ಆದಿವಾಸಿ ಜನರಿಗೂ ಸಾಂವಿಧಾನಿಕ ಹಕ್ಕು: ಶೀಘ್ರ ಜನಮತ

ಶುಕ್ರವಾರ, ಜೂಲೈ 19, 2019
22 °C

ಆದಿವಾಸಿ ಜನರಿಗೂ ಸಾಂವಿಧಾನಿಕ ಹಕ್ಕು: ಶೀಘ್ರ ಜನಮತ

Published:
Updated:

ಸಿಡ್ನಿ: ಆದಿವಾಸಿ ಜನರನ್ನು ಸಂವಿಧಾನದಡಿ ತರುವ ನಿಟ್ಟಿನಲ್ಲಿ ಮೂರು ವರ್ಷದೊಳಗಾಗಿ ಐತಿಹಾಸಿಕ ಜನಮತ ನಡೆಸುವುದಾಗಿ ಆಸ್ಟ್ರೇಲಿಯಾದ ಆಂತರಿಕ ವ್ಯವಹಾರಗಳ ಸಚಿವ ಕೆನ್‌ ವ್ಯಾಟ್‌ ತಿಳಿಸಿದ್ದಾರೆ. 

ಬ್ರಿಟಿಷ್‌ ವಸಾಹತಿಗೆ ಸಾವಿರಾರು ವರ್ಷದ ಮೊದಲಿನಿಂದಲೇ ಆದಿವಾಸಿಗಳು ಹಾಗೂ ಟೋರಿಸ್‌ ಸ್ಟ್ರೈಟ್‌ ದ್ವೀಪದ ಜನರು ಈ ಭೂಮಿಯಲ್ಲಿ ವಾಸಿಸುತ್ತಿದ್ದರು. ಪ್ರಸ್ತುತ ಇಲ್ಲಿರುವ ಜನಸಂಖ್ಯೆಯ ಶೇ 3 ರಷ್ಟು ಜನ ಈ ಆದಿವಾಸಿಗಳಾಗಿದ್ದಾರೆ. ಆದರೆ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇವರನ್ನು ಸಂವಿಧಾನದಡಿ ತರುವ ಅಭಿಯಾನ ಸಾಕಷ್ಟು ಪರ– ವಿರೋಧ ಚರ್ಚೆಗಳಿಗೆ ಒಳಗಾಗಿತ್ತು.

ಸರ್ಕಾರ ಆದಿವಾಸಿ ಜನರ ಆರೋಗ್ಯ, ಶಿಕ್ಷಣಕ್ಕೆ ಹಲವು ಕ್ರಮಗಳನ್ನು ಕೈಗೊಂಡಿದ್ದರೂ, ಪ್ರಯೋಜನವಾಗಿರಲಿಲ್ಲ. ಆಸ್ಟ್ರೇಲಿಯಾದಲ್ಲಿ ಸಾಂವಿಧಾನಿಕ ಜನಮತದಲ್ಲಿ ಮತ ಚಲಾಯಿಸುವುದು ಕಡ್ಡಾಯವಾಗಿದ್ದು, 1901ರಿಂದ ಇಲ್ಲಿಯವರೆಗೂ 44 ಪ್ರಸ್ತಾವನೆಗಳ ಪೈಕಿ ಕೇವಲ 8 ಪ್ರಸ್ತಾವಗಳು ಅಂಗೀಕೃತವಾಗಿವೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !