ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯೂಟಿಷಿಯನ್‌ಗಳಿಗೆ ಅಪರೂಪದ ಸ್ಪರ್ಧೆ

Last Updated 9 ಜುಲೈ 2012, 19:30 IST
ಅಕ್ಷರ ಗಾತ್ರ

ಹೆಂಗಳೆಯರಿಗೆ ಅವರ ಹೆರಳೇ ಭೂಷಣ. ಆ ಹೆರಳಿಗೆ ಆಧುನಿಕ ಸ್ಪರ್ಶ ನೀಡಿದರೆ ನೋಡುಗರಿಗೂ ಅಚ್ಚುಮೆಚ್ಚು. ಇನ್ನು ಶೃಂಗಾರದಲ್ಲಿ ಹೆಣ್ಣಿಗೆ ಸಮನಾರಿದ್ದಾರೆ? ಅವಳ ಶೃಂಗಾರಕ್ಕೆ ಮನಸೋಲದವರೇ ಇಲ್ಲ. ಅಂತಹವಳಿಗೆ ಕೊಂಚ ಅಪರೂಪವೆಂಬಂತೆ ಆಧುನಿಕತೆಯ ಟಚ್ ನೀಡಿದರೆ, ಅವಳು ಎಲ್ಲರ ಮನಸೆಳೆಯುತ್ತಾಳೆ.

ಹೀಗೆ ಸೌಂದರ್ಯ, ಶೃಂಗಾರದಿಂದ ಗಮನ ಸೆಳೆಯುವ ಅವಳನ್ನು ಸಿಂಗರಿಸುವ ಸೌಂದರ್ಯ ತಜ್ಞೆಯರಿಗೆ ಒಂದು ವೇದಿಕೆ ಸೃಷ್ಟಿಯಾದರೆ, ಅವರನ್ನು ಜನರು ಗುರುತಿಸುವಂತಾದರೆ, ಅವರಿಗೂ ಇಂದು ಪ್ರಶಸ್ತಿ ನೀಡಿ ಗೌರವಿಸುವಂತಾದರೆ, ಅವರು ಮಾಡುವ ಕಾಯಕಕ್ಕೆ ಮನ್ನಣೆ ಸಿಗುವಂತಾದರೆ, ಎಲೆ ಮರೆ ಕಾಯಿಯಂತೆ ದುಡಿಯುವವರಿಗೆ ಒಂದು ಚಿಕ್ಕ ಕಾಣಿಕೆ ದೊರೆತರೆ ಅವರಿಗೆ ಸಿಗುವ ಆನಂದ ಅಷ್ಟಿಷ್ಟಲ್ಲ.
ಸೌಂದರ್ಯ ತಜ್ಞೆಯರಿಗೆ ಮನ್ನಣೆ ನೀಡುವ ಕಾರ್ಯವನ್ನು ಕರ್ನಾಟಕ ಬ್ಯೂಟಿ ಪಾರ್ಲರ್ಸ್‌ ಅಸೋಸಿಯೇಷನ್ ಮಾಡುತ್ತಿದೆ. ಇದೇ 17ರಂದು `ರಾಜ್ಯಮಟ್ಟದ ಬ್ಯೂಟಿಷಿಯನ್ ಸ್ಪರ್ಧೆ~ ಮತ್ತು `ಉತ್ತಮ ಕರ್ನಾಟಕ ಬೆಸ್ಟ್ ಬ್ಯೂಟಿಷಿಯನ್~ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.

ಕ್ರಿಯಾಶೀಲ ಹೇರ್‌ಸ್ಟೈಲ್, ಕ್ರಿಯಾಶೀಲ ಮೇಕಪ್, ಫ್ಯಾಶನ್ ಮೇಕಪ್ ಮತ್ತು ಫ್ಯಾಶನ್ ಹೇರ್‌ಸ್ಟೈಲ್‌ನಲ್ಲಿ ಪರಿಣತರಾದವರು ಪಾಲ್ಗೊಳ್ಳಬಹುದು.

ಸುಮಾರು ಆರು ವರ್ಷಗಳಿಂದ ಏರ್ಪಡಿಸಿಕೊಂಡು ಬಂದಿರುವ ಈ ಬ್ಯೂಟಿಷಿಯನ್ ಸ್ಪರ್ಧೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಮಹಿಳೆಯರು ಭಾಗವಹಿಸುತ್ತಾರೆ. ಕಳೆದ ವರ್ಷ ಸುಮಾರು 560 ಮಹಿಳೆಯರು ಭಾಗವಹಿಸಿದ್ದರು.

ಅಸೋಸಿಯೇಷನ್ನಿನ ಅಧ್ಯಕ್ಷರಾದ ಅನಿತಾ ಶರ್ಲಿ ಅವರು ಹೇಳುವಂತೆ, `ನಮ್ಮ ಹೆಣ್ಣು ಮಕ್ಕಳು ತುಂಬ ಕಷ್ಟದಲ್ಲಿ ಜೀವನ ನಡೆಸುತ್ತ್ದ್ದಿದಾರೆ. ಅವರಿಗೆ ಕ್ರಿಯಾಶೀಲತೆ ಇದ್ದರೂ ಗುರುತಿಸುವ ಕಾರ್ಯ ನಡೆಯುವುದಿಲ್ಲ. ಯಾವುದೇ ಪ್ರೋತ್ಸಾಹವೂ ಸಿಗುವುದಿಲ್ಲ. ಅಲ್ಲದೇ, ನಮ್ಮ ರಾಜ್ಯದಲ್ಲಿ ಬ್ಯೂಟಿಷಿಯನ್‌ಗೆ ಸಂಬಂಧಪಟ್ಟಂತೆ ಯಾವುದೇ ಒಂದು ಅಧಿಕೃತ ಅಸೋಸಿಯೇಷನ್ ಇರಲಿಲ್ಲ. ಆದ್ದರಿಂದ ಒಂದು ಅಸೋಸಿಯೇಷನ್ ಕಟ್ಟಲು ಪ್ರೇರಣೆಯಾಯಿತು~.

`ಗ್ರಾಮಾಂತರ ಪ್ರದೇಶಗಳಲ್ಲಿ ಕ್ರಿಯಾಶೀಲತೆಯಿಂದ ಕೂಡಿದ ಅನೇಕ ಮಹಿಳೆಯರು ಇರುತ್ತಾರೆ. ಅವರು ಕೂದಲನ್ನು ಕಟ್ಟುವ ರೀತಿಯೇ ಒಂದು ತರಹದಲ್ಲಿ ವಿಶೇಷತೆಯಿಂದ ಕೂಡಿರುತ್ತದೆ. ಆದರೆ, ಅವರಿಗೆ ಯಾವುದೇ ರೀತಿಯ ಪ್ರೋತ್ಸಾಹವಾಗಲೀ ಅಥವಾ ಮಾನ್ಯತೆ ದೊರೆಯುವುದಿಲ್ಲ~ ಎಂದರು.

`ಈಗ ಬ್ಯೂಟಿಷಿಯನ್‌ನಲ್ಲಿ ಒಂದು ತಿಂಗಳು ಕಲಿತಿರುವವರು ಮತ್ತು ಎರಡು ತಿಂಗಳು ಕಲಿತವರು ಸಹ ತಾವು ಪರಿಣತಿ ಹೊಂದಿದವರಂತೆ ಆಡುತ್ತಾರೆ. ಒಂದು ತಿಂಗಳು ಅಥವಾ ಎರಡು ತಿಂಗಳಿನ ಕೋರ್ಸುಗಳಿಂದ ಪರಿಣತಿ ಪಡೆಯಲು ಸಾಧ್ಯವಿಲ್ಲ. ಆದರೆ, ನಮ್ಮ ಸಂಸ್ಥೆಯಿಂದ ಒಂದು ವರ್ಷದ ಡಿಪ್ಲೊಮಾ ಕೋರ್ಸ್‌ನ ತರಬೇತಿ ನೀಡುತ್ತೇವೆ~ ಎನ್ನುತ್ತಾರೆ ಅವರು.

`ಈ ಒಂದು ವರ್ಷದ ಡಿಪ್ಲೊಮಾ ಕೋರ್ಸ್‌ನಲ್ಲಿ ಮೂರು ತಿಂಗಳವರೆಗೂ ಉಚಿತ ತರಬೇತಿ ನೀಡಲಾಗುತ್ತದೆ. ನಂತರ ಅವರಿಗೆ ತರಬೇತಿ ಭತ್ಯೆ ನೀಡಲಾಗುವುದು. ಆಮೇಲೆ ಆರು ತಿಂಗಳಾದ ಮೇಲೆ ಅವರಿಗೆ ಆರರಿಂದ ಎಂಟು ಸಾವಿರ ರೂಪಾಯಿ ಹಣ ನೀಡಲಾಗುವುದು~ ಎಂದರು.

`ಸುಮಾರು ಏಳು ವರ್ಷಗಳಿಂದ ಸ್ಥಾಪನೆಯಾದ ಸಂಸ್ಥೆಯು ಆರಂಭದಲ್ಲಿ ಎಂಟು ಜನರನ್ನು ಮಾತ್ರ ಹೊಂದಿತ್ತು. ನಂತರ ಬೆಳೆಯುತ್ತಾ ಹೋಗಿ ಇಂದು 500ರಿಂದ 600 ಜನರಿಗೆ ಉದ್ಯೋಗ ದೊರಕಿಸಿಕೊಡುವ ಮಟ್ಟಕ್ಕೆ ಬೆಳೆದಿದೆ~ ಎಂದು ಹೇಳಿದರು.

`ಕಷ್ಟದಲ್ಲಿರುವ ಹೆಣ್ಣುಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಪ್ರಾಯೋಗಿಕವಾಗಿ ತರಬೇತಿ ನೀಡಲಾಗುವುದು. ಅವರು ತುಂಬ ಕಷ್ಟದಲ್ಲಿದ್ದರೆ, ಅವರಿಗೆ ಒಂದು ತಿಂಗಳ ನಂತರದಿಂದಲೇ ತರಬೇತಿ ಭತ್ಯೆ ನೀಡಲಾಗುವುದು. ಅಸೋಸಿಯೇಷನ್ನಿನ ಮುಖ್ಯ ಉದ್ದೇಶವೇ ಹೆಣ್ಣುಮಕ್ಕಳ ಜೀವನಕ್ಕೆ ಒಂದು ದಾರಿ ದೀಪವನ್ನು ಒದಗಿಸುವುದಾಗಿದೆ. ಕಷ್ಟದಲ್ಲಿ ಬಂದ ಹೆಣ್ಣುಮಕ್ಕಳಿಗೆ ತರಬೇತಿಯ ನಂತರ ಲೋನ್ ಕೊಡಿಸಿ ಅವರಿಗೆ ಒಂದು ಬ್ಯೂಟಿ ಪಾರ್ಲರ್ ತೆರೆಯಲು ಸಹಾಯ ಮಾಡಲಾಗುವುದು. ಯಾವುದೇ ಬ್ಯೂಟಿ ಪಾರ್ಲರ್‌ನಿಂದ ತೊಂದರೆಯಾಗಿದ್ದರೆ ಅಂತಹವರು ಅಸೋಸಿಯೇಷನ್ನಿನ ಬಳಿಗೆ ಬಂದರೆ ಸಮಸ್ಯೆಗಳನ್ನು ಪರಿಹರಿಸಿಕೊಡುತ್ತೇವೆ~ ಎಂದು ಅವರು ಭರವಸೆಯನ್ನೂ ಕೊಡುತ್ತಾರೆ.

ಜುಲೈ 10ರೊಳಗೆ ಸ್ಪರ್ಧೆಗೆ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ ಸಂಪರ್ಕಿಸಿ-ಅಖಿಲ ಕರ್ನಾಟಕ ಬ್ಯೂಟಿ ಪಾರ್ಲರ್ಸ್‌ ಅಸೋಸಿಯೇಷನ್, ನಂ.1365, ಸಾರಕ್ಕಿ ಗೇಟ್, ಜೆ.ಪಿ.ನಗರ, 1 ನೇ ಹಂತ. ದೂರವಾಣಿ-94486 17951.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT