ಅತಿಥಿ ಶಿಕ್ಷಕರಿಗೆ ಬಾಕಿ ಪಾವತಿಸಿ
2012–2013 ರಲ್ಲಿ ಪ್ರೌಢಶಾಲೆಗಳಲ್ಲಿ ಕನಿಷ್ಠ ಕೂಲಿಗೆ ದುಡಿದು ಮಕ್ಕಳ ಕಲಿಕೆಯಲ್ಲಿ ನೆರವಾದ ಹಿಂದಿನ ವರ್ಷದ ಅತಿಥಿ ಶಿಕ್ಷಕರ ವೇತನ ಇನ್ನೂ ಬಿಡುಗಡೆ ಆಗಿಲ್ಲ. ಶಾಲೆಗಳಲ್ಲಿ ಕೇಳಿದರೆ, ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಕೇಳಿ ಎನ್ನುತ್ತಾರೆ. ಅಲ್ಲಿ ಕೇಳಿದರೆ ಅವರು ನಿಧಿ ಬಿಡುಗಡೆಯಾಗದಿರುವ ಬಗ್ಗೆ ಅಸ್ಪಷ್ಟವಾಗಿ ಮಾಹಿತಿ ನೀಡುತ್ತಾರೆ. ಶಿಕ್ಷಣ ಸಚಿವರು ಈ ಬಗ್ಗೆ ಗಮನ ಹರಿಸಲಿ.Last Updated 16 ಸೆಪ್ಟೆಂಬರ್ 2013, 19:59 IST