ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಪ್ರದಾಯಿಕ ಕೆಲಸದ ಮೇಲೆ ‘ಗಿಗ್‌’ ಕರಿನೆರಳು

Published 13 ಮಾರ್ಚ್ 2024, 16:25 IST
Last Updated 13 ಮಾರ್ಚ್ 2024, 16:25 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಗಿಗ್‌ ಕೆಲಸದ ಪ್ರವೃತ್ತಿಯು ಭವಿಷ್ಯದಲ್ಲಿ ಸಾಂಪ್ರದಾಯಿಕ ಕೆಲಸ ಪದ್ಧತಿಯ ಮೇಲೆ ಕರಿನೆರಳು ಬೀರಲಿದೆ ಎಂದು ಜೀನಿಯಸ್‌ ಕನ್ಸಲ್ಟೆಸ್ಸಿ ವರದಿ ಹೇಳಿದೆ.

ಪ್ರಸ್ತುತ ದೇಶದಲ್ಲಿ ಮಾಲೀಕರ ಕೈಕೆಳಗೆ ನಿಗದಿಯಾದ ಕೆಲಸ ಮಾಡದೆ ಸ್ವತಂತ್ರವಾಗಿ ಕೆಲಸ ಮಾಡುವಂತಹ ಪ್ರವೃತ್ತಿ ಹೆಚ್ಚುತ್ತಿದೆ. ಇದು ಸಾಂಪ್ರದಾಯಿಕ ಕೆಲಸ ಪದ್ಧತಿಯ ಮೇಲೆ ಗಂಭೀರವಾದ ಪರಿಣಾಮ ಬೀರಲಿದೆ ಎಂದು ತಿಳಿಸಿದೆ.

ಈ ಬಗ್ಗೆ ಜೀನಿಯಸ್‌ ಕನ್ಸಲ್ಟೆಸ್ಸಿಯು ಬ್ಯಾಂಕಿಂಗ್‌, ಫೈನಾನ್ಸ್‌, ಶಿಕ್ಷಣ, ಎಫ್‌ಎಂಜಿ, ಹಾಸ್ಪಿಟಾಲಿಟಿ, ಮಾನವ ಸಂಪನ್ಮೂಲ, ಮಾಹಿತಿ ತಂತ್ರಜ್ಞಾನ ಹಾಗೂ ತಯಾರಿಕಾ ವಲಯದ 1,310 ಉದ್ಯೋಗಿಗಳನ್ನು ಆನ್‌ಲೈನ್‌ನಲ್ಲಿ ಸಮೀಕ್ಷೆ ನಡೆಸಿ ಈ ವರದಿ ಸಿದ್ಧಪಡಿಸಿದೆ. ‌

ಈ ಪೈಕಿ 80ಕ್ಕೂ ಹೆಚ್ಚು ಉದ್ಯೋಗಿಗಳು ಮುಂದಿನ ದಿನಗಳಲ್ಲಿ ‘ಸಾಂಪ್ರದಾಯಿಕ ಕೆಲಸ ಪದ್ಧತಿ’ಯು ನಿಧಾನಗತಿಯಲ್ಲಿ ಕಡಿಮೆಯಾಗುವ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದು ಉದ್ಯೋಗ ಕ್ಷೇತ್ರದಲ್ಲಿ ಹೊಸ ಮಾದರಿಯ ಬದಲಾವಣೆಯ ಸೂಚಕವಾಗಿದೆ ಎಂದು ವರದಿ ತಿಳಿಸಿದೆ.‌‌‌

ಸಾಂಪ್ರದಾಯಿಕ, ಕಾಯಂ, ಗುತ್ತಿಗೆ ಕೆಲಸದ ಪದ್ಧತಿಗೆ ಹೋಲಿಸಿದರೆ ಗಿಗ್‌ ಕೆಲಸವು ಆರ್ಥಿಕ ವೆಚ್ಚದ ಕಡಿತಕ್ಕೆ ಸಹಕಾರಿಯಾಗಿದೆ. ಹಲವು ಉದ್ಯಮಗಳಲ್ಲಿ ಗಿಗ್‌ ಮಾದರಿ ಅಳವಡಿಕೊಂಡರೆ ಅನುಕೂಲವಾಗಲಿದೆ ಎಂದು ಶೇ 79ರಷ್ಟು ಉದ್ಯೋಗಿಗಳು ಇಂಗಿತ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT