ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಅಥ್ಲೆಟಿಕ್ ಚಾಂಪಿಯನ್‌ಷಿಪ್: ಮೊದಲ ದಿನ ಮೂರು ದಾಖಲೆ

Last Updated 14 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯ ಎಸ್.ನಿತಿನ್ ಕುಮಾರ್ ಕಾರ್ಪೊರೇಷನ್ ಬ್ಯಾಂಕ್ ಪ್ರಾಯೋಜಿತ 28ನೇ ರಾಜ್ಯ ಜೂನಿಯರ್ ಮತ್ತು ಸೀನಿಯರ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ 14 ವರ್ಷದೊಳಗಿನ ಬಾಲಕರ ವಿಭಾಗದ ಹೈಜಂಪ್‌ನಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದುಕೊಂಡರು. ಇದೂ ಸೇರಿದಂತೆ ಮೊದಲ ದಿನ ಒಟ್ಟು ಮೂರು ದಾಖಲೆಗಳು ಮೂಡಿಬಂದವು.

ಅಜ್ಜರಕಾಡು ಮಹಾತ್ಮ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ಈ ಕೂಟದಲ್ಲಿ ನಿತಿನ್ 1.67 ಮೀಟರ್ ಎತ್ತರ ಜಿಗಿದು, ಹಳೆಯ ದಾಖಲೆ (1.60 ಮೀಟರ್) ಸುಧಾರಿಸಿದರು. ಬೆಂಗಳೂರು ಎಂಇಜಿಯ ವೈ.ಕಾಂಬಾ ಸಿಂಗ್ 20 ವರ್ಷದೊಳಗಿನವರ ವಿಭಾಗದ 10 ಕಿಲೋಮೀಟರ್ ನಡಿಗೆ ಸ್ಪರ್ಧೆಯನ್ನು 46 ನಿಮಿಷ 32.1 ಸೆಕೆಂಡುಗಳಲ್ಲಿ ಅಂತರ ಕ್ರಮಿಸಿ ಹಳೆಯ ದಾಖಲೆ (49ನಿ.40.8ಸೆ.) ಮುರಿದರು.

ಮೈಸೂರಿನ ಡಿವೈಎಸ್‌ಎಸ್ ತಂಡದ ಶ್ರದ್ಧಾರಾಣಿ ಎಸ್.ದೇಸಾಯಿ  20 ವರ್ಷದೊಳಗಿನ ಬಾಲಕಿಯರ ವಿಭಾಗದ 3000 ಮೀಟರ್ ಓಟವನ್ನು 10ನಿ.29 ಸೆ.ಗಳಲ್ಲಿ ಕ್ರಮಿಸಿ ಸುಲಭವಾಗಿ ನೂತನ ದಾಖಲೆ (ಹಳೆಯದು: 10ನಿ.36.4 ಸೆ.) ಬರೆದರು.

ಫಲಿತಾಂಶ: ಮೊದಲ ದಿನ ಚಿನ್ನ ಗೆದ್ದವರು: ಪುರುಷರ ವಿಭಾಗ: 100 ಮೀ. ಓಟ: ಸೋನಿತ್ ಮೆಂಡನ್ (ದಕ್ಷಿಣ ಕನ್ನಡ), 800 ಮೀಟರ್ ಓಟ: ಭರತ್ (ಟಿ.ಎ.ಎ.,ಬೆಂಗಳೂರು), ಕಾಲ: 1ನಿ.59.9 ಸೆ.; ಟ್ರಿಪಲ್ ಜಂಪ್: ಭೀಮಸಾಮ್ ಸಿಂಗ್ (ಎಂಇಜಿ, ಬೆಂಗಳೂರು), ದೂರ: 14.12 ಮೀ.

20 ವರ್ಷದೊಳಗಿನವರು: 100 ಮೀ. ಓಟ: ವಿದ್ಯಾಸಾಗರ್ (ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್), ಕಾಲ: 10.7 ಸೆ.; 800 ಮೀಟರ್ ಓಟ: ಎ.ಲಕ್ಷ್ಮಿರಾಮ್ (ಟಿ.ಎಸ್.ಆರ್. ಕ್ಲಬ್), ಕಾಲ: 1ನಿ.59.44 ಸೆ.; 10 ಕಿ.ಮೀ. ನಡಿಗೆ: ವೈ.ಕಾಂಬಾ ಸಿಂಗ್ (ಎಂಇಜಿ), ಕಾಲ: 46ನಿ.32.1 ಸೆ., ನೂತನ ದಾಖಲೆ, ಹಳೆಯದು: 49.40.8 ಸೆಕೆಂಡು.; ಟ್ರಿಪಲ್ ಜಂಪ್: ಪ್ರಣವ್ (ಎಂಇಜಿ), ದೂರ: 14.77 ಮೀಟರ್.

18 ವರ್ಷದೊಳಗಿನವರು: 100 ಮೀ ಓಟ: ಇರ್ಫಾನ್ ಶೇಖ್ (ಎಸ್‌ಎಐ, ಬೆಂಗಳೂರು), ಕಾಲ: 11.1 ಸೆ.; 800 ಮೀ. ಓಟ: ಯೆರಯ್ಯ (ಡಿವೈಎಸ್‌ಎಸ್, ಬೆಂಗಳೂರು), ಕಾಲ: 1ನಿ.58.8 ಸೆ.; ಡಿಸ್ಕಸ್ ಎಸೆತ- ಕೆಂಚಪ್ಪ (ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್), ದೂರ: 40.06 ಮೀ.; ಮಿಡ್ಲೆ ರಿಲೇ : ಡಿವೈಎಸ್‌ಎಸ್, ಬೆಂಗಳೂರು.

16 ವರ್ಷದೊಳಗಿನವರು: 100 ಮೀ. ಓಟ: ಅಕ್ಷಯ್ ತರಲಿ (ಡಿ.ಎ.ಎ, ಬೆಳಗಾವಿ), ಕಾಲ: 11.6 ಸೆ.; 1000 ಮೀ. ಓಟ: ಶರತ್ ಬಿ. (ಡಿವೈಎಸ್‌ಎಸ್, ಕೂಡಿಗೆ), ಕಾಲ: 2ನಿ.45.2 ಸೆ.; ಲಾಂಗ್‌ಜಂಪ್: ಶ್ರವಣ್ ಕುಮಾರ್ (ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್), ದೂರ: 6.18 ಮೀ.; ಷಾಟ್‌ಪಟ್: ಜಿ.ಗೌತಮ್ (ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್), ಅಂತರ: 12.84 ಮೀ.

ಮಹಿಳೆಯರ ವಿಭಾಗ: 100 ಮೀ. ಓಟ: ಚೈತ್ರಾ ತಮ್ಮಯ್ಯ (ದ.ಕ.), ಕಾಲ: 13.0 ಸೆ.; ಹೈಜಂಪ್: ಚಂದನಾ (ಸೌತ್‌ವೆಸ್ಟರ್ನ್ ರೈಲ್ವೆ), ಎತ್ತರ: 1.70 ಮೀ.; ಜಾವೆಲಿನ್: ಷಹಜಹಾನಿ (ಡಿವೈಎಸ್‌ಎಸ್, ಮೈಸೂರು), ದೂರ: 42.63 ಮೀ.

20 ವರ್ಷದೊಳಗಿನವರು: 100 ಮೀ. ಓಟ: ರೆಬೆಕಾ ಜೋಸ್ (ಡಿವೈಎಸ್‌ಎಸ್, ಬೆಂಗಳೂರು), ಕಾಲ: 12.1 ಸೆ.; 800 ಮೀ. ಓಟ: ಸುಜಾತಾ (ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್, ಮೂಡುಬಿದಿರೆ), ಕಾಲ: 2ನಿ.22.9ಸೆ.; ಜಾವೆಲಿನ್ ಎಸೆತ: ಮಧು ಕೇಸರ್ ಜಿ. (ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್).

18 ವರ್ಷದೊಳಗಿನವರು:  100 ಮೀ. ಮೇಘನಾ ಶೆಟ್ಟಿ (ಇಂಡೊ-ಜರ್ಮನ್, ಬೆಂಗಳೂರು), ಕಾಲ: 12.4 ಸೆ.; 800 ಮೀ. ಓಟ: ಪ್ರಿಯಾಂಕಾ (ಎಸ್‌ಎಐ, ಬೆಂಗಳೂರು), ಕಾಲ: 2ನಿ.26.9 ಸೆ.; ಹೈಜಂಪ್: ಸುಷ್ಮಿತಾ (ದ.ಕ.), ಎತ್ತರ: 1.45 ಮೀ.; ಮೆಡ್ಲೆ ರಿಲೆ: ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್, ಮೂಡುಬಿದಿರೆ.

16 ವರ್ಷದೊಳಗಿನವರು: 1000 ಮೀ. ಒಟ: ಮೃದುಲಾ ಎಚ್. (ಡಿಎಎ, ಬೆಳಗಾವಿ), ಕಾಲ: 3ನಿ.06.6 ಸೆ.; ಮೆಡ್ಲೆ ರಿಲೆ: ಭಾರತ ಕ್ರೀಡಾ ಪ್ರಾಧಿಕಾರ, ಮಡಿಕೇರಿ.

14 ವರ್ಷದೊಳಗಿನವರು: 100 ಮೀ. ಓಟ: ಸೌಮ್ಯಾ ಶೆಟ್ಟಿ, ಕಾಲ: 13.4 ಸೆ.; ಹೈಜಂಪ್: ಜಿ.ಅನ್ನಪೂರ್ಣ, ಎತ್ತರ: 1.38 ಮೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT