ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಟೆಯಲ್ಲಿ ನಿರುತ್ಸಾಹ

Last Updated 25 ಜನವರಿ 2011, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಮಾರುಕಟ್ಟೆಯ ನಿರೀಕ್ಷೆಗೆ ಅನುಗುಣವಾಗಿಯೇ ಆರ್‌ಬಿಐ, ಅಲ್ಪಾವಧಿ ಬಡ್ಡಿ ದರಗಳನ್ನು ಹೆಚ್ಚಿಸಿ, ಹಣದುಬ್ಬರ ಏರಿಕೆ ಮತ್ತು ಚಾಲ್ತಿ ಖಾತೆ ಕೊರತೆ ಬಗ್ಗೆ ಆತಂಕ ವ್ಯಕ್ತಪಡಿಸಿರುವುದು ಮುಂಬೈ ಷೇರುಪೇಟೆಯ ಬುಧವಾರದ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿತು.

ಸಂವೇದಿ ಸೂಚ್ಯಂಕವು 182 ಅಂಶಗಳನ್ನು ಕಳೆದುಕೊಂಡು 19 ಸಾವಿರ ಅಂಶಗಳಿಗಿಂತ ಕೆಳಗೆ (18,969) ಇಳಿಯಿತು. ಬಡ್ಡಿ ದರಕ್ಕೆ ಸಂಬಂಧಿಸಿದ ಷೇರುಗಳಾದ  ಬ್ಯಾಂಕ್, ರಿಯಾಲ್ಟಿ, ಆಟೊಮೊಬೈಲ್ ಸೇರಿದಂತೆ ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಬಳಕೆ ಸರಕು ತಯಾರಿಕಾ ಷೇರುಗಳು ಮಾರಾಟ ಒತ್ತಡಕ್ಕೆ ಗುರಿಯಾಗಿ ನಷ್ಟ ಅನುಭವಿಸಿದವು.

ಚಾಲ್ತಿ ಖಾತೆ ಕೊರತೆ ಮತ್ತು ಬ್ಯಾಂಕ್ ಠೇವಣಿಗಳು ಹಾಗೂ ಸಾಲ ನೀಡಿಕೆ ಹೆಚ್ಚಳದ ಮಧ್ಯೆ ಹೆಚ್ಚಲಿರುವ ಅಂತರದ ಬಗ್ಗೆ  ರಿಸರ್ವ್ ಬ್ಯಾಂಕ್ ಗವರ್ನರ್ ಸುಬ್ಬರಾವ್ ವ್ಯಕ್ತಪಡಿಸಿದ ಕಳವಳವು ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT