ಬಂಜರು ನೆಲದಲ್ಲಿ ಚೀನಾದ ಸಂಪರ್ಕ ಕೊಂಡಿ
ರಷ್ಯಾದ ಪ್ರಾಬಲ್ಯದ ಮಧ್ಯ ಏಷ್ಯಾದಲ್ಲಿ ಬಲವಾಗಿ ಬೇರು ಬಿಡಲು ಬೇಕಿರುವ ಎಲ್ಲವನ್ನೂ ಚೀನಾ ಈಗ ಮಾಡುತ್ತಿದೆ. ಕಜಾಕಿಸ್ತಾನದ ಜತೆ ಸೇರಿ ನಿರ್ಮಿಸಿರುವ ‘ಕೊರ್ಗೋಸ್ ಗೇಟ್ವೇ’ ಎಂಬ ಸಂಪರ್ಕ ಕೊಂಡಿ ಯೋಜನೆ ಈ ಭಾಗದ ರಾಜಕೀಯ ಸಮೀಕರಣವನ್ನೇ ಬದಲಾಯಿಸಿದೆ. ಕಜಾಕಿಸ್ತಾನದ ಜನರಿಗೆ ಚೀನಾದ ಬಗ್ಗೆ ಅನುಮಾನ ಇದ್ದರೂ ಅಲ್ಲಿನ ಸರ್ಕಾರ ಚೀನಾದೊಂದಿಗೆ ಬಲವಾಗಿ ಅಂಟಿಕೊಂಡಿದೆ. ಮಹತ್ವಾಕಾಂಕ್ಷೆಯ ‘ಒಂದು ವಲಯ ಒಂದು ಮಾರ್ಗ’ ಯೋಜನೆ ಆರ್ಥಿಕವಾಗಿ ಮಾತ್ರವಲ್ಲದೆ ರಾಜಕೀಯವಾಗಿ ಕೂಡ ಚೀನಾಕ್ಕೆ ದೊಡ್ಡ ಮುನ್ನಡೆ ತಂದು ಕೊಡಬಹುದೇ?Last Updated 5 ಜನವರಿ 2018, 19:30 IST