ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಜೀರಿಯಾದಲ್ಲಿ ಜನಾಂಗೀಯ ಕಲಹ: 52 ಸಾವು

Last Updated 1 ಜನವರಿ 2012, 19:30 IST
ಅಕ್ಷರ ಗಾತ್ರ

ಅಬುಜಾ (ಪಿಟಿಐ): ನೈಜೀರಿಯಾದ ಆಗ್ನೇಯ ಭಾಗದ ಎಬೊನಾಯ್‌ನಲ್ಲಿ ಎರಡು ಪ್ರಬಲ ಪಂಗಡಗಳ ನಡುವೆ ನಡೆದ ಕಲಹದಲ್ಲಿ ಸುಮಾರು 52 ಮಂದಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಗಲಭೆ ವ್ಯಾಪಿಸದಂತೆ ತಡೆಯಲು ಪ್ರಧಾನಿ ಗುಡ್‌ಲಕ್ ಜೋನಾಥನ್ ಮುನ್ನೆಚ್ಚರಿಕೆ ಕ್ರಮ ವಾಗಿ, ನಾಲ್ಕು ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

ಎಬೊಬಾಯ್‌ನ ಎಜ್ಜಾ ಮತ್ತು ಎಜಿಲೊ ಪಂಗಡಗಳ ನಡುವೆ 2008ರಲ್ಲಿ ಜನಾಂಗೀಯ ಕಲಹ ಆರಂಭವಾಗಿದ್ದು, 2010ರಲ್ಲಿ ಅದು ನಿಯಂತ್ರಣಕ್ಕೆ ಬಾರದಷ್ಟು ತೀವ್ರಗೊಂಡಿತ್ತು. ಶನಿವಾರದ ಗಲಭೆಯಲ್ಲಿ ಪೊಲೀಸ್ ಅಧಿಕಾರಿಗಳು, ಮಹಿಳೆಯರು ಮತ್ತು ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಗಲಭೆಯ ವೇಳೆ ಸಂಪ್ರದಾಯವಾದಿ `ಬೋಕೊ ಹರಾಮ್~ ಮುಸ್ಲಿಂ ಸಂಘಟನೆಯ ಸದಸ್ಯರು ಸಹ ದಾಳಿ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಬೋರ್ನೊ, ಯೋಬೆ, ಪ್ಲೇಟುವಾ ಮತ್ತು ನಿಗರ್ ಪ್ರಾಂತ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಎಲ್ಲ ಜಲ ಹಾಗೂ ಭೂಮಾರ್ಗ ಮುಚ್ಚಲು ಆದೇಶಿಸಲಾಗಿದೆ.

`ಕ್ಯಾನ್ಸರ್‌ನಂತೆ ಜನರನ್ನು ಬಲಿ ತೆಗೆದುಕೊಳ್ಳುತ್ತಿರುವ `ಬೋಕೊ ಹರಾಮ್~ ರಕ್ತ ಕ್ರಾಂತಿಯ ಮೂಲಕ ಇಸ್ಲಾಂ ಆಡಳಿತ ಸ್ಥಾಪಿಸಲು ಪ್ರಯತ್ನಿಸುತ್ತಿದೆ~ ಎಂದು ಪ್ರಧಾನಿ ಆರೋಪಿಸಿದ್ದಾರೆ. ಕ್ರಿಸ್‌ಮಸ್ ದಿನ ನಡೆದ ಬಾಂಬ್ ದಾಳಿಯಲ್ಲಿ 44 ಜನ ಸಾವನ್ನಪ್ಪಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT