ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾಕೇಟ್‌ಗಳಲ್ಲಿ ನೀರಾ ಮಾರಾಟಕ್ಕೆ ಚಿಂತನೆ

Last Updated 19 ಡಿಸೆಂಬರ್ 2013, 9:25 IST
ಅಕ್ಷರ ಗಾತ್ರ

ದಾವಣಗೆರೆ: ಪ್ಯಾಕೇಟ್‌ಗಳಲ್ಲಿ ನೀರಾ ಮಾರಾಟ ಮಾಡಲು ಶೀಘ್ರ ಅನುಮತಿ ನೀಡಲಾಗುವುದು ಎಂದು ತೋಟಗಾರಿಕೆ ಮತ್ತು ಎಪಿಎಂಸಿ ಸಚಿವ ಶಾಮನೂರು ಶಿವಶಂಕರಪ್ಪ ತಿಳಿಸಿದರು.

ಜಿಲ್ಲಾ ಪಂಚಾಯ್ತಿ, ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ಮಂಗಳವಾರ ನಗರದ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ನಡೆದ ತೆಂಗಿನ ಮರ ಸಂರಕ್ಷಣೆ ಮತ್ತು ಮರ ಹತ್ತುವ ಕೌಶಲ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತಿಚಿನ ದಿನಗಳಲ್ಲಿ ತೆಂಗು ಬೆಳೆ ವಿವಿಧ ರೋಗಗಳಿಗೆ ತುತ್ತಾಗುತ್ತಿರುವುದು ಸಾಮಾನ್ಯ ವಾಗಿದೆ. ತೆಂಗು ಪೋಷಣೆ  ಹಾಗೂ ತೆಂಗು ಬೆಳೆಯ ರೋಗಗಳ ನಿವಾರಣೆಗೆ ಸಂಬಂಧಿಸಿದಂತೆ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ಬೆಳೆಗಾರರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು’ ಎಂದು  ಕಿವಿಮಾತು ಹೇಳಿದರು.

‘ತೋಟಗಾರಿಕೆ ಇಲಾಖೆಯಲ್ಲಿ ಬೆಳೆಗಳ ರಕ್ಷಣೆ ಮತ್ತು ರೋಗಗಳ ನಿವಾರಣೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಲಭ್ಯ ಹಣವಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷತೆಯಿಂದಾಗಿ ಅದು ಸಕಾಲದಲ್ಲಿ ಸದುಪಯೋಗವಾಗುತ್ತಿಲ್ಲ. ಅಧಿಕಾರಿಗಳು ತೋಟಗಾರಿಕೆ ಇಲಾಖೆಯಲ್ಲಿನ ವಿವಿಧ ಯೋಜನೆಗಳ ಬಗ್ಗೆ ಬೆಳೆಗಾರರಲ್ಲಿ ಅರಿವು ಮೂಡಿಸುವ ಕಾರ್ಯಾಗಾರವನ್ನು ಆಗಾಗ ಏರ್ಪಡಿಸಬೇಕು. ಅದರಿಂದ ಇಲಾಖೆಗೂ ಉತ್ತಮ ಹೆಸರು ಬರುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ತೆಂಗಿನ ಮರ ಹತ್ತುವುದು ಒಂದು ಕಲೆ. ಆದರೆ, ಮರ ಹತ್ತುವವರು ತುಂಬಾ ಜಾಗೃತಿ ವಹಿಸಬೇಕಾಗುತ್ತದೆ. ಆಕಸ್ಮಿಕವಾಗಿ ಅಪಘಾತವಾಗುವ ಸಾಧ್ಯತೆ ಇರುತ್ತದೆ. ತರಬೇತುದಾರರ ಮಾರ್ಗದರ್ಶನ ಪಡೆದು, ಅವರ ಸಲಹೆ– ಸೂಚನೆಯಂತೆ ಸೂಕ್ತ ರಕ್ಷಣೆಯೊಂದಿಗೆ ಮರ ಹತ್ತಬೇಕು. ಅಧಿಕಾರಿಗಳು ಸಹ ಈ ನಿಟ್ಟಿನಲ್ಲಿ ಸಾಕಷ್ಟು ಜಾಗೃತಿ ವಹಿಸಬೇಕು ಎಂದು ಸಲಹೆ ನೀಡಿದರು.

ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿ ದೇವರಾಜ್‌ ಮಾತನಾಡಿ, ‘ತರಬೇತಿ ಕಾರ್ಯಾಗಾರವು ಡಿ.21ರ ವರೆಗೆ ನಡೆಯಲಿದ್ದು, ಈ ಅವಧಿಯಲ್ಲಿ ತೆಂಗಿನ ಮರ ಹತ್ತುವ ತರಬೇತಿಯೊಂದಿಗೆ ತೆಂಗಿನ ಮರ ಪೋಷಣೆ, ಅದಕ್ಕೆ ತಗಲುವ ರೋಗಗಳ ನಿವಾರಣೆಗೆ ಕ್ರಮ ಕೈಗೊಳ್ಳುವ ವಿಧಾನ ಕುರಿತು ಸಮಗ್ರ ಮಾಹಿತಿಯನ್ನು ಮರ ಹತ್ತುವವರಿಗೆ ನೀಡಲಾಗುತ್ತದೆ. ಇದುವರೆಗೆ ಗ್ರಾಮೀಣ ಪ್ರದೇಶದ ಸುಮಾರು 80ಕ್ಕೂ ಅಧಿಕ ಜನರಿಗೆ ತೆಂಗಿನ ಮರ ಹತ್ತುವ ತರಬೇತಿ ನೀಡಲಾಗಿದೆ. ಈ ಬಾರಿಯೂ  80 ಜನರಿಗೆ ತರಬೇತಿ
ನೀಡಲಾಗುತ್ತಿದೆ. ಈಗಾಗಲೇ ತರಬೇತಿಗೆ ಆಯ್ಕೆಯಾದ ಎಲ್ಲರಿಗೂ ಈ ಬಗ್ಗೆ ಸಾಕಷ್ಟು ಮಾಹಿತಿ ನೀಡಲಾಗಿದೆ’ ಎಂದರು.

ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿ ದೇವರಾಜ್‌, ತೋಟಗಾರಿಕೆ ಇಲಾಖೆ ನಿರ್ದೇಶಕ ಉಮೇಶ್‌ ಶಂಕರ್‌ ಮಿರ್ಜಿ, ಸಹಾಯಕ ನಿರ್ದೇಶಕ ಮನ್ಸೂರ್‌ ಸಯದ್‌ ಬಾಷಾ, ಮಲ್ಲಿಕಾರ್ಜುನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT