ಗುರುವಾರ , ನವೆಂಬರ್ 14, 2019
19 °C

ಬಂಡೀಪುರ: ಗಂಡು ಹುಲಿ ಸಾವು

Published:
Updated:
Prajavani

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯದ ಮದ್ದೂರು ಬೀಟ್‌ನಲ್ಲಿ ಗುರುವಾರ ಬೆಳಿಗ್ಗೆ ಗಂಡು ಹುಲಿಯ ಮೃತದೇಹ ಪತ್ತೆಯಾಗಿದೆ.

ಹುಲಿಗೆ 7ರಿಂದ 8 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ. ಸರಹದ್ದಿನ ಕದನದಲ್ಲಿ (ಟೆರಿಟರಿ ಫೈಟ್‌) ಮೃತಪಟ್ಟಿರಬಹುದು ಎಂದು ಅರಣ್ಯ ಅಧಿಕಾರಿಗಳು ಶಂಕಿಸಿದ್ದಾರೆ.

ಈ ಭಾಗದಲ್ಲಿ ಈ ಹುಲಿಯು ಐದಾರು ದಿನಗಳಿಂದ ಕುಂಟುತ್ತಾ ಓಡಾಡುತ್ತಿದ್ದುದನ್ನು ಇಲಾಖೆಯ ಸಿಬ್ಬಂದಿ ಗಮನಿಸಿದ್ದರು. ಹಿಡಿಯುವುದಕ್ಕಾಗಿ ಬೋನನ್ನೂ ಇಟ್ಟಿದ್ದರು. ಆದರೆ ಬೋನಿಗೆ ಬಿದ್ದಿರಲಿಲ್ಲ.

‘ಹುಲಿಯ ಕುತ್ತಿಗೆ ಭಾಗದಲ್ಲಿ ಗಾಯಗಳಾಗಿದ್ದವು. ಹುಲಿಯ ಗಂಟಲಿನಲ್ಲಿ ಮುಳ್ಳು ಹಂದಿಯ ಮುಳ್ಳುಗಳೂ ಕಂಡು ಬಂದಿವೆ. 15 ದಿನಗಳಿಂದ ಅದು ಆಹಾರ ಸೇವಿಸಿರಲಿಲ್ಲ’ ಎಂದು ಪಶು ವೈದ್ಯ ಡಾ.ಮಾದೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಮರಣೋತ್ತರ ಪರೀಕ್ಷೆಯ ನಂತರ ಕಳೇಬರವನ್ನು ಸುಡಲಾಯಿತು.

ಪ್ರತಿಕ್ರಿಯಿಸಿ (+)