ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT
ಪ್ರಾಯೋಜಿತ ಲೇಖನ

ಕ್ರೋಮಾ ಫ್ರಿಡ್ಜ್‌: ತಾಜಾ ವಿನ್ಯಾಸ ಮತ್ತು ತಂತ್ರಜ್ಞಾನ

Last Updated 11 ನವೆಂಬರ್ 2022, 11:46 IST
ಅಕ್ಷರ ಗಾತ್ರ

ಅಡುಗೆ ಕೋಣೆ ಈಗ ಕೇವಲ ಮನೆಯಲ್ಲಿ ಆಹಾರ ಬೇಯಿಸುವ ಭಾಗವಾಗಿ ಉಳಿದಿಲ್ಲ. ಇತ್ತೀಚಿನ ದಿನಗಳಲ್ಲಿ ಅದರ  ಅಲಂಕಾರಗಳು ಮತ್ತು ಸ್ವರೂಪವನ್ನು ಅತ್ಯಾಧುನಿಕ ತಂತ್ರಜ್ಞಾನವು ಮತ್ತಷ್ಟು ಉತ್ತಮಗೊಳಿಸಿದೆ. ಕ್ರೋಮಾ ಫ್ರಿಡ್ಜ್‌ ಅನ್ನು ಅಲಂಕಾರಿಕ ಸಾಧನವಾಗಿ ಪರಿಗಣಿಸಲಾಗುತ್ತಿದೆ ಮತ್ತು ಅದರ ಆಕರ್ಷಕ ಬಣ್ಣ ಮತ್ತು ಸ್ವರೂಪಗಳು ನಿಮ್ಮ ಅಡುಗೆ ಕೋಣೆಯ ಅಂದವನ್ನು ಹೆಚ್ಚಲಿಸಿವೆ.  
ಅಡುಗೆ ಕೋಣೆ ಕೇವಲ ಮನೆಯ ಕೆಲಸದ ಜಾಗವಾಗಿ ಉಳಿದಿಲ್ಲ. ಮನೆಯ ಆಂತರಿಕ ಭಾಗವಾಗಿದೆ. ದುಬಾರಿ ಬಾಡಿಗೆ ನೀಡುವ ನಗರಗಳಲ್ಲಿ ಮನೆಯ ಊಟದ ಕೋಣೆಗಾಗಿ ಜಾಗ ಕಾಯ್ದಿರಿಸಲು ಸಾಧ್ಯವಿಲ್ಲ. ಪರಿಣಾಮವಾಗಿ ಊಟದ ಕೋಣೆಗೂ ಅಡುಗೆ ಮನೆಯ ಜಾಗ ಬೇಕಾಗುತ್ತದೆ.  ಅಲ್ಲದೆ, ಆಧುನಿಕ ವಾಸ್ತುಶೈಲಿ ಮತ್ತು ಒಳಾಂಗಣ ಅಲಂಕಾರಗಳಿಗೆ ಹಾಲ್‌ ಜಾಗವನ್ನು ಹೆಚ್ಚು ಪಡೆಯುವ ನಿಟ್ಟಿನಲ್ಲಿ ಕಾರ್ಪೆಟ್ ಪ್ರದೇಶವನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದು, ಮನೆಯ ವಿನ್ಯಾಸದಲ್ಲಿ ಅಡುಗೆ ಮನೆಯು ಸಹ ಪ್ರಮುಖ ಪಾತ್ರ ವಹಿಸುತ್ತದೆ. ಇವೆಲ್ಲವೂ ಅಡುಗೆ ಮನೆಯು, ಮನೆಯ ನಿತ್ಯ ಬಳಕೆ ಅವಿಭಾಜ್ಯ ಅಂಗವಾಗಿ ಬದಲಾಗಲು ಕಾರಣವಾಗಿದೆ.

ಅಡುಗೆ ಕೋಣೆ ಈಗ ಅಮ್ಮನಿಗೋ, ಹೆಂಡತಿಗೋ ಮಾತ್ರ ಮೀಸಲಾದ ಜಾಗವಾಗಿ ಉಳಿದಿಲ್ಲ. ಬದಲಾಗಿ ಕುಟುಂಬದ ಜಾಗವಾಗಿದೆ. ಊಟ, ಸ್ನೇಹಿತರ ಜೊತೆಗಿನ ಹರಟೆ, ಹಬ್ಬದ ಸಮಯದ ಜೊತೆಗೆ ಊಟದ ಕೋಣೆಯಾಗಿಯೂ  ಬಳಕೆಯಾಗುತ್ತದೆ. ಇದರರ್ಥ ಅಡುಗೆ ಕೋಣೆಯನ್ನೂ ಮನೆಯ ಹಾಲ್‌ನಂತೆಯೇ ಅಲಂಕರಿಸಬೇಕಿದೆ. ಜನರು ಮನೆಯ ಈ ಅಗತ್ಯ ಭಾಗಕ್ಕೆ ಹೆಚ್ಚು ಖರ್ಚು ಮಾಡುತ್ತಿರುವುದರಲ್ಲಿ  ಮತ್ತು ಅಡುಗೆ ಉಪಕರಣಗಳು, ಗ್ಯಾಜೆಟ್‌ಗಳು ಮತ್ತು ಎಲೆಕ್ಟ್ರಾನಿಕ್ಸ್‌ನಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳು ಬೇಡಿಕೆಯನ್ನು ತ್ವರಿತವಾಗಿ ಪೂರೈಸುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ.

ಅಲಂಕಾರದಲ್ಲಿ ರೆಫ್ರಿಜರೇಟರ್‌ 
ಅಡುಗೆ ಮನೆಯ ಅತ್ಯಂತ ಪ್ರಮುಖ ಉಪಕರಣ ರೆಫ್ರಿಜರೇಟರ್‌.  ಫ್ರಿಡ್ಜ್‌(ನಾವೆಲ್ಲರೂ ಹೀಗೆ ಕರೆಯುತ್ತೇವೆ) ಈ ಜಾಗದ ಹೆಮ್ಮೆಯ ಸಂಕೇತವಾಗಿದೆ. ಇದು ಅಡುಗೆಮನೆಯಲ್ಲಿನ ಎಲ್ಲಾ ಉಪಕರಣಗಳಲ್ಲಿ ಅತಿ ದೊಡ್ಡದು ಮತ್ತು ಹೆಚ್ಚು ಬಳಕೆಯ ಉಪಕರಣ. ಫ್ರಿಡ್ಜ್‌ನ ಒಳಗಿರುವ ತಿನಿಸುಗಳು ಮಕ್ಕಳ ಸಂತೋಷವನ್ನು ಹೆಚ್ಚಿಸುತ್ತದೆ ಮತ್ತು ಊಟಕ್ಕಾಗಿ ಕಾಯಲು ಸಾಧ್ಯವಾಗದೆ ಹಸಿದವರು ದಾಳಿ ಮಾಡುವ ಸ್ಥಳವಾಗಿದೆ. ಅನಿರೀಕ್ಷಿತ ಅತಿಥಿಯಾಗಿರಲಿ, ಮಧ್ಯರಾತ್ರಿಯ ಹಸಿವಿನ ಸಂಕಟದಲ್ಲಿರುವವರಾಗಲಿ ಅಥವಾ ದೈನಂದಿನ ಅಡುಗೆಯಾಗಲಿ, ಎಲ್ಲದಕ್ಕೂ ಫ್ರಿಡ್ಜ್‌ನಲ್ಲಿ ಜಾಗವಿದೆ. 

ಇಂದು ಕೇವಲ ಕೆಲಸ ನಿರ್ವಹಿಸುವ ಉಪಕರಣವಾಗಿ ಫ್ರಿಡ್ಜ್‌ ಉಳಿದಿಲ್ಲ. ಸಾಮಾನ್ಯ ಬಿಳಿ ಬಣ್ಣದ ಫ್ರಿಡ್ಜ್‌ ತಣ್ಣಗಿಡುವುದರ ಹೊರತಾಗಿ ಬೇರೇನೂ ಮಾಡುವುದಿಲ್ಲ ಎಂಬ ಕಾಲ ಹೋಗಿದೆ. ಈಗ ಇದು ಕಾರ್ಯನಿರ್ವಹಿಸುವ ಉಪಕರಣದ ಜೊತೆಗೆ ಅಲಂಕಾರಿಕ ಉತ್ಪನ್ನವೂ ಹೌದು. ಕ್ರೋಮಾ ರೆಫ್ರಿಜರೇಟರ್‌ಗಳು ತಂತ್ರಜ್ಞಾನದಲ್ಲಿ ಉತ್ಕೃಷ್ಟವಾಗಿರುವಂತೆ, ಅಲಂಕಾರಿಕವಾಗಿಯೂ ಉತ್ತಮವಾಗಿವೆ. 
ಆಧುನಿಕ ಅಡುಗೆ ಕೋಣೆಗೆ ಅಗತ್ಯ ಶೈಲಿ ಮತ್ತು ವಿವರಣೆಯನ್ನು ಕ್ರೋಮಾ ರೆಫ್ರಿಜರೇಟರ್‌ ಹೊಂದಿದೆ. ಅಡುಗೆ ಮನೆಯೇ ಅಂದ, ವಿನ್ಯಾಸ ಮತ್ತು ಬಣ್ಣದಲ್ಲಿ ಆಕರ್ಷಣೆ ಹೊಂದಿದೆ. ಆದ್ದರಿಂದ ಗ್ಯಾಜೆಟ್‌ಗಳು ಇದರ ಒಳಾಂಗಣ ವಿನ್ಯಾಸವನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ಅಗತ್ಯವಿದೆ. ಕ್ರೋಮಾ ಫ್ರಿಡ್ಜ್‌ಗಳು ಅಂತಹ ಅಲಂಕಾರಿಕ ತುಣುಕುಗಳಾಗಿ ಕಾರ್ಯನಿರ್ವಹಿಸಿ, ಅಲಂಕಾರಿಕ ವಿನ್ಯಾಸದಲ್ಲಿ ಪ್ರಾಬಲ್ಯ ಮೆರೆಯುತ್ತವೆ. ಸೊಗಸಾದ ಮತ್ತು ಪ್ರಕಾಶಮಾನವಾದ ರೋಮಾಂಚಕ ಬಣ್ಣಗಳಲ್ಲಿರುವ ಈ ಫ್ರಿಡ್ಜ್‌ಗಳು ಯಾವುದೇ ಅಡುಗೆಮನೆ ಅಲಂಕಾರಕ್ಕೆ ಪೂರಕವಾಗಿ ಅಥವಾ ತದ್ವಿರುದ್ಧ ಬಣ್ಣದಿಂದ ಮೇಳೈಸಿ ಅಂದ ಹೆಚ್ಚಿಸಬಹುದಾಗಿವೆ.

ಅಲಂಕಾರದೊಂದಿಗೆ
ಕ್ರೋಮಾ ಫ್ರಿಡ್ಜ್‌ ಅಲಂಕಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಲವಾರು ಬಣ್ಣಗಳಲ್ಲಿ ಕಾಣಿಸಿಕೊಂಡಿದ್ದು, ಅಡುಗೆ ಕೋಣೆಗೆ ಅಗತ್ಯ ವಿನ್ಯಾಸದೊಂದಿಗೆ ಹೊಂದಿಕೊಳ್ಳುತ್ತದೆ. ಅಡುಗೆ ಕೋಣೆ ಸ್ಟೀಲ್‌ನೊಂದಿಗೆ ಕಪ್ಪು ಮತ್ತು ಕಂದು ಶೇಡ್‌ಗಳಲ್ಲಿದ್ದರೆ, ಕೋಮ್ರಾದಲ್ಲಿ ಬೆಳ್ಳಿ ಮತ್ತು ಕಪ್ಪು ಐನಾಕ್ಸ್‌ ಬಣ್ಣವಿದ್ದು, ಅದು ಅಡುಗೆ ಕೋಣೆಯ ವಿನ್ಯಾಸದೊಂದಿಗೆ ಬೆರೆತುಬಿಡುತ್ತದೆ.

ಬಿಳಿ ಮತ್ತು ನೀಲಿ ಬಣ್ಣದ ಗೋಡೆಯಿದ್ದರೆ, ಮರದ ಬಣ್ಣದ ಫಿನಿಶ್‌ ಇದ್ದರೆ, ವೈನ್‌ ರೆಡ್‌ ಫ್ರಿಡ್ಜ್‌ ಅದರ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಈ ಫ್ರಿಡ್ಜ್‌ಗಳು ಅಡುಗೆ ಕೋಣೆಯೊಂದಿಗೆ ಬೆರೆತು ಹೋಗುವ ಅಥವಾ ವಿರುದ್ಧವಾಗಿ ನಿಂತು ದೃಷ್ಟಿಯನ್ನು ಸೆಳೆಯುವ ಶೇಡ್‌ಗಳಲ್ಲಿ ಲಭ್ಯವಿದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕಾರ್ಯಗಳು ಒಂದು ಆಯಾಮವಾದರೆ, ಈ ಅಲಂಕಾರಿಕ ಆಯಾಮವೂ ಭಿನ್ನತೆಯನ್ನುಂಟು ಮಾಡುತ್ತದೆ.  ಆಹ್ಲಾದಕರ ವಾತಾವರಣದೊಂದಿಗೆ ಅಡುಗೆಮನೆಯನ್ನು ರೂಪಿಸಲು ಕ್ರೋಮಾ ಫ್ರಿಡ್ಜ್‌ಗಳು ದೊಡ್ಡ ಕೊಡುಗೆ ನೀಡುತ್ತವೆ.  ಅಡುಗೆ ಮನೆಯನ್ನು ಆಕರ್ಷಣೀಯ ಸ್ಥಳವಾಗಿ ಮತ್ತು ಮನೆಯ ಭಾಗವಾಗಿ ಮಾಡುತ್ತದೆ.  ಹೊರಗಿನ ಒತ್ತಡದ ಜೀವನದಿಂದ ಅಗತ್ಯವಿರುವ ವಿಶ್ರಾಂತಿಯನ್ನು ನೀಡುತ್ತದೆ.

ಅತ್ಯಂತ ದಕ್ಷ ಕಾರ್ಯನಿರ್ವಹಣೆಗೆ ಅಗತ್ಯ ತಂತ್ರಜ್ಞಾನ
ಕ್ರೋಮಾ ಫ್ರಿಡ್ಜ್‌ಗಳು ನಿಮ್ಮ ಅಡುಗೆ ಮನೆಯನ್ನು ಸಮರ್ಥ ಸ್ಥಳವಾಗಿಸುತ್ತದೆ ಮತ್ತು ಜೀವನವನ್ನು ಆರಾಮದಾಯಕವಾಗಿಸಲು ನೀವು ಬಯಸುವ ಎಲ್ಲಾ ವೈಶಿಷ್ಟ್ಯಗಳನ್ನು ನೀಡುತ್ತವೆ. ಡಬಲ್ ಡೋರ್, ಫ್ರಾಸ್ಟ್ ಫ್ರೀ, ಕ್ವಿಕ್ ಕೂಲಿಂಗ್, ಮಲ್ಟಿ ಏರ್ ಫ್ಲೋ ಸಿಸ್ಟಮ್, ಸೈಡ್‌ ಬೈ ಸೈಡ್‌ ರೆಫ್ರಿಜರೇಟರ್ ಮತ್ತು ವಿಸ್ತೃತ ವಾರಂಟಿ... ಈ ವೈಶಿಷ್ಟ್ಯಗಳು ಇಂಥವುಗಳನ್ನು ಖರೀದಿಸಲೇ ಬೇಕಾದಂತೆ ಪ್ರೇರೇಪಿಸುತ್ತವೆ.

ಇದು ಪ್ರಾಯೋಜಿತ ಲೇಖನ ಸರಣಿಯ ಭಾಗ.
ADVERTISEMENT
ADVERTISEMENT