ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದ್‌ಗೆ ವಿವಿಧ ಸಂಘಟನೆಗಳ ಬೆಂಬಲ

Last Updated 13 ಫೆಬ್ರುವರಿ 2011, 9:20 IST
ಅಕ್ಷರ ಗಾತ್ರ

ಕೋಲಾರ: ಬಂದ್‌ಗೆ ಜಿಲ್ಲೆಯ ಹಲವು ಸಂಘ-ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿವೆ. ಜಿಲ್ಲಾ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಸಂಚಾಲಕ ಜೆ.ಜಿ.ನಾಗರಾಜ್, ಜಿಲ್ಲಾ ತಿಗಳ ಜನಾಂಗದ ಸಮನ್ವಯ ಸಮಿತಿಯ ಅಧ್ಯಕ್ಷ ಎಂ.ಉದಯಕುಮಾರ್, ಜಿಲ್ಲಾ ಹಿಂದುಳಿದ ವರ್ಗಗಳ ಸಮಿತಿಗೆ ಸೇರಿರುವ ಬೆಸ್ತರು, ತಿಗಳರು, ಯಾದವರು, ಕುರುಬರು, ಉಪ್ಪಾರರು, ಬುಡಗ ಜಂಗಮರು, ಕುಂಬಾರರು, ವ್ಯಾಧರು, ಈಡಿಗರು, ಗಾಣಿಗರು, ಮಡಿವಾಳರು, ಗೋಂಧಳಿಯರು, ರಜಪೂತ ಕ್ಷತ್ರಿಯರು, ದರ್ಜಿಗಳು, ಬಲಜಿಗರು, ದೇವಾಂಗದವರು, ನೇಯ್ಗೆಯವರು, ರಾಜಕ್ಷತ್ರಿಯರು, ಬುಡಬುಡಕಿಯವರು, ವಿಶ್ವಕರ್ಮ ಮತ್ತು ಸವಿತಾ ಸಮಾಜದವರೆಲ್ಲರೂ ಬಂದ್‌ಗೆ ಬೆಂಬಲ ನೀಡಿದ್ದಾರೆ ಎಂದು ಸಮಿತಿಯ ಪ್ರಧಾನ ಕಾಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಗರ ಕಾರು ಚಾಲಕರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಚಿನ್ನಾಪುರ ವೆಂಕಟೇಶ್, ಲಾರಿ ಮಾಲಿಕರ ಸಂಘದ ಅಧ್ಯಕ್ಷ ಎ.ಕುಮಾರ್, ಸೊಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಘಟಕದ ಅಧ್ಯಕ್ಷ ಬಷೀರ್ ಅಹ್ಮದ್, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ಪ್ರೌಢಶಾಲೆಯ ಮುಖ್ಯಶಿಕ್ಷಕಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ವಿ.ನಾರಾಯಣಸ್ವಾಮಿ ಪ್ರಕಟಣೆ ನೀಡಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಬೆಂಬಂದ್‌ಗೆ ಗೌಡರಬೆಂಬಲ :ಬಲಶಾಶ್ವತ ನೀರಾವರಿಗಾಗಿ ಆಗ್ರಹಿಸಿ ಫೆ.14ರಂದು ನಡೆಯಲಿರುವ ಕೋಲಾರ ಬಂದ್‌ಗೆ ಮಾಜಿ ಸಚಿವ, ಜೆಡಿಎಸ್ ಪ್ರಮುಖರಾದ ಕೆ.ಶ್ರೀನಿವಾಸಗೌಡರು ಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ನಗರದ ತಮ್ಮ ನಿವಾಸದಲ್ಲಿ ಶನಿವಾರ ಸುದ್ದಿಗಾರರೊಡನೆ ಮಾತನಾಡಿದ ಅವರು, ಶಾಶ್ವತ ನೀರಾವರಿ ಸೌಲಭ್ಯಕ್ಕಾಗಿ ಹಲವು ವರ್ಷಗಳಿಂದ ಆಗ್ರಹ, ಧರಣಿಗಳು ನಡೆಯುತ್ತಿದ್ದರೂ ಪ್ರಯೋಜನವಾಗಿಲ್ಲ. ಬಂದ್ ಮೂಲಕವಾದರೂ ಹೋರಾಟ ಗಟ್ಟಿಯಾಗಲಿ. ಎಲ್ಲರೂ ಭೇದಗಳನ್ನು ಮರೆತುಹೋರಾಟದಲ್ಲಿ ಪಾಲ್ಗೊಳ್ಳುವಂತಾಗಲಿ ಎಂದು ಆಶಿಸಿದರು. ಮುಖಂಡರಾದ ಎಸ್.ಬಿ.ಮುನಿವೆಂಕಟಪ್ಪ, ಸಿ.ಮುನಿಯಪ್ಪ, ಮುಬಾರಕ್, ಚೆನ್ನವೀರಯ್ಯ ಉಪಸ್ಥಿತರಿದ್ದರು.

ಬಂದ್‌ಗೆ ಸುದರ್ಶನ್ ಕರೆ
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಭವಿಷ್ಯದ ಸಲುವಾಗಿ ಶಾಶ್ವತ ನೀರಾವರಿಗಾಗಿ ನಡೆಯುತ್ತಿರುವ ಫೆ.14 ರ ಬಂದ್‌ಗೆ ಪ್ರತಿಯೊಬ್ಬರೂ ಬೆಂಬಲ ನೀಡುವ ಮೂಲಕ ಜನಾಂದೋಲನವನ್ನು ರೂಪಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ವಿ.ಆರ್.ಸುದರ್ಶನ್ ಮನವಿ ಮಾಡಿದ್ದಾರೆ.

ವಕೀಲರ ಬೆಂಬಲ
ಶಾಶ್ವತ ನೀರಾವರಿ ಯೋಜನೆ ಜಾರಿಗೆ ಆಗ್ರಹಿಸಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಫೆ.14ರಂದು ನಡೆಯಲಿರುವ ಬಂದ್‌ಗೆ ಜಿಲ್ಲಾ ವಕೀಲರ ಸಂಘ ಪೂರ್ಣ ಬೆಂಬಲ ನೀಡಲಿದೆ ಎಂದು ಸಂಘದ ಅಧ್ಯಕ್ಷ ಎಂ.ಅರುಣಕುಮಾರ್ ತಿಳಿಸಿದ್ದಾರೆ.

ಬಂದ್‌ಗೆ ಕಾಂಗ್ರೆಸ್ ಬೆಂಬಲ
ಶಾಶ್ವತ ನೀರಾವರಿಗಾಗಿ ಆಗ್ರಹಿಸಿ ಫೆ.14ರಂದು ಜಿಲ್ಲೆಯಲ್ಲಿ ನಡೆಯಲಿರುವ ಬಂದ್‌ಗೆ ಪೂರ್ಣಬೆಂಬಲ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಎಲ್.ಅನಿಲ್‌ಕುಮಾರ್ ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಮಿತಿಮೀರುತ್ತಿದೆ. ಈ ಹಿನ್ನೆಲೆಯಲ್ಲಿ ಶಾಶ್ವತ ಪರಿಹಾರಕ್ಕಾಗಿ ಆಗ್ರಹಿಸುವ ಸಲುವಾಗಿ ಎಲ್ಲ ಪಕ್ಷ, ಸಂಘಟನೆಗಳೂ ಒಗ್ಗೂಡಿ ಹೋರಾಟಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಜಿಪಂ ಸದಸ್ಯ ಬಿ.ವಿ.ಹರೀಶ್, ನಗರಸಭೆ ಅಧ್ಯಕ್ಷೆ ನಾಜಿಯಾ, ಸದಸ್ಯರಾಜು, ರಘು, ರಮೇಶ, ಸಲಾವುದ್ದೀನ್ ಬಾಬು, ಜಿಪಂ ಮಾಜಿ ಅದ್ಯಕ್ಷ ವಿ.ವೆಂಕಟಮುನಿಯಪ್ಪ, ಊರುಬಾಗಿಲು ಶ್ರೀನಿವಾಸ್, ಗೋಪಾಲಗೌಡ, ಬೆಳಗಾನಹಳ್ಳಿಮುನಿವೆಂಕಟಪ್ಪ ಉಪಸ್ಥಿತರಿದ್ದರು.

ಬಂದ್‌ಗೆ ಬೆಂಬಲವಿಲ್ಲ: ಬಿಜೆಪಿ
ಕೋಲಾರ: ಫೆ.14ರಂದು ನಡೆಯಲಿರುವ ಬಂದ್‌ಗೆ ಬಿಜೆಪಿ ಸಹಮತವಿಲ್ಲ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಲಕ್ಷ್ಮಯ್ಯ ತಿಳಿಸಿದ್ದಾರೆ. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ಪಾಲ್ಗೊಳ್ಳುವಿಕೆಯೂ ಬಂದ್ ನಿರ್ಧಾರದಲ್ಲಿ ಕಂಡು ಬರುತ್ತಿಲ್ಲ. ಅಲ್ಲದೆ, ನೀರಾವರಿ ಸಮಸ್ಯೆ ಪರಿಹರಿಸಲು ಬಿಜೆಪಿ ನೇತೃತ್ವದ ಸರ್ಕಾರ ಹಲವುಯೋಜನೆಗನ್ನು ಕೈಗೆತ್ತಿಕೊಂಡಿದೆ. ಹೀಗಾಗಿ ಬಂದ್‌ಗೆ ಪಕ್ಷದ ಸಹಮತ, ಸಹಕಾರವಿಲ್ಲ ಎಂದಿದ್ದಾರೆ.

ಜಿಲ್ಲೆಗೆ ಶಾಶ್ವತ ನೀರಾವರಿ ಅಗತ್ಯವಿದೆ ಎಂಬುದನ್ನು ಪಕ್ಷವೂ ಒಪ್ಪುತ್ತದೆ. ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವಲ್ಲಿ ಎಲ್ಲ ಪಕ್ಷಗಳೂ, ಸರ್ಕಾರಗಳೂ ವಿಫಲವಾಗಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ನಿಲುವಿಗೆ ಖಂಡನೆ
ಕೋಲಾರ: ಶಾಶ್ವತ ನೀರಾವರಿಗಾಗಿ ಆಗ್ರಹಿಸಿ ಫೆ.14ರಂದು ನಡೆಯಲಿರುವ ಕೋಲಾರ ಬಂದ್‌ಗೆ ಸಹಮತವಿಲ್ಲ ಎಂದಿರುವ ಬಿಜೆಪಿಯ ನಿಲುವನ್ನು ಕರ್ನಾಟಕ ರೈತ ಹಕ್ಕುಗಳ ಹೋರಾಟ ಸಮಿತಿ ಖಂಡಿಸಿದೆ.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಲಕ್ಷ್ಮಯ್ಯನವರು ಹೋರಾಟವನ್ನು ಹತ್ತಿಕ್ಕಲು ಪಿತೂರಿಗಳನ್ನು ನಡೆಸುತ್ತಿದ್ದಾರೆ. ಕೋಮುವಾದಿಯಾದ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ರಾಜ್ಯದಲ್ಲಿ ಹೋರಾಟಗಳನ್ನು ಹತ್ತಿಕ್ಕುವ ಯತ್ನಗಳನ್ನು ನಡೆಸುತ್ತಲೇ ಇದೆ. 

 ಇದೀಗ ಜಿಲ್ಲೆಯಲ್ಲಿ ಶಾಶ್ವತ ನೀರಾವರಿಗೆ ಆಗ್ರಹಿಸಿ ನಡೆಸಲಾಗುತ್ತಿರುವ ಬಂದ್‌ಗೆ ಬೆಂಬಲ ನೀಡದಿರುವ ಪಕ್ಷದ ನಿಲುವು ಖಂಡನೀಯ ಎಂದು ಸಮಿತಿಯಜಿಲ್ಲಾ ಘಟಕದ ಅಧ್ಯಕ್ಷ ಅಬ್ಬಣಿ ಶಿವಪ್ಪ ಅಭಿಪ್ರಾಯಪಟ್ಟಿದ್ದಾರೆ.

ಜಯಕರ್ನಾಟಕ ಸಂಘಟನೆ
ಸಂಘಟನೆಯ ಮಹಮದ್ ಅಲಿ, ಜಿಲ್ಲಾ ಸವಿತಾ ಸಮಾಜದ ಶ್ರೀನಿವಾಸ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆಯ ವೆಂಕಟಾಪು ಸತ್ಯಂ, ವೆಂಕಟೇಶ್, ಆಂಜಿನಪ್ಪ, ರವಿ, ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಜಿಲ್ಲಾ ಶಾಖೆಯ ಪ್ರಧಾನ ಕಾರ್ಯದರ್ಶಿ ಅಮರನಾರಾಯಣ ಮತ್ತು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿ ಪ್ರಕಟಣೆ ನೀಡಿದೆ.

ಕೆಜಿಎಫ್: ನಗರಸಭೆ  ಬೆಂಬಲ
ಕೆಜಿಎಫ್: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಜಾರಿಗೆ ಒತ್ತಾಯಿಸಿ ಸೋಮವಾರ ನಡೆಯಲಿರುವ ಅವಳಿ ಜಿಲ್ಲೆ ಬಂದ್‌ಗೆ ಸಂಪೂರ್ಣ ಸಹಕಾರ ನೀಡಲು ರಾಬರ್ಟಸನ್‌ಪೇಟೆ ನಗರಸಭೆಯಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.

ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ನಗರದಲ್ಲಿ ಸಾರ್ವಜನಿಕರು ಅನುಭವಿಸುತ್ತಿರುವ ನೀರಿನ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು. ಯರಗೋಳು ಯೋಜನೆಯ ಮೊದಲ ಹಂತದಲ್ಲಿ ಕೆಜಿಎಫ್ ನಗರಕ್ಕೆ ಕುಡಿಯುವ ನೀರನ್ನು ಒದಗಿಸಬೇಕು ಮತ್ತು ಬೇತಮಂಗಲ ಜಲಾಶಯದ ಹೂಳು ತೆಗೆಯುಯೋಜನೆಅನುಷ್ಠಾನಕ್ಕೆ ಬರುವಂತೆ ಸರ್ಕಾರಕ್ಕೆ ಒತ್ತಾಯ ತರಬೇಕೆಂದು ತೀರ್ಮಾನಿಸಲಾಯಿತು. ಎಂಜಿ ಮಾರುಕಟ್ಟೆಯ ವರ್ತಕರ ಸಂಘದ ಪ್ರತಿನಿಧಿಗಳು ಬಂದ್‌ಗೆ   ಬೆಂಬಲ ಸೂಚಿಸಿದರು. ನಗರಸಭೆ ಅಧ್ಯಕ್ಷ ದಯಾನಂದ್, ಉಪಾಧ್ಯಕ್ಷ ಎಂ.ಭಕ್ತವತ್ಸಲಂ, ರಾಜಗೋಪಾಲಗೌಡ,  ನಂಜುಂಡಪ್ಪ, ಬಸ್ ಮಾಲೀಕರ ಸಂಘದ ಅಧ್ಯಕ್ಷ ಶ್ರೀಧರ್‌ರಾಜ್, ಇಮ್ರಾನ್, ತಂಗತಾಯಿ  ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT