ಇಂಗ್ಲಿಷ್ ಭಾಷೆಗೆ ಕವಿರಾಜಮಾರ್ಗ
ವಿಶ್ವದ ಪ್ರಾಚೀನ ಕಾವ್ಯಮೀಮಾಂಸೆಯ ಗ್ರಂಥಗಳಲ್ಲಿ ಕನ್ನಡದ ಕವಿರಾಜ ಮಾರ್ಗವೂ ಒಂದು. ಸಂಸ್ಕೃತ, ಪ್ರಾಕೃತ, ಗ್ರೀಕ್, ಲ್ಯಾಟೀನ್ ಚೈನೀಸ್ ಈ ಭಾಷೆಗಳನ್ನು ಬಿಟ್ಟರೆ ಕಾವ್ಯದ ಲಕ್ಷಣಗಳನ್ನು ಹೇಳುವ ಇಂಥ ಕೃತಿ ದೊರೆಯುವುದು ಕನ್ನಡದಲ್ಲಿಯೇ. ಕವಿರಾಜಮಾರ್ಗಕ್ಕಿಂತ ಮೊದಲೇ ಕನ್ನಡದಲ್ಲಿ ಕೃತಿಗಳು ರಚನೆಯಾಗಿದ್ದವು ಎಂಬುದರ ಉಲ್ಲೇಖ ಕವಿರಾಜ ಮಾರ್ಗದಲ್ಲಿಯೇ ದೊರೆಯುತ್ತದಾದರೂ ಆ ಯಾವ ಕೃತಿಗಳೂ ದೊರೆಯದೆ ಇರುವುದರಿಂದ ಕನ್ನಡದ ಮೊದಲ ಉಪಲಬ್ಧ ಕೃತಿ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.Last Updated 13 ಜನವರಿ 2018, 19:30 IST