್ಟಿಗಳೆಂದರೆ ತುಂಬಾ ಅಚ್ಚುಮೆಚ್ಚು. ನಾನು ಎಲ್ಲ ವಸ್ತ್ರ ವಿನ್ಯಾಸಕರನ್ನು ಇಷ್ಟಪಡುತ್ತೇನೆ. ಅದರಲ್ಲಿ ನನಗೆ ಚಾನೆಲ್ ಅಚ್ಚುಮೆಚ್ಚಿನವನು. ಬೆಂಗಳೂರು ಪ್ರವಾಸ ನನಗೆ ಹೆಚ್ಚಿನ ಖುಷಿ ಕೊಟ್ಟಿದೆ. ಇಲ್ಲಿನ ರೂಢಿ, ಸಂಪ್ರದಾಯ ಇಷ್ಟವಾದವು. ಬೆಂಗಳೂರು ಸುಂದರ ನಗರಿ. ಇಲ್ಲಿನ ನೆನಪುಗಳನ್ನು ನನ್ನ ಕುಟುಂಬದೊಂದಿಗೆ ಸದಾ ಹಂಚಿಕೊಳ್ಳುತ್ತೇನೆ. ಮುಂದೆ ಕೂಡ ನಾನು ಬೆಂಗಳೂರಿನಲ್ಲಿ ಅನೇಕ ಕಾರ್ಯಕ್ರಮ ನೀಡುತ್ತೇನೆ. ಇಲ್ಲಿ ಕಳೆದ ಒಂದು ರಾತ್ರಿ ಸುಮಧುರ.

ಆಸ್ಟ್ರೇಲಿಯಾದಲ್ಲಿ ಎಲ್ಲೇ ಅಡ್ಡಾಡಿದರೂ ನನ್ನ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ನನ್ನ ಈ ಪರಿ ಜನಪ್ರಿಯತೆ ನನ್ನ ಖಾಸಗಿ ಜೀವನವನ್ನೇ ಕಿತ್ತುಕೊಂಡಿದೆ ಅಂತ ಒಮ್ಮಮ್ಮೆ ನನಗೆ ಅನಿಸಿದೆ. ಆದರೂ ಮನಸ್ಸಿನಲ್ಲಿ ಖುಷಿ ಮನೆಮಾಡಿಕೊಂಡಿದೆ. ನನಗೆ ಬಿಡುವು ಸಿಗುವುದೇ ಕಷ್ಟ. ಮನಸ್ಸು ಒಮ್ಮಮ್ಮೆ ಒಂದು ಆರಾಮದಾಯಕ ನಿದ್ದೆಗಾಗಿ ಹಾತೊರೆಯುತ್ತದೆ. ಆಗೆಲ್ಲಾ ಅಭಿಮಾನಿಗಳಿಂದ ತಪ್ಪಿಸಿಕೊಂಡು ಯಾರಿಗೂ ಹೇಳದೆ ಕಣ್ಮರೆಯಾಗಿಬಿಡುತ್ತೇನೆ. ಒಮ್ಮಮ್ಮೆ ಸೂರ್ಯ ಹುಟ್ಟುವ ಮೊದಲೇ ಹೋಟೆಲ್ ಚೆಕ್‌ಔಟ್ ಮಾಡಿದ್ದುಂಟು.

ನಾನು ವಯೋಲಿನ್ ಬಗ್ಗೆ ಒಲವು ಬೆಳೆಸಿಕೊಳ್ಳದಿದ್ದರೆ ನನ್ನ ಜೀವನದಲ್ಲಿ ಇಷ್ಟೆಲ್ಲಾ ಸಂಗತಿಗಳು ನಡೆಯುತ್ತಲೇ ಇರಲಿಲ್ಲ. ನಾನು ಕೂಡ ಗೋಲ್ಡ್‌ಕೋಸ್ಟ್‌ನ ಒಬ್ಬ ಸಾಮಾನ್ಯ ಪ್ರಜೆಯಾಗಿ ಇರುತ್ತಿದ್ದೆ. ವಯೋಲಿನ್ ನನ್ನನ್ನು ಕೀರ್ತಿ ಹಾಗೂ ಯಶಸ್ಸಿನ ತುತ್ತ ತುದಿಗೆ ತಂದು ನಿಲ್ಲಿಸಿತು. ನನ್ನ ನಿರಂತರ ಪರಿಶ್ರಮ ಕೂಡ ನನ್ನ ಸಾಧನೆಗೆ ದಾರಿ ದೀವಿಗೆ ಆಯ್ತು. ಒಂದು ವೇಳೆ ನಾನು ಈ ಪರಿ ಜನಪ್ರಿಯತೆ ಗಳಿಸದಿದ್ದರೆ ನನ್ನದೇ ಕೆಲಸ ಮಾಡಿಕೊಂಡು ಆರಾಮಾಗಿರುತ್ತಿದ್ದೆ.
 
ಬೇಸಿಗೆಯಲ್ಲಿ ಮಾತ್ರ ಆಸ್ಟ್ರೇಲಿಯಾದ ಕಡಲಾ ಕಿನಾರೆಯಲ್ಲಿ ಬಿಕಿನಿ ತೊಟ್ಟು ನಿತ್ಯ ಮಲಗಿ ನೆಮ್ಮದಿ ಪಡುತ್ತಿದ್ದೆ... ಮಾತು ಮುಗಿಸಿದ ಸಾರಾ ತುಂಟ ನಗು ನಕ್ಕರು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT