ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

65 ನಗರಗಳಿಗೆ 5,645 ಎಲೆಕ್ಟ್ರಿಕ್‌ ಬಸ್‌‌

Last Updated 29 ಜುಲೈ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ‘ಪರಿಸರ ಸ್ನೇಹಿ ವಾಹನಗಳ ಬಳಕೆಯ ಉದ್ದೇಶದಿಂದ 65 ನಗರಗಳಲ್ಲಿ ವಿದ್ಯುತ್‌ ಚಾಲಿತ 5,645 ಬಸ್‌ಗಳಿಗೆ ಅಂತರ್‌ ಸಚಿವಾಲಯ ಸಮಿತಿ ಅನುಮತಿ ನೀಡಿದೆ’ ಎಂದು ನೀತಿ ಆಯೋಗದ ಸಿಇಒ ಅಮಿತಾಭ್‌ ಕಾಂತ್‌ ತಿಳಿಸಿದ್ದಾರೆ.

65 ನಗರಗಳಲ್ಲಿ ನಗರದೊಳಗೆ ಮತ್ತುರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ 8 ವಿಭಾಗಗಳ ವ್ಯಾಪ್ತಿಯಲ್ಲಿನ ನಗರಗಳ ಮಧ್ಯೆ ಸಂಚರಿಸಲು ಅನುಮತಿ ನೀಡಿದೆ ಎಂದು ಹೇಳಿದ್ದಾರೆ.

2023ರ ಮಾರ್ಚ್‌ 31ರ ನಂತರ ದೇಶದಲ್ಲಿ ಮಾರಾಟವಾಗುವ ತ್ರಿಚಕ್ರ ವಾಹನ ವಿದ್ಯುತ್‌ ಚಾಲಿತವಾಗಿರಬೇಕು. ಹಾಗೆಯೇ, 2025ರ ಮಾರ್ಚ್ 31ರ ನಂತರ ಮಾರಾಟ ವಾಗುವ 150 ಸಿಸಿಗಿಂತ ಕಡಿಮೆ ಸಾಮರ್ಥ್ಯದ ದ್ವಿಚಕ್ರವಾಹನ ವಿದ್ಯುತ್‌ ಚಾಲಿತವಾಗಿರಬೇಕು ಎಂದು ನೀತಿ ಆಯೋಗ ಸಲಹೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT