ಅದಾನಿ ಸಮೂಹದ ಅಧ್ಯಕ್ಷ ಕಿಶೋರ್‌ ಆಳ್ವ

ಭಾನುವಾರ, ಮಾರ್ಚ್ 24, 2019
31 °C

ಅದಾನಿ ಸಮೂಹದ ಅಧ್ಯಕ್ಷ ಕಿಶೋರ್‌ ಆಳ್ವ

Published:
Updated:
Prajavani

ಪಡುಬಿದ್ರಿ: ಅದಾನಿ ಸಮೂಹ ಸಂಸ್ಥೆಯ ಜಂಟಿ ಅಧ್ಯಕ್ಷ ಕಿಶೋರ್‌ ಆಳ್ವ ಅವರು ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನಿಯುಕ್ತರಾಗಿದ್ದಾರೆ.

ಅವರು ದಕ್ಷಿಣ ಭಾರತದಲ್ಲಿ ಸಮೂಹದ ವಿವಿಧ ಯೋಜನೆಗಳ ಹೊಣೆ ನಿರ್ವಹಿಸಲಿದ್ದಾರೆ.

ಲೆನ್‌ಡೆನ್‌ ಕ್ಲಬ್‌ನ ವಿಸ್ತರಣಾ ಯೋಜನೆ

ಬೆಂಗಳೂರು: ವ್ಯಕ್ತಿಗಳು ಮತ್ತು ಉದ್ದಿಮೆದಾರರಿಗೆ ಆನ್‌ಲೈನ್‌ನಲ್ಲಿ ಸಾಲ ಸೌಲಭ್ಯ ಒದಗಿಸುವ ಬ್ಯಾಂಕೇತರ ಹಣಕಾಸು ಸಂಸ್ಥೆ ಲೆನ್‌ಡೆನ್‌ ಕ್ಲಬ್‌ ಸದಸ್ಯರ ಸಂಖ್ಯೆಯು ಒಂದು ಲಕ್ಷಕ್ಕೆ ತಲುಪಿದೆ.

‘ಇವರಲ್ಲಿ 83 ಸಾವಿರ ಸಾಲಗಾರರು ಮತ್ತು 17 ಸಾವಿರ ಸಾಲದಾತರು ಇದ್ದಾರೆ. ಸಂಸ್ಥೆಯು ಹಿಂದಿನ ವರ್ಷ ಆರಂಭಿಸಿದ್ದ ‘ಇನ್‌ಸ್ಟಾಮನಿ’ ಯೋಜನೆಯು ಹೆಚ್ಚು ಜನರನ್ನು ಆಕರ್ಷಿಸಿದೆ’ ಎಂದು ಸಿಇಒ ಭಾವಿನ್‌ ಪಟೇಲ್ ಹೇಳಿದ್ದಾರೆ.

‘ಸಾಲದ ತ್ವರಿತ ಅನುಮೋದನೆ ಹಾಗೂ ವಿತರಣಾ ಪ್ರಕ್ರಿಯೆಯಿಂದಾಗಿ ಇದು ವ್ಯಾಪಕ ಜನಪ್ರಿಯತೆ ಗಳಿಸಿದೆ. ಸಣ್ಣ ವ್ಯಾಪಾರಕ್ಕೆ ಸಾಲ ಒದಗಿಸುವ ಪ್ರಾಯೋಗಿಕ ಯೋಜನೆಯನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಲಾಗಿದೆ’ ಎಂದು ಭಾವಿನ್‌ ಅವರು
ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !