ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ರೈಲು: ರೈಲ್ವೆ ಸಚಿವರ ಭರವಸೆ

Last Updated 22 ಡಿಸೆಂಬರ್ 2012, 6:22 IST
ಅಕ್ಷರ ಗಾತ್ರ

ಹುಬ್ಬಳ್ಳಿ:`ಹುಬ್ಬಳ್ಳಿ-ಧಾರವಾಡ ಹಾಗೂ ರಾಜ್ಯದ ಇತರ ಪ್ರದೇಶಗಳಿಂದ ಹೊಸ ರೈಲು ಓಡಿಸುವ ವಿಷಯ ಪರಿಗಣನೆಯಲ್ಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಪವನ್ ಕುಮಾರ್ ಬನ್ಸಲ್ ಮತ್ತು ರೈಲ್ವೆ ಮಂಡಳಿ ಅಧ್ಯಕ್ಷ ವಿನಯ ಮಿತ್ತಲ್ ಮಾಹಿತಿ ನೀಡಿದ್ದಾರೆ' ಎಂದು ಸಂಸದ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.

`ದಾದರ-ಯಶವಂತಪುರ ರೈಲು ಪುದುಚೇರಿ ಹಾಗೂ ತಿರುವನ್ನಳ್ಳಿಗೆ ವಿಸ್ತರಣೆಗೊಂಡ ಹಿನ್ನೆಲೆಯಲ್ಲಿ ಹಾಗೂ ಯಶವಂತಪುರ-ನಿಜಾಮುದ್ದೀನ್ `ಕರ್ನಾಟಕ ಸಂಪರ್ಕಕ್ರಾಂತಿ' ಎಕ್ಸ್‌ಪ್ರೆಸ್ ರೈಲು ಆಂಧ್ರದಲ್ಲಿ ಸಂಚರಿಸುವುದರಿಂದ ಈ ಎರಡೂ ರೈಲುಗಳ ಬದಲು ಹೊಸ ರೈಲು ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ' ಎಂದೂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

`ಈ ಭಾಗದ ಜನರ ರೈಲು ಸೌಲಭ್ಯದ ಬೇಡಿಕೆಗಳ ಕುರಿತು ರೈಲ್ವೆ ಸಚಿವ ಬನ್ಸಲ್ ಅವರನ್ನು ನವದೆಹಲಿಯಲ್ಲಿ ಗುರುವಾರ ಭೇಟಿ ಮಾಡಿ ಮನವಿ ಸಲ್ಲಿಸಲಾಗಿದ್ದು, ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲು ರೈಲ್ವೆ ಮಂಡಳಿ ಅಧ್ಯಕ್ಷರಿಗೆ ಸಚಿವರು ಭರವಸೆ ನೀಡಿದ್ದಾರೆ' ಎಂದು ತಿಳಿಸಿದ್ದಾರೆ.

`ಸಂಸದರಾದ ಗದ್ದಿಗೌಡರ್, ಜನಾ ರ್ದನಸ್ವಾಮಿ ಹಾಗೂ ರಮೇಶ ಜಿಗಜಿ ಣಗಿ ಮತ್ತು ತಾನು ಜೊತೆಯಾಗಿ ವಿನಯ ಮಿತ್ತಲ್ ಅವರನ್ನು ಭೇಟಿಯಾ ಗಿ ಈ ಭಾಗದ ಮೂಲಕ ಹೊಸ ರೈಲು ಓಡಿಸುವ ಬಗ್ಗೆ ಚರ್ಚಿಸಿದ್ದೇವೆ. ನೈರುತ್ಯ ರೈಲ್ವೆ ಬಳಿ ಸಾಕಷ್ಟು ಬೋಗಿಗಳ ಲಭ್ಯತೆ ಇರುವುದರಿಂದ ಹುಬ್ಬಳ್ಳಿ-ಮುಂಬೈ ಮಧ್ಯೆ ಹೊಸ ರೈಲು ಓಡಿಸುವ ಕುರಿತು ಒತ್ತಾಯಿಸಲಾಯಿತು. ರೈಲ್ವೆ ಸಂಚಾರ ಸದಸ್ಯ ಶ್ರಿವಾತ್ಸವ ಅವರಿಂದ ಈ ಕುರಿತು ಮಾಹಿತಿ ಪಡೆದು ತಕ್ಷಣ ನಿರ್ಧಾರ ಕೈಗೊಳ್ಳುವುದಾಗಿ ಮಿತ್ತಲ್ ತಿಳಿಸಿದ್ದಾರೆ' ಎಂದು ಜೋಶಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT