ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಧನದ ಚೌಕಟ್ಟು ಮೀರಿದ ಕಲಾಕೃತಿಗಳು

Last Updated 28 ನವೆಂಬರ್ 2011, 8:05 IST
ಅಕ್ಷರ ಗಾತ್ರ

ಬೆಳಗಾವಿ: ಒಂದೊಂದು ಚಿತ್ರಗಳೂ ಅವರ ಅನುಭವದ ಕಥಾನಕಗಳನ್ನು ಹೇಳುತ್ತಿದ್ದವು. ನಾಲ್ಕು ಗೋಡೆಗಳ ನಡುವೆ ಅವರು ಬಂಧಿಯಾಗಿದ್ದರೂ, ಮನದೊಳಗಿನ ಭಾವನೆಗಳ ಅಲೆಗಳು ಬಂಧನದ ಚೌಕಟ್ಟನ್ನು ಮೀರಿ, ಕಲಾಕೃತಿಗಳ ರೂಪ ಪಡೆದುಕೊಂಡಿದ್ದವು.

ನಗರದ ಚಿಂದೋಡಿ ಲೀಲಾ ರಂ ಮಂದಿರದಲ್ಲಿ ಹಮ್ಮಿಕೊಂಡಿರುವ `ಜೈಲಿನಿಂದ- ಜೈಲಿಗೆ ರಂಗಯಾತ್ರೆ~ ನಾಟಕೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವ ಕೈದಿಗಳು ರಚಿಸಿದ ಒಂದೊಂದು ಕಲಾಕೃತಿಗಳು ಮನಸ್ಸಿನ ಮೇಲೆ ಗಾಢ ಪ್ರಭಾವ ಬೀರುವಂತಿದೆ.

ಕೇಂದ್ರ ಕಾರಾಗೃಹದ ಕೈದಿಗಳು ರೂಪಿಸಿರುವ ಕಲಾಕೃತಿಗಳಲ್ಲಿ ಗಾಢ ಬಣ್ಣ ಬಳಕೆಯಾಗಿದ್ದು, ಇದು ಅವರ ಬದುಕಿನ ಗಾಢ ಅನುಭವದ ಕಥೆಗಳನ್ನು ಸಾರುತ್ತಿವೆ.

ಕೈದಿಗಳು ಅನುಭವಿಸಿದ ನೋವು, ಕಾಡುವ ರೂಪಗಳು, ಕಂಡ ಕನಸುಗಳು ಹಾಳೆಯ ಮೇಲೆ ಬಗೆ ಬಗೆಯ ಕಲಾಕೃತಿಗಳಾಗಿ ರೂಪ ಪಡೆದುಕೊಂಡಿವೆ.

ನಾಟಕೋತ್ಸವದಲ್ಲಿ ಮೈಸೂರು ಹಾಗೂ ಧಾರವಾಡ ಕೇಂದ್ರ ಕಾರಾಗೃಹದ ಕೈದಿಗಳು ರಚಿಸಿದ 19 ಕಲಾಕೃತಿಗಳು ಪ್ರದರ್ಶನಗೊಳ್ಳುತ್ತಿದೆ. `ಅಕ್ರಲಿಕ್~ ಬಣ್ಣದ ಮಾಧ್ಯಮದಲ್ಲಿ ಬಿಡಿಸಲಾಗಿರುವ ಕಲಾಕೃತಿಗಳು ನೋಡುಗರ ಮನಸ್ಸಿನ ಕದವನ್ನು ತಟ್ಟುತ್ತಿದೆ.

ಈಗಾಗಲೇ ಧಾರವಾಡದಲ್ಲಿ ಪ್ರದರ್ಶನಗೊಂಡಿರುವ ಈ ಅಪರೂ ದ ಕಲಾಕೃತಿಗಳು, ನಗರದಲ್ಲಿ ನವೆಂ ಬರ್ 29ರವರೆಗೆ ನಡೆಯುವ ನಾ ಟಕೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ.

ರಂಗ ಚಟುವಟಿಕೆ ಮೂಲಕ ಕೈದಿಗಳನ್ನು ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಮೈಸೂರಿನ `ಸಂಕಲ್ಪ~ ಸಂಸ್ಥೆಯು `ಜೈಲಿನಿಂದ- ಜೈಲಿಗೆ ರಂಗಯಾತ್ರೆ~ಯನ್ನು ಹಮ್ಮಿಕೊಳ್ಳುತ್ತ ಬಂದಿದೆ.

ಕೇಂದ್ರ ಕಾರಾಗೃಹದ ಕೈದಿಗಳಿಗೆ ರಂಗ ಕಾರ್ಯಾಗಾರವನ್ನು ಏರ್ಪಡಿಸಿ ಅವರನ್ನು ರಂಗ ಕಲಾವಿದರನ್ನಾಗಿ ರೂಪಿಸಲಾಗುತ್ತದೆ.

ಈ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವ ಕೈದಿಗಳನ್ನು ಮಾನಸಿಕವಾಗಿ, ಸೃಜನಶೀಲವಾಗಿ ಸಿದ್ಧಗೊಳಿಸಲು ಕಲೆಗಳ ಕುರಿತು ಮಾಹಿತಿ ನೀಡುತ್ತ ರೇಖಾ ಚಿತ್ರ, ಜಲವರ್ಣ ಚಿತ್ರಗಳನ್ನು ಬಿಡಿಸುವುದನ್ನು ಹೇಳಿಕೊಡಲಾಗುತ್ತದೆ. 

ಯೋಗ, ವ್ಯಾಯಾಮ, ಧ್ವನಿ ಚಟುವಟಿಕೆಗಳ ಜೊತೆಗೆ ಪೇಂಟಿಂಗ್ ಮಾಡುವ ಪೇಂಟಿಂಗ್ ಮಾಡಿಸುವ ಮೂಲಕ ಅವರ ಮನಸ್ಸು ತೆರೆದು ಕೊಳ್ಳುವಂತೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಕೈದಿಗಳು ರೂಪಿಸಿದ ಉತ್ತಮ ಕೃತಿಗಳನ್ನು `ಜೈಲಿನಿಂದ- ಜೈಲಿಗೆ ರಂಗಯಾತ್ರೆ~ ನಾಟಕೋತ್ಸವದಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತಿದೆ.

ಧಾರವಾಡ ಕೇಂದ್ರ ಕಾರಾಗೃಹದ ಎ.ಎಂ.ರಾಧಾಕೃಷ್ಣ ರೂಪಿಸಿ ಮನುಷ್ಯನ ಆಕೃತಿ ಗಮನ ಸೆಳೆಯುತ್ತದೆ.
ಎಡಗಣ್ಣಿನಲ್ಲಿ ರಕ್ತ ಕಣ್ಣೀರಾಗಿ ಹರಿಯುತ್ತಿದೆ. ಮೂಗಿನ ಆಕಾರವನ್ನು ಮೇಣದ ಬತ್ತಿಯನ್ನಾಗಿ ದಹಿಸಿ ಕೊಳ್ಳುತ್ತಿರುವ ಸಂಕೇತ ನೀಡಿದ್ದಾರೆ.

ಮೇಣದ ಬತ್ತಿನ ಬುಡದಲ್ಲೇ ಅನೇಕ ಮನುಷ್ಯ ರೂಪದ ಮೃಗಗಳ ಚಿತ್ರ ಬಿಡಿಸುವ ಮೂಲಕ ಮನುಷ್ಯನ ಮೃಗೀಯ ಸ್ವಭಾವವನ್ನು ಹೇಳುತ್ತಿದೆ.  ಇವರ ಇನ್ನೊಂದು ನಿಸರ್ಗದ ಚಿತ್ರದಲ್ಲೂ ಹಳ್ಳಿಯಲ್ಲಿ ಮರಗಳ್ಳರು ಮರಗಳನ್ನು ಕಡಿದು ಲಾರಿಯಲ್ಲಿ ಸಾಗಿಸುತ್ತಿರುವ ದೃಶ್ಯವನ್ನು ಕಟ್ಟಿಕೊಟ್ಟಿದ್ದಾರೆ.


ಪ್ರತಿಭಾ ಕಾರಂಜಿ:
ಬೆಳಗಾವಿ:
ಈಚೆಗೆ ಕಣಬರ್ಗಿಯ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ನಗರ ವಲಯದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಬಾಪೂಜಿ ಪ್ರಾಥಮಿಕ ಕನ್ನಡ ಕಾನ್ವೆಂಟ್ ಶಾಲೆಯ ವಿದ್ಯಾರ್ಥಿಗಳು ವಿವಿಧ ಕಾರ್ಯಕ್ರಮಗಳಲ್ಲಿ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT