ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯ ಬಳಕೆ ಸಿಲಿಂಡರ್‌ ದರ ₹39 ಇಳಿಕೆ

Published 22 ಡಿಸೆಂಬರ್ 2023, 7:02 IST
Last Updated 22 ಡಿಸೆಂಬರ್ 2023, 7:02 IST
ಅಕ್ಷರ ಗಾತ್ರ

ನವದೆಹಲಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ಶುಕ್ರವಾರ ₹39.50ರಷ್ಟು ಇಳಿಕೆ ಆಗಿದೆ.

14.2 ಕೆ.ಜಿಯ ಗೃಹ ಬಳಕೆ ಸಿಲಿಂಡರ್‌ ದರವು ಯಥಾಸ್ಥಿತಿಯಲ್ಲಿದ್ದು, ₹903 ಇದೆ. ವಾಣಿಜ್ಯ ಬಳಕೆಯ 19 ಕೆ.ಜಿ. ತೂಕದ ಸಿಲಿಂಡರ್‌ ಬೆಲೆಯು ದೆಹಲಿಯಲ್ಲಿ  ₹1,757, ಮುಂಬೈ ₹1,710, ಕೋಲ್ಕತ್ತ ₹1,868 ಮತ್ತು ಚೆನ್ನೈನಲ್ಲಿ ₹1,929 ಇದೆ ಎಂದು ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ತಿಳಿಸಿವೆ. ಪೆಟ್ರೋಲ್‌ ಮತ್ತು ಡಿಸೇಲ್‌ ಬೆಲೆಯು ಸ್ಥಿರವಾಗಿದ್ದು, ದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ ₹96.72 ಮತ್ತು ಡಿಸೇಲ್‌ ₹89.62 ಇದೆ.

ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಕೊನೆಯದಾಗಿ ಡಿಸೆಂಬರ್ 1ರಂದು ವಾಣಿಜ್ಯ ಬಳಕೆ ಎಲ್‌ಪಿಜಿ ದರವನ್ನು ₹21 ಹೆಚ್ಚಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT