ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗಳ ಆಗರ ಮಲ್ಲದೇವಿಹಳ್ಳಿ

ಗ್ರಾಮ ಸಂಚಾರ
Last Updated 18 ಸೆಪ್ಟೆಂಬರ್ 2013, 6:58 IST
ಅಕ್ಷರ ಗಾತ್ರ

ಜಾವಗಲ್: 200 ಕುಟುಂಬಗಳು ವಾಸವಾಗಿರುವ ಸಮೀಪದ ಮಲ್ಲದೇವಿಹಳ್ಳಿ ಗ್ರಾಮ ಅಭಿವೃದ್ಧಿಯಿಂದ ವಂಚಿತವಾಗಿದ್ದು, ಗ್ರಾಮದ ಜನರು ಹಲವು ಸಮಸ್ಯೆಗಳ ಮಧ್ಯದಲ್ಲೇ ಬದುಕಬೇಕಾಗಿದೆ.

ಗ್ರಾಮಕ್ಕೆ ಸರ್ಕಾರದ ಯಾವ ಸೌಲಭ್ಯವೂ ದೊರಕಿಲ್ಲ. ಜಾವಗಲ್‌ನಿಂದ ಈ ಗ್ರಾಮಕ್ಕೆ ಹೋಗಲು ಸರಿಯಾದ ರಸ್ತೆ ಇಲ್ಲ. ಬಸ್ ವ್ಯವಸ್ಥೆ ಕನಸಿನ ಮಾತು. ಈಗಲೂ ಈ ಗ್ರಾಮದ ಜನರು ತಮ್ಮ ಮನೆಗಳಿಗೆ ನಡೆದುಕೊಂಡೇ ಹೋಗಬೇಕು. ಮಳೆಗಾಲದಲ್ಲಂತೂ ಈ ಗ್ರಾಮಕ್ಕೆ ಹೋಗುವುದು ಒಂದು ಸುಃಸ್ವಪ್ನ.

ಗ್ರಾಮದಲ್ಲಿ ಎರಡು ಕಿರು ನೀರು ಸರಬರಾಜು ಟ್ಯಾಂಕ್‌ಗಳಿವೆ. ಐದು ಕೊಳವೆ ಬಾವಿಗಳಿದ್ದರೂ ಅವು ಬತ್ತಿಹೋಗಿ ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿದೆ. ವಿದ್ಯುತ್ ಕೈಕೊಟ್ಟರೆ ಇಡೀ ಗ್ರಾಮಕ್ಕೆ ನೀರು ಸಿಗುವುದಿಲ್ಲ. ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಬಚ್ಚಲು ನೀರು ರಸ್ತೆಯ ಮೇಲೆ ಹರಿಯಬೇಕು.

ಇದರಿಂದಾಗಿ ಗ್ರಾಮದ ತುಂಬ ಸೊಳ್ಳಗಳು ತುಂಬಿವೆ. ಇಲ್ಲಿಯ ಕುಟುಂಬಗಳು ಸುಮಾರು ಒಂದರಿಂದ ಎರಡು ಎಕರೆ ಜಮೀನು ಹೊಂದಿದ್ದರೆ ಹೆಚ್ಚು. ಆದ್ದರಿಂದ ಬಡತನ ಎಲ್ಲರಿಗೂ ಸಾಮಾನ್ಯ. ಜನರು ಪ್ರತಿದಿನ ಕಾಫಿ ತೋಟದ ಕೆಲಸಕ್ಕೆ ಹೊರಗೆ ಹೋಗುತ್ತಾರೆ. ಕೆಲವರು ಕುಕ್ಕೆ ಹೆಣೆಯುತ್ತಾರೆ. ಗ್ರಾಮದ ಶಾಲೆಯಲ್ಲಿ 1ರಿಂದ 7ನೇ ತರಗತಿಯವರೆಗೆ 35 ಮಕ್ಕಳ್ದಿದಾರೆ.

ಅಂಗನವಾಡಿ ಕೇಂದ್ರದ್ಲಲಿ 9 ಮಕ್ಕಳ್ದಿದಾರೆ. ಶಾಲೆಗೆ ಕಾಂಪೌಂಡ್‌ ಇನ್ನೂ ನಿರ್ಮಾ ಣವಾಗಿಲ್ಲ. ಇರುವ ರಸ್ತೆಯನ್ನು ದುರಸ್ತಿ ಮಾಡಿ ಡಾಂಬರೀಕರಣವಾಗಬೇಕು. ಗ್ರಾಮದಲ್ಲಿ ಬೀದಿ ದೀಪಗಳಿಲ್ಲ. ಕುಡಿಯುವ ನೀರಿಗೆ ಮತ್ತೊಂದು ಕಿರುನೀರು ಸರಬರಾಜು ಟ್ಯಾಂಕ್‌ ಬೇಕಾಗಿದೆ. ಜನಪ್ರತಿನಿಧಿಗಳು ಕೂಡಲೆ ಗಮನ ಹರಿಸಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಗ್ರಾಮದ ಮುಖಂಡರಾದ ಜಗನ್ನಾಥ್ ಮತ್ತು ಎಂ.ಬಿ.ಕಾಳಪ್ಪ ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT