ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂದ್ಯದ ಸಮತೋಲನಕ್ಕೆ ಅಡ್ಡಿಯಾದ 'ಇಂಪ್ಯಾಕ್ಟ್ ಪ್ಲೇಯರ್': ವಿರಾಟ್ ಕೊಹ್ಲಿ

Published 18 ಮೇ 2024, 9:09 IST
Last Updated 18 ಮೇ 2024, 9:09 IST
ಅಕ್ಷರ ಗಾತ್ರ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಆಳವಡಿಸಲಾಗಿರುವ 'ಇಂಪ್ಯಾಕ್ಟ್ ಪ್ಲೇಯರ್' ನಿಯಮವು ಪಂದ್ಯದ ಸಮತೋಲನಕ್ಕೆ ಅಡ್ಡಿಯಾಗಿದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಇದರೊಂದಿಗೆ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ವಿರೋಧಿಸಿರುವ ರೋಹಿತ್ ಶರ್ಮಾ ಅವರ ಅಭಿಪ್ರಾಯಕ್ಕೆ ಬೆಂಬಲ ಸೂಚಿಸಿದ್ದಾರೆ.

'ರೋಹಿತ್ ಅವರ ಅಭಿಪ್ರಾಯಕ್ಕೆ ನನ್ನ ಸಹಮತ ಇದೆ. ಮನರಂಜನೆಯು ಆಟದ ಒಂದು ಅಂಶವಾದರೆ ಮತ್ತೊಂದೆಡೆ ಪಂದ್ಯದಲ್ಲಿ ಯಾವುದೇ ಸಮತೋಲನ ಇರುವುದಿಲ್ಲ' ಎಂದು ಹೇಳಿದ್ದಾರೆ.

'ಈ ನಿಯಮವು ಪಂದ್ಯದ ಸಮತೋಲನಕ್ಕೆ ಅಡ್ಡಿಪಡಿಸಿದೆ. ಇದು ನನ್ನ ಅಭಿಪ್ರಾಯ ಮಾತ್ರವಲ್ಲ, ಬಹಳಷ್ಟು ಆಟಗಾರರು ಇದೇ ರೀತಿ ಭಾವಿಸುತ್ತಿದ್ದಾರೆ' ಎಂದು ಅವರು ಹೇಳಿದ್ದಾರೆ.

'ಈ ನಿಯಮದಿಂದಾಗಿ ಬೌಲರ್‌ಗಳಿಗೆ ತಾವೇನು ಮಾಡಬೇಕೆಂದು ತೋಚುತ್ತಿಲ್ಲ. ಪ್ರತಿ ಎಸೆತದಲ್ಲೂ ಸಿಕ್ಸರ್ ಅಥವಾ ಬೌಂಡರಿ ಬಿಟ್ಟುಕೊಡಬೇಕಾಗುತ್ತದೆ ಎಂಬ ಭಾವನೆಯನ್ನು ಬೌಲರ್‌ಗಳು ಎಂದಿಗೂ ಅನುಭವಿಸಿರಲಿಲ್ಲ. ಪ್ರತಿ ತಂಡವು ಜಸ್‌ಪ್ರೀತ್ ಬೂಮ್ರಾ ಅಥವಾ ರಶೀದ್ ಖಾನ್ ಅವರಂತಹ ಆಟಗಾರರನ್ನು ಹೊಂದಿಲ್ಲ' ಎಂದು ಕೊಹ್ಲಿ ತಿಳಿಸಿದ್ದಾರೆ.

'ಬ್ಯಾಟ್ ಹಾಗೂ ಚೆಂಡಿನ ನಡುವೆ ಉತ್ತಮ ಸಮತೋಲನ ಕಾಪಾಡಿಕೊಳ್ಳಬೇಕು. ಅದುವೇ ಕ್ರಿಕೆಟ್‌ ಆಟದ ಸೌಂದರ್ಯವಾಗಿದೆ' ಎಂದು ಅವರು ಹೇಳಿದ್ದಾರೆ.

'ಇಂಪ್ಯಾಕ್ಟ್ ಪ್ಲೇಯರ್ ನಿಯಮವು ಆಲ್‌ರೌಂಡರ್‌ಗಳ ಬೆಳವಣಿಗೆಗೆ ಅಡ್ಡಿಯಾಗಲಿದೆ. ಕ್ರಿಕೆಟ್ ಆಟ 12 ಅಲ್ಲ, 11 ಆಟಗಾರೊಂದಿಗೆ ಆಡುವ ಆಟವಾಗಿದೆ' ಎಂದು ರೋಹಿತ್ ಶರ್ಮಾ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT