ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನವೋದ್ಯಮ ತೆರಿಗೆ ವಿನಾಯಿತಿ ಮುಂದುವರಿಕೆ: ನಿರ್ಮಲಾ ಸೀತಾರಾಮನ್

Published 1 ಫೆಬ್ರುವರಿ 2024, 16:39 IST
Last Updated 1 ಫೆಬ್ರುವರಿ 2024, 16:39 IST
ಅಕ್ಷರ ಗಾತ್ರ

ನವದೆಹಲಿ: ನವೋದ್ಯಮಗಳಿಗೆ, ಸರ್ಕಾರಿ ಸ್ವಾಮ್ಯದ ಹೂಡಿಕೆ ನಿಧಿಗಳಿಂದ ಹಾಗೂ ಪಿಂಚಣಿ ನಿಧಿಗಳಿಂದ ಆಗುವ ಹೂಡಿಕೆಗಳಿಗೆ ನೀಡಿರುವ ತೆರಿಗೆ ವಿನಾಯಿತಿಗಳನ್ನು ಕೇಂದ್ರವು 2025ರ ಮಾರ್ಚ್‌ವರೆಗೆ ಮುಂದುವರಿಸಲಿದೆ.

‘ತೆರಿಗೆ ಕ್ರಮದಲ್ಲಿ ಯಥಾಸ್ಥಿತಿ ಮುಂದುವರಿಸುವ ಉದ್ದೇಶದಿಂದ ನಾನು, ತೆರಿಗೆ ವಿನಾಯಿತಿಗಳನ್ನು 2025ರ ಮಾರ್ಚ್ 31ರವರೆಗೆ ವಿಸ್ತರಿಸುವ ಪ್ರಸ್ತಾವ ಮಾಡುತ್ತಿದ್ದೇನೆ’ ಎಂದು ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್ ಭಾಷಣದಲ್ಲಿ ಹೇಳಿದರು.

ಸರ್ಕಾರವು ಮಾನ್ಯತೆ ನೀಡಿರುವ 1.17 ಲಕ್ಷ ನವೋದ್ಯಮಗಳು ‘ಸ್ಟಾರ್ಟಪ್‌ ಇಂಡಿಯಾ’ ಕ್ರಿಯಾ ಯೋಜನೆಯ ಅಡಿಯಲ್ಲಿ ತೆರಿಗೆ ವಿನಾಯಿತಿಗಳನ್ನು ಪಡೆದುಕೊಳ್ಳಬಹುದು. 

ಶಾರ್ದೂಲ್ ಅಮರಚಂದ್‌ ಮಂಗಲದಾಸ್ ಆ್ಯಂಡ್‌ ಕಂಪನಿಯ ಪಾಲುದಾರರಾದ ಗೌರಿ ಪುರಿ ಅವರು, ‘ನಿರೀಕ್ಷೆಯಂತೆಯೇ ಮಧ್ಯಂತರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ನೀತಿ ನಿಯಮಗಳ ವಿಚಾರದಲ್ಲಿ ಸಂಯಮ ಕಾಯ್ದುಕೊಂಡಿದೆ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ತೆರಿಗೆ ವಿನಾಯಿತಿಗಳನ್ನು ಮುಂದುವರಿಸುವ ಘೋಷಣೆಯು ಸ್ವಾಗತಾರ್ಹ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT