ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಕೆಸಿಯಲ್ಲಿ ಆಹಾ ವಜ್ರಾಭರಣ!

Published 4 ಮೇ 2024, 0:00 IST
Last Updated 4 ಮೇ 2024, 0:00 IST
ಅಕ್ಷರ ಗಾತ್ರ

ಈ ಸಲದ ಅಕ್ಷಯ ತದಿಗೆಗೆ ಸಿ. ಕೃಷ್ಣಯ್ಯ ಚೆಟ್ಟಿ ಮಳಿಗೆಯು ತನ್ನ 155 ವರ್ಷಗಳ ಪರಂಪರೆಯ ಪ್ರತೀಕವೆನಿಸುವ ವಿಶೇಷ ಆಭರಣಗಳ ಸಂಗ್ರಹವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ತನ್ನ ಐತಿಹಾಸಿಕ ಕೌಶಲ ಹಾಗೂ ಸಮಕಾಲೀನ ವಿನ್ಯಾಸವನ್ನು ಒಳಗೊಂಡ ಅಪರೂಪದ ಸಂಗ್ರಹ ಇದಾಗಿದೆ. 18 ಕ್ಯಾರೆಟ್‌ ಚಿನ್ನದಲ್ಲಿ ಸಿದ್ಧಪಡಿಸಿರುವ ಈ ಓಲೆಗಳಲ್ಲಿ ವಜ್ರಗಳನ್ನು ವಿಶೇಷ ಕಲೆಯಲ್ಲಿ ಅಳವಡಿಸಲಾಗಿದೆ. ಬೆಳಕಿನ ಕಿರಣಗಳು ವಜ್ರದ ಮೂಲಕ ಹಾದು ಹೋಗಿ, ಇನ್ನಷ್ಟು ಹೊಳೆಯುವಂತೆ, ನಿಮ್ಮ ಸೌಂದರ್ಯವೂ ವಜ್ರದ ಬೆಳಕಿನಲ್ಲಿ ಬೆಳಗುವಂತೆ ಈ ಹೂಬಳ್ಳಿಗಳ ವಿನ್ಯಾಸದಲ್ಲಿ ಓಲೆಗಳನ್ನು ತಯಾರಿಸಲಾಗಿದೆ. ವಜ್ರ ಮತ್ತು ರೂಬಿಗಳ ಈ ವಿನ್ಯಾಸ ಗಮನ ಸೆಳೆಯುವಂತಿದೆ.

ಚಂದದ ನವಿಲಿನ ಪದಕ ಇರುವ ವಜ್ರದ ನೆಕ್ಲೆಸ್‌ ಗಣಿತೀಯ ವಿನ್ಯಾಸಗಳಿಂದ ಗಮನಸೆಳೆಯುತ್ತಿದೆ. ಇದನ್ನು ಅಂತರರಾಷ್ಟ್ರೀಯ ಸಂಗಮದ ಆಭರಣವೆಂದೂ ಕರೆಯಬಹುದಾಗಿದೆ. ಈ ನವಿಲಿನ ಪದಕಕ್ಕೆ ಥೈಲ್ಯಾಂಡ್‌ನ ರೂಬಿ, ಜಾಂಬಿಯಾದ ಪಚ್ಚೆ ಹಾಗೂ ಜಪಾನಿನ ಮುತ್ತುಗಳನ್ನು ಬಳಸಲಾಗಿದೆ. ವಜ್ರದ ಈ ಸರ ನಿಮ್ಮ ಕೊರಳನ್ನು ಅಲಂಕರಿಸಿದರೆ ನಿಮ್ಮ ಸೌಂದರ್ಯ ಸಿರಿ ಅಕ್ಷಯವಾಗಲಿದೆ.

ನಿಮ್ಮ ಚಂದದ ಮಣಿಕಟ್ಟನ್ನು ಅಲಂಕರಿಸಲು ಸಿದ್ಧಪಡಿಸಿರುವ ಇನ್ನೊಂದು ಆಭರಣ ಈ ಸಲದ ಅಕ್ಷಯ ತದಿಗೆಯ ವಿಶೇಷ ಸಂಗ್ರಹದಲ್ಲಿದೆ. ಮಳಿಗೆಯ ಕರಕುಶಲಕರ್ಮಿಗಳು ಸಿದ್ಧಪಡಿಸಿರುವ ಈ ಬ್ರೇಸ್‌ಲೆಟ್‌ನಲ್ಲಿ ಕುಂದನ್‌ ಅಲಂಕಾರವು ಈ ಮಳಿಗೆ ಪಾರಂಪರಿಕ ಕೌಶಲ ಎದ್ದು ಕಾಣುತ್ತದೆ. 

ಜೋಡಿನವಿಲುಗಳು ಕಿವಿಯೋಲೆಯಾಗಿ ನಲಿಯಬೇಕೆ? ಈ ಸಂಗ್ರಹ ನಿಮ್ಮ ಆಸೆ ಈಡೇರಿಸಬಹುದಾಗಿದೆ. ಕಟ್‌ ಡೈಮಂಡ್‌ಗಳು, ಜಾಂಬಿಯಾ ದೇಶದ ಪಚ್ಚೆ ಮತ್ತು ರೂಬಿಗಳಿಂದ ಅಲಂಕೃತವಾಗಿರುವ ಚಿನ್ನದ ಓಲೆಗಳು ಅಕ್ಷಯ ತದಿಗೆಯ ಸಂಗ್ರಹದಲ್ಲಿ ಸ್ಥಾನ ಪಡೆದಿವೆ. ರಾಜವೈಭವವನ್ನು ನೆನಪಿಸುವಂಥ ಈ ಓಲೆಗಳು ಗ್ರಾಹಕರ ಗಮನಸೆಳೆಯುತ್ತಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT