ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಅತಿದೊಡ್ಡ ಪ್ಲೇ ವುಡ್‌ ತಯಾರಿಕೆ ಘಟಕ ಲೋಕಾರ್ಪಣೆ

Published 23 ಡಿಸೆಂಬರ್ 2023, 15:27 IST
Last Updated 23 ಡಿಸೆಂಬರ್ 2023, 15:27 IST
ಅಕ್ಷರ ಗಾತ್ರ

ಕೋಲ್ಕತ್ತ : ಆಂಧ್ರಪ್ರದೇಶದ ಬದ್ವೆಲ್‌ನಲ್ಲಿ ಸೆಂಚುರಿ ಪ್ಲೇ ಬೋರ್ಡ್‌ (ಇಂಡಿಯಾ) ಕಂಪನಿಯಿಂದ ನಿರ್ಮಿಸಿರುವ ದೇಶದ ಅತಿದೊಡ್ಡ ಪ್ಲೇ ವುಡ್‌ ತಯಾರಿಕಾ ಘಟಕವು ಶನಿವಾರ ಲೋಕಾರ್ಪಣೆಗೊಂಡಿತು.

100 ಎಕರೆ ಪ್ರದೇಶದಲ್ಲಿ ವಿಸ್ತರಿಸಿರುವ ಈ ಘಟಕದಲ್ಲಿ ಕಂಪನಿಯು ಮೊದಲ ಹಂತದಲ್ಲಿ ₹950 ಕೋಟಿ ಹೂಡಿಕೆ ಮಾಡಿದೆ. ಎರಡನೇ ಹಂತದಲ್ಲಿ ₹1 ಸಾವಿರ ಕೋಟಿ ಹೂಡಕೆಗೆ ನಿರ್ಧರಿಸಿದೆ. ಮುಂದಿನ ಐದು ವರ್ಷಗಳಲ್ಲಿ ಪ್ರತ್ಯೇಕ ಹಾಗೂ ಪರೋಕ್ಷವಾಗಿ ಎರಡು ಸಾವಿರ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ದೇಶದ ಅತಿದೊಡ್ಡ ಪ್ಲೇ ವುಡ್‌ ತಯಾರಿಕಾ ಕಂಪನಿಯಾಗಿರುವ ಸೆಂಚುರಿ ಪ್ಲೇ ಬೋರ್ಡ್‌ ಹೇಳಿದೆ.

ಮುಖ್ಯಮಂತ್ರಿ ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿ ಅವರು ಘಟಕವನ್ನು ಲೋಕಾರ್ಪಣೆಗೊಳಿಸಿದರು. ಈ ವೇಳೆ ಕಂಪನಿಯ ಮುಖ್ಯಸ್ಥ ಸಜ್ಜನ್ಭ ಜಂಕ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

‘ಆಂಧ್ರಪ್ರದೇಶದ ಕೈಗಾರಿಕಾ ಭೂಪಟದಲ್ಲಿ ಕಡಪ ಜಿಲ್ಲೆಗೆ ಪ್ರಮುಖ ಸ್ಥಾನವಿದೆ. ಇಲ್ಲಿ ಕೈಗಾರಿಕಾ ಸಂಪನ್ಮೂಲಗಳು ಹೇರಳವಾಗಿವೆ. ಈ ಪ್ರದೇಶದಲ್ಲಿ ಕೃಷಿ–ಕೈಗಾರಿಕಾ ಚಟುವಟಿಕೆಗಳ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಿದೆ. ಕಂಪನಿ ಬಂಡವಾಳ ಹೂಡಿರುವುದು ಇತರೇ ಉದ್ದಿಮೆಗಳು ಇಲ್ಲಿ ಬಂಡವಾಳ ಹೂಡಿಕೆಗೆ ಅನುಕೂಲವಾಗಲಿದೆ’ ಎಂದು ಕಂಪನಿಯ ಮುಖ್ಯಸ್ಥ ಸಜ್ಜನ್ ಭಜಂಕ ಹೇಳಿದ್ದಾರೆ.

‘ಈ ಘಟಕವು ಮಧ್ಯಮ ಸಾಂದ್ರತೆಯ ಫೈಬರ್ (ಎಂಡಿಎಫ್‌) ಹಾಗೂ ಪಿವಿಸಿ ಘಟಕಗಳನ್ನು ಒಳಗೊಂಡಿದೆ’ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಪ್ಲೇ ವುಡ್‌ ಕೈಗಾರಿಕೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಕಂಪನಿಯ ಕಾರ್ಯ ಚಟುವಟಿಕೆ ವಿಸ್ತರಣೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಆಂಧ್ರಪ್ರದೇಶ ಸರ್ಕಾರವೂ ಭರವಸೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT