ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವೇಕಾನಂದರ 150ನೇ ವರ್ಷಾಚರಣೆ: ಹೈಟೆಕ್ ಸಂದೇಶ ಪ್ರಸಾರಕ್ಕೆ ಚಾಲನೆ

Last Updated 12 ಜನವರಿ 2012, 19:30 IST
ಅಕ್ಷರ ಗಾತ್ರ

ಚೆನ್ನೈ: ವೇದಾಂತದ ಮಹತ್ವವನ್ನು ಆಧುನಿಕ ಜಗತ್ತಿನಲ್ಲೆಡೆಗೆ ಪಸರಿಸಿದ ಬಿರುಗಾಳಿ ಸನ್ಯಾಸಿ ಎಂದೇ ಹೆಸರಾದ ಸ್ವಾಮಿ ವಿವೇಕಾನಂದರ 150ನೇ ವರ್ಷಾಚರಣೆ ಗುರುವಾರ ಆರಂಭಗೊಂಡಿದ್ದು, ಇದೇ ಸಂದರ್ಭದಲ್ಲಿ ಅವರ ಸಂದೇಶಗಳ ಸಂವಹನಕ್ಕೆ ಅತ್ಯುನ್ನತ ತಂತ್ರಜ್ಞಾನ (ಹೈ ಟೆಕ್) ಬಳಸಿಕೊಳ್ಳಲು ಚಾಲನೆ ನೀಡಲಾಗಿದೆ.

ವಿವೇಕಾನಂದರು ಸ್ಥಾಪಿಸಿದ ಅತ್ಯಂತ ಹಳೆಯ ಮಠಗಳಲ್ಲಿ ಒಂದಾದ ಇಲ್ಲಿನ ಶ್ರೀ ರಾಮಕೃಷ್ಣ ಮಠ ಇದೀಗ ಯುಟ್ಯೂಬ್ ಮೂಲಕ ಈ ಕಾರ್ಯಕ್ಕೆ ಮುಂದಾಗಿದೆ.

ಇದರ ಆರಂಭವಾಗಿ ಗುರುವಾರ ಇಲ್ಲಿನ `ವಿವೇಕಾನಂದ ಭವನ~ದಲ್ಲಿ `ಹೋಲೋಗ್ರಾಫಿಕ್ ಡಿಸ್‌ಪ್ಲೆ~ಯನ್ನು ಉದ್ಘಾಟಿಸಲಾಯಿತು.

ಈ ಎಚ್‌ಡಿಎಸ್ ಸ್ವಾಮಿ ವಿವೇಕಾನಂದರನ್ನು ಮೂರು ಆಯಾಮಗಳನ್ನು ನೋಡಲು ಹಾಗೂ ಅವರ ಸ್ಫುಟವಾದ ವಾಣಿಯನ್ನು ಆಲಿಸಲು ಅವಕಾಶ ಮಾಡಿಕೊಟ್ಟಿದ್ದು, ಯುವಕರನ್ನು ತಕ್ಷಣವೇ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ ಎನ್ನುತ್ತಾರೆ ಮಠದ ಸ್ವಾಮಿ ಅರವಿಂದ್.

ದೆಹಲಿಯ ಇನ್‌ಬಾಕ್ಸೆಲ್ ಎಂಬ ಕಂಪೆನಿ ಇದನ್ನು ವಿನ್ಯಾಸಗೊಳಿಸಿದ್ದು, ನಗರದ ಗ್ಲೋಬಲ್ ಇನ್‌ಸ್ಟಿಟ್ಯೂಟ್ ಫಾರ್ ಸ್ಟೀರಿಯೊವಿಷನ್ ಅಂಡ್ ರೀಸರ್ಚ್ ಇದರಲ್ಲಿನ ಪಠ್ಯ ಭಾಗವನ್ನು ಸಿದ್ಧಪಡಿಸಿದೆ.

ವಿವೇಕಾನಂದರಿಗೆ ಸಂಬಂಧಿಸಿದ `ಸ್ಟೀರಿಯೊಸ್ಕೋಪಿಕ್ 3ಡಿ ಆನಿಮೇಟೆಡ್ ಕಿರು ಚಿತ್ರ~ದ ಪ್ರದರ್ಶನವನ್ನೂ ಇದೇ ಸಂದರ್ಭದಲ್ಲಿ ಆರಂಭಿಸಲಾಗಿ

ನಿವೃತ್ತ ಬಾಹ್ಯಾಕಾಶ ವಿಜ್ಞಾನಿ ಆರ್.ಎಂ.ವಸಗಂ ಇದರ ಉದ್ಘಾಟನೆ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT