ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಗ್ರಾಂ ಬ್ಯಾಂಡ್‌ನ ಸಾರ್ಥಕ ಪ್ರದರ್ಶನ

Last Updated 19 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಲಂಡನ್ ಲಿವರ್‌ಪೂಲ್‌ನ ಸೀಗ್ರಾಂ 100 ಪೈಪರ್ಸ್‌ ಯು2 ಬ್ಯಾಂಡ್ ನಗರದ ಸಂಗೀತರಸಿಕರಿಗೆ ಮನದಣಿಯೆ ಸಂಗೀತವನ್ನು ಆಸ್ವಾದಿಸುವ ಸುವರ್ಣಾವಕಾಶ ಒದಗಿಸಿತು. ನಗರದ ಕೆಥೊಲಿಕ್ ಕ್ಲಬ್‌ನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ತಮ್ಮ ಎಂದಿನ ಎಲಿವೇಷನ್ ವೈಭವ ಮರುಕಳಿಸುವಂತೆ ಮಾಡಿತು.

ಸ್ಥಳೀಯವಾಗಿ ಕಾರ್ಯಕ್ರಮ ಕೊಡುವ ಮೂಲಕ ಸಂಗೀತ ರಸಿಕರನ್ನು ರಂಜಿಸುತ್ತಿದ್ದ ಈ ಬ್ಯಾಂಡ್ 1976ರಲ್ಲಿ ಆರಂಭವಾಗಿ, 2000ನೇ ಇಸವಿಯಲ್ಲಿ ಜಗತ್ತಿನ ಶ್ರೇಷ್ಠ ಬ್ಯಾಂಡ್ ಎಂಬ ಗೌರವವೂ ಪ್ರಾಪ್ತಿಯಾಯಿತು. ಹೀಗೆ ತಮಗೆ ವಿಶ್ವದೆಲ್ಲೆಡೆ ಮನ್ನಣೆ ದೊರಕಿಸಿಕೊಟ್ಟ ಸಂಗೀತಾಭಿಮಾನಿಗಳಿಗೆ, ಪ್ರಾಯೋಜಕ/ಆಯೋಜಕರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ತಂಡ ಇದೀಗ ಬೆಂಗಳೂರೂ ಸೇರಿದಂತೆ ಭಾರತದ ಆಯ್ದ ನಗರಗಳಲ್ಲಿ, ಮೆಟ್ರೊಗಳಲ್ಲಿ ಕಾರ್ಯಕ್ರಮ ಸರಣಿಯಲ್ಲಿ ಪಾಲ್ಗೊಂಡಿದೆ.

ಬ್ಯಾಂಡ್‌ನ ಸದಸ್ಯರಲ್ಲಿ ಒಬ್ಬೊಬ್ಬರಿಗೂ ಒಂದು ಹೆಗ್ಗಳಿಕೆಯಿದೆ. ಸ್ಟುವರ್ಟ್ (ಬಾನೊ) -ಶ್ರೇಷ್ಠ ಸಂಗೀತಗಾರ, ಗೀತರಚನಕಾರ ಮತ್ತು ಗಾಯಕ. ಅಲನ್ (ದಿ ಎಡ್ಜ್) -ಶ್ರೇಷ್ಠ ಗಿಟಾರ್ ವಾದಕ. ಟೋನಿ (ಆಡಮ್) -ಬಾಸ್ ವಾದಕ ಮತ್ತು ಗೀತರಚನಕಾರ, ಕ್ಯಾಟಪುಲ್ಟ್ ಎಂಟರ್‌ಪ್ರೈಸಸ್ ಎಂಬ ಸ್ವಂತ ಸಂಗೀತ ನಿರ್ಮಾಣ ಕಂಪೆನಿಯನ್ನು ಹೊಂದಿದ್ದರೆ ಮಾರ್ಕ್ (ಲಾರಿ) - ದಾಖಲೆ ಸೃಷ್ಟಿಸಿದ ಆಲ್ಬಂಗಳಲ್ಲಿ ಕೆಲಸ ಮಾಡಿದ ಪ್ರತಿಭಾವಂತ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT