ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಪೂರೈಕೆಗೆ ಸಮಯ ನಿಗದಿ ಮಾಡಿ

Last Updated 8 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ವಿದ್ಯಾಮಾನ್ಯ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಗಣಿಸಿದ ಬಿಬಿಎಂಪಿ ನೀರು ಸರಬರಾಜು ಮಾಡಲು ಪ್ರಾರಂಭಿಸಿರುವುದು ಶ್ಲಾಘನೀಯ. ಆದರೆ ದಿನ ಮತ್ತು ವೇಳೆ ನಿಗದಿಪಡಿಸಿಲ್ಲ.

ಕೆಲವೊಮ್ಮೆ ಮಧ್ಯಾಹ್ನ 1.30ಕ್ಕೆ ನೀರು ಬಿಡುತ್ತಾರೆ. ಈ ಹೊತ್ತು ಮನೆಗಳಲ್ಲಿ ಯಾರೂ ಇರುವುದಿಲ್ಲ. ಮಹಿಳೆಯರು, ಪುರುಷರು ಕೆಲಸಕ್ಕೆ ಹೋಗಿರುತ್ತಾರೆ. ಅದೃಷ್ಟವಶಾತ್ ಮನೆಯಲ್ಲೇ ಇರುವವರು (ಒಂದೆರಡು ಮನೆಯವರು) ಮಾತ್ರ ಒಂದು ಬೀದಿಯಲ್ಲಿ ನೀರು ಪಡೆಯಬಹುದಾಗಿದೆ. ಆದುದರಿಂದ ನೀರಿನ ಸರಬರಾಜಿಗೆ ಸಮಯ ಗೊತ್ತುಪಡಿಸುವುದು ಅಗತ್ಯ. ಜೊತೆಗೆ ಪ್ರತಿ ಭಾನುವಾರ ಬೆಳಿಗ್ಗೆ 8ರಿಂದ ಮಧ್ಯಾಹ್ನ 2 ಗಂಟೆವರೆಗೆ ನೀರು ಪೂರೈಸಿದಲ್ಲಿ ಎಲ್ಲಾ ಜನರಿಗೂ ಅನುಕೂಲವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT