ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಣ್ಯ, ನೋಟು ಪ್ರದರ್ಶನಕ್ಕೆ ಬೋಪಯ್ಯ ಚಾಲನೆ

Last Updated 7 ಜನವರಿ 2012, 5:55 IST
ಅಕ್ಷರ ಗಾತ್ರ

ಮಡಿಕೇರಿ: ಅನಾದಿ ಕಾಲದ ನಾಣ್ಯ ಮತ್ತು ನೋಟುಗಳನ್ನು ಸಂಗ್ರಹಿಸಿ ಪ್ರದರ್ಶನ ಮಾಡುವುದು ಕಲೆ. ದೇಶ ಮತ್ತು ವಿದೇಶಗಳಲ್ಲಿನ ನಾಣ್ಯ ಮತ್ತು ನೋಟು ವೀಕ್ಷಿಸಿದರೆ ಜ್ಞಾನ ಭಂಡಾರ ಪಡೆಯಬಹುದು ಎಂದು ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಹೇಳಿದರು.

ಕನ್ನಡ ಸಂಸ್ಕೃತಿ ಇಲಾಖೆ, ಜಿಲ್ಲಾ ಪಂಚಾಯಿತಿ, ನಗರಸಭೆ, ಕೊಡಗು ಪ್ರೆಸ್‌ಕ್ಲಬ್, ಡಿಸಿಸಿ ಬ್ಯಾಂಕ್, ಬಿಎಸ್‌ಎನ್‌ಎಲ್, ಶಕ್ತಿ ಪ್ರತಿಷ್ಠಾನ, ರೋಟರಿ ಮಿಸ್ಟಿ ಹಿಲ್ಸ್, ಕಾರ್ಪೋರೇಷನ್ ಬ್ಯಾಂಕ್, ಸುಮುಖ್ ಟ್ರೇಡರ್ಸ್‌ ಮತ್ತಿತರ ಸಹಯೋಗದಲ್ಲಿ ನಗರದ ಫೀ.ಮಾ. ಕೆ.ಎಂ. ಕಾರ್ಯಪ್ಪ ವಿವಿಧೋದ್ದೇಶ ಸಭಾಂಗಣದಲ್ಲಿ ಶುಕ್ರವಾರ ನಡೆದ ರಾಜ್ಯ ಮಟ್ಟದ 125ನೇ ನಾಣ್ಯ ಮತ್ತು ನೋಟುಗಳ 3 ದಿನಗಳ ಬೃಹತ್ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಎರಡೂವರೆ ಸಾವಿರ ವರ್ಷಗಳಿಗೂ ಹಳೆಯದಾದ ಮತ್ತು ಇಂದಿನ ಕಾಲದಲ್ಲಿ ಚಲಾವಣೆಯಲ್ಲಿರುವ ನಾಣ್ಯ ಮತ್ತು ನೋಟುಗಳನ್ನು ಪ್ರದರ್ಶನದಲ್ಲಿಡುವುದು ದೊಡ್ಡ ಸಾಧನೆ. ನಾಣ್ಯ ಮತ್ತು ನೋಟುಗಳ ಸಂಗ್ರಹಗಾರರಾದ ಪಿ.ಕೆ.ಕೇಶವಮೂರ್ತಿ ಅವರ ಪರಿಶ್ರಮ ಶ್ಲಾಘಿಸಿದರು.

ಇಂತಹ ನಾಣ್ಯ ಮತ್ತು ನೋಟುಗಳನ್ನು ಸಂಗ್ರಹಿಸುವುದು ಸುಲಭದ ಕೆಲಸವಲ್ಲ. ಇದೇ ಪ್ರಥಮ ಬಾರಿಗೆ ಇಷ್ಟೊಂದು ದೇಶ, ವಿದೇಶದ ನಾಣ್ಯ ಮತ್ತು ನೋಟುಗಳನ್ನು ನೋಡಿದ್ದು ಎಂದು ಹೇಳಿದರು.

ಜಿ.ಪಂ.ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕಾಂತಿ ಬೆಳ್ಯಪ್ಪ ಮಾತನಾಡಿ, ನಾಣ್ಯ ಮತ್ತು ನೋಟುಗಳ ಪ್ರದರ್ಶನ ಒಂದು ವಿಶಿಷ್ಟವಾದ ಕಾರ್ಯಕ್ರಮವಾಗಿದೆ. ಇಂತಹ ಕಾರ್ಯಗಳಿಗೆ ಸಾಕಷ್ಟು ತಾಳ್ಮೆ ಮತ್ತು ಸಹನೆ ಬೇಕಾಗುತ್ತದೆ ಎಂದು ಹೇಳಿದರು.

ಜಿ.ಪಂ.ಅಧ್ಯಕ್ಷರಾದ ಶಾಂತೆಯಂಡ ರವಿ ಕುಶಾಲಪ್ಪ, ನಾಣ್ಯ-ನೋಟುಗಳ ಕುರಿತ ಕಿರುಹೊತ್ತಿಗೆ ಬಿಡುಗಡೆ ಮಾಡಿದರು.

ನಾಣ್ಯ ಮತ್ತು ನೋಟುಗಳ ಸಂಗ್ರಹಗಾರ ಪಿ.ಕೆ.ಕೇಶವಮೂರ್ತಿ ಮಾತನಾಡಿ, ನಾಣ್ಯ ಮತ್ತು ನೋಟುಗಳನ್ನು ಸಂಗ್ರಹಿಸಲು ಸಾಕಷ್ಟು ಶ್ರಮಿಸಲಾಗಿದೆ. 20 ವರ್ಷಗಳಿಂದ ರಾಜ್ಯದ್ಯಂತ ಪ್ರವಾಸ ಮಾಡಿ ಸಂಗ್ರಹಿಸಿದ ನಾಣ್ಯ ಮತ್ತು ನೋಟುಗಳನ್ನು ಸಾರ್ವಜನಿಕರಿಗೆ ವೀಕ್ಷಿಸಲು ಇಂತಹ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದರು.

ನಗರಸಭೆ ಆಯುಕ್ತ ಶಶಿಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವಿನೋದ್‌ಚಂದ್ರ, ಓಂಕಾರೇಶ್ವರ ದೇವಸ್ಥಾನ ಸಮಿತಿಯ ರಮೇಶ್ ಹೊಳ್ಳ, ಬಿಎಸ್‌ಎನ್‌ಎಲ್‌ನ ಜನಾರ್ಧನ ನಾಯಕ್, ರಂಜಿತ್ ಹೆಗ್ಡೆ, ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ, ಕಾಲೇಜಿನ ಉಪ ಪ್ರಾಂಶುಪಾಲ ಗುರುರಾಜ್, ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ಎಲ್.ಸಿ.ರಘು ಮತ್ತಿತರರು ಪಾಲ್ಗೊಂಡಿದ್ದರು.

ನಾಣ್ಯ ಮತ್ತು ನೋಟು ಸಂಗ್ರಹಗಾರ ಪಿ.ಕೆ.ಕೇಶವಮೂರ್ತಿ ಮತ್ತು ಕೇಶವಮೂರ್ತಿ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT