ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿದ್ಯಾರ್ಥಿಗಳ ಬಾಕಿ ಶುಲ್ಕ ₨131 ಕೋಟಿ ಪಾವತಿ’

Last Updated 21 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: 2004–05ನೇ ಸಾಲಿ­ನಿಂದ ಉಳಿಸಿಕೊಂಡಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಬಾಕಿ ಶುಲ್ಕ 131.52 ಕೋಟಿಯನ್ನು ಪಾವತಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ತಿಳಿಸಿದರು.

ಸರ್ಕಾರದ ಈ ನಿರ್ಧಾರದಿಂದ 2.25 ಲಕ್ಷ ವಿದ್ಯಾರ್ಥಿಗಳು ಪ್ರಯೋ­ಜನ ಪಡೆಯಲಿದ್ದಾರೆ.  ಶುಲ್ಕ ಬಾಕಿ ಪಾವತಿಸಲು ಎಲ್ಲ ಜಿಲ್ಲೆಗಳಿಗೆ ಹಿಂದು­ಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಣ ಬಿಡುಗಡೆ ಮಾಡ­ಲಾ­ಗಿದೆ ಎಂದು ಶನಿವಾರ ತಿಳಿಸಿದರು.

ವ್ಯಾಸಂಗ ಪೂರ್ಣಗೊಳಿಸಿ, ಕಾಲೇಜು ಬಿಟ್ಟಿರುವ ವಿದ್ಯಾರ್ಥಿಗಳು ಸಹ ಆಯಾ ಕಾಲೇಜುಗಳನ್ನು ಸಂಪರ್ಕಿಸಿ ಬಾಕಿ ಶುಲ್ಕವನ್ನು ಪಡೆದು­ಕೊಳ್ಳಬಹುದು. ಈ ಮೊತ್ತವನ್ನು ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗಳಿಗೆ ಪಾವತಿಸಲಾಗುವುದು ಎಂದರು.

‘ವಿದ್ಯಾಸಿರಿ’ ವಿಸ್ತರಣೆ: ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಗೂ ‘ವಿದ್ಯಾಸಿರಿ’ ವಿಸ್ತರಿ­ಸಲು ನಿರ್ಧರಿಸಲಾಗಿದೆ. ಈ ಸಮು­ದಾಯದ ಮಕ್ಕಳಿಗೆ ಭೋಜನ ಮತ್ತು ವಸತಿ ವೆಚ್ಚಕ್ಕಾಗಿ ತಿಂಗಳಿಗೆ ಕೇವಲ ₨200 ನೀಡಲಾಗುತ್ತಿತ್ತು. ಮುಖ್ಯ­ಮಂತ್ರಿ ಅವರು, ಈ ಮೊತ್ತವನ್ನು ಮಾಸಿಕ ₨ 1500ಕ್ಕೆ ಹೆಚ್ಚಿಸಲು ಆದೇಶ ನೀಡಿದ್ದಾರೆ. ಇದರಿಂದ ಶೇ.750ರಷ್ಟು ಹೆಚ್ಚಳವನ್ನು ಒಂದೇ ಬಾರಿಗೆ ಮಾಡಿದಂತಾಗಿದೆ ಎಂದು ಸಚಿವ ಆಂಜನೇಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT