ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಲಕ್ಷ್ಯ: ವರ್ಷ ತುಂಬುವ ಮೊದಲೇ ರಸ್ತೆಗೆ ತೇಪೆ

Last Updated 20 ಫೆಬ್ರುವರಿ 2012, 5:50 IST
ಅಕ್ಷರ ಗಾತ್ರ

ದೇವದುರ್ಗ: ಪಟ್ಟಣದ ಕೊಪ್ಪರ ಕ್ರಾಸ್‌ದಿಂದ ಕೊಪ್ಪರ ಗ್ರಾಮದ ನರಸಿಂಹ ದೇವಸ್ಥಾನದವರೆಗೂ ಸುಮಾರು 12 ಕಿ.ಮೀ. ದೂರದ ರಸ್ತೆ ಅಭಿವೃದ್ಧಿಗಾಗಿ ಕಳೆದ ವರ್ಷ ಲೋಕೋಪಯೋಗಿ ಇಲಾಖೆಯ ಅನುಷ್ಠಾನದಲ್ಲಿ ನಡೆದ ಸುಮಾರು ಎರಡು ಕೋಟಿ ರೂಪಾಯಿಯ ರಸ್ತೆ ಕಾಮಗಾರಿ ಮುಗಿದು ವರ್ಷ ತುಂಬುವಷ್ಟರಲ್ಲಿಯೇ ಹದಗೆಟ್ಟಿರುವುದು ಇಲಾಖೆಯ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ.

ದೇವದುರ್ಗ ಪಟ್ಟಣದಿಂದ ಸುಮಾರು 24 ಕಿ.ಮೀ. ದೂರದ ಗೂಗಲ್ ಗ್ರಾಮದವರೆಗೂ ಮುಖ್ಯ ರಸ್ತೆ ಇದ್ದು, ಇದೇ ರಸ್ತೆಯನ್ನು 12 ಕಿ.ಮೀ. ದೂರದವರೆಗೂ ಅಭಿವೃದ್ಧಿ ಪಡಿಸಲು ಕಳೆದ ಎರಡು ವರ್ಷದ ಹಿಂದೆ ಟೆಂಡರ್ ಕರೆದು ಗುತ್ತೇಗೆದಾರರಿಗೆ ನೀಡಲಾಗಿದ್ದರೂ ಆರಂಭದಲ್ಲಿ ಕಳಪೆ ಕಾಮಗಾರಿ ನಡೆದಿದೆ ಎಂದು ಆರೋಪಿಸಿ ಕೆಲವು ಸಂಘಟನೆಗಳ ಮುಖಂಡರು ಸಂಬಂಧಿಸಿದ ಇಲಾಖೆಗೆ ಒತ್ತಾಯಿಸಿದರೂ ಕ್ರಮಕ್ಕೆ ಮುಂದಾಗಿರಲಿಲ್ಲ.

ಅದರ ಪರಿಣಾಮವಾಗಿ ಈಗ ಅದೇ ಗುತ್ತೇಗೆದಾರರು ಕಾಮಗಾರಿ ಮುಗಿದು ಆರು ತಿಂಗಳಲ್ಲಿ ಕಳಪೆ ಕಾಮಗಾರಿಯಿಂದ ರಸ್ತೆ ಹದಗೆಟ್ಟು ಡಾಂಬರ್ ಕಿತ್ತುಹೋದ ಪರಿಣಾಮ ರಸ್ತೆಗೆ ತೇಪೆ ಹಾಕಲು ಮುಂದಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT