ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜೃಂಭಣೆಯ ತೋಂಟದಾರ್ಯ ರಥೋತ್ಸವ

Last Updated 26 ಏಪ್ರಿಲ್ 2013, 6:45 IST
ಅಕ್ಷರ ಗಾತ್ರ

ಗದಗ: ಉತ್ತರ ಕರ್ನಾಟಕದ ಐತಿಹಾ ಸಿಕ ತೋಂಟದಾರ್ಯ ಮಠದ ಮಹಾ ರಥೋತ್ಸವ ಡಾ.ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಗುರುವಾರ ಸಂಜೆ ಚಿತ್ತಾ ನಕ್ಷತ್ರದಲ್ಲಿ ಭಕ್ತ ಸಾಗರದ ನಡುವೆ ವಿಜೃಂಭಣೆಯಿಂದ ನೆರವೇರಿತು.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರ ಹರ್ಷೋದ್ಘಾರದ ನಡುವೆ ಸ್ವಾಮೀಜಿ ಅವರು ತೇರಿನಲ್ಲಿ ಇಟ್ಟಿದ ಸಿದ್ದಲಿಂಗೇಶ್ವರ ಮೂರ್ತಿಗೆ ಪೂಜೆ ಸಲ್ಲಿಸಿ ಚಾಲನೆ ನೀಡುತ್ತಿದ್ದಂತೆ, `ಹರ ಹರ ಮಹಾದೇವ, ಗುರುಬಸವಲಿಂಗಾಯ ನಮಃ, ಸಿದ್ಧಲಿಂಗಾಯ ನಮಃ, ನಾಮ ಶಿವ ಸಿದ್ಧಲಿಂಗ' ಎಂದು ಭಕ್ತರು ಜಯಘೋಷ ಮೊಳಗಿಸಿದರು. 

ಮಠದ ರಸ್ತೆಯಲ್ಲಿ ತೇರು ಸಾಗುತ್ತಿದ್ದಂತೆ ಭಕ್ತರು ನಿಂಬೆಹಣ್ಣು ಮತ್ತು ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು. ರಸ್ತೆಯ ತುಂಬ ಜನಸಾಗರವೇ ಸೇರಿತು. ರಸ್ತೆಬದಿಯ ಕಟ್ಟಡ ಮತ್ತು ಮನೆಗಳ ಮೇಲೆ ಕುಳಿತು ಜನರು ರಥೋತ್ಸವ ವೀಕ್ಷಿಸಿದರು.

ಅಡ್ಡಪಲ್ಲಕ್ಕಿಯಲ್ಲಿ ಬಸವಣ್ಣ, ಸಿದ್ಧ ಲಿಂಗೇಶ್ವರರ ಭಾವಚಿತ್ರ  ಹಾಗೂ ಶರಣರ ವಚನದ ಕಟ್ಟುಗಳನ್ನು ಇಟ್ಟು ಮೆರವಣಿಗೆ ಮಾಡಲಾಯಿತು.ರಥೋತ್ಸವದಲ್ಲಿ ದೆಹಲಿಯ ಕರೋಲ್ ಭಾಗದ ಜಾಟವಾ ಜನಾಂಗದ ಕುಂಭ ಮೆರವಣಿಗೆ, ಚಿತ್ರದುರ್ಗ ಜಿಲ್ಲೆಯ ಹುಲ್ಲೂರು ಗ್ರಾಮದ ಮಹಿಳಾ ತಮಟೆ, ಜಮಖಂಡಿಯ ಕರಡಿ ಮಜಲು, ನರಗುಂದದ ರಗ್ಗಲಗಿ, ಗದುಗಿನ ಬಸ ವೇಶ್ವರ ನಗರದ ನಂದಿಕೋಲ ಮತ್ತು ಸಮ್ಮೋಳ ಮೇಳ, ಚಿಕ್ಕಪಡಸಲಗಿ, ಅಣ್ಣಿಗೇರಿ ಕರಡಿ ಮಜಲು, ಕೋಲು ಕುಣಿತ, ಕಂಸಾಳೆ ನೃತ್ಯ, ಭಜನಾ ಮೇ ಗಳು, ಕಳಸಾಪೂರದ ಬಸವ ದಳ, ಸೇವಾಲಾಲ ಭಜನಾ ಮಂಡಳಿ,  ಸ್ಥಳೀಯ ಕಲಾ ತಂಡಗಳು ಹಾಗೂ ಶಿರ ಹಟ್ಟಿ ಮಠದ ಆನೆ ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರಗು ತಂದವು.

ರಥೋತ್ಸವಕ್ಕೂ ಮುನ್ನ ವೀರ ನಾರಾಯಣ ರಸ್ತೆಯಲ್ಲಿರುವ ಎಸ್.ಎಸ್.ಕಳಸಾಪೂರಶೆಟ್ರ ನಿವಾಸದಲ್ಲಿ ಸಿದ್ದಲಿಂಗ ಸ್ವಾಮೀಜಿ ಅವರು ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ನಂತರ ಅಲಂಕೃತ ತೆರೆದ ವಾಹನದಲ್ಲಿ ಸ್ವಾಮೀಜಿ  ನಗರದ ಪ್ರಮುಖ ರಸ್ತೆ ಗಳಲ್ಲಿ ಮೆರವಣಿಗೆಯಲ್ಲಿ ಸಾಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT