ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿನ ಪಿಂಚಣಿ: ವೇತನದ ಮಾಹಿತಿ ಸಲ್ಲಿಕೆಗೆ ಡಿ.31ರವರೆಗೆ ಅವಕಾಶ

Published 29 ಸೆಪ್ಟೆಂಬರ್ 2023, 16:23 IST
Last Updated 29 ಸೆಪ್ಟೆಂಬರ್ 2023, 16:23 IST
ಅಕ್ಷರ ಗಾತ್ರ

ನವದೆಹಲಿ: ಹೆಚ್ಚಿನ ಪಿಂಚಣಿಗೆ ಅರ್ಜಿ ಸಲ್ಲಿಸುವ ನೌಕರರ ವೇತನದ ಮಾಹಿತಿಗಳನ್ನು ಜಾಲತಾಣಕ್ಕೆ ಅಪ್‌ಲೋಡ್‌ ಮಾಡಲು ಉದ್ಯೋಗದಾತರಿಗೆ ಡಿಸೆಂಬರ್ 31ರವರೆಗೆ ಅವಕಾಶ ನೀಡಲಾಗಿದೆ.

ವೇತನದ ಮಾಹಿತಿಗಳನ್ನು ಅಪ್‌ಲೋಡ್‌ ಮಾಡಲು ಶನಿವಾರ ಅಂತಿಮ ದಿನವಾಗಿತ್ತು. ಆದರೆ, ಉದ್ಯೋಗದಾತರು ಮತ್ತು ಉದ್ಯೋಗದಾತರ ಒಕ್ಕೂಟದ ಮನವಿಯ ಮೇರೆಗೆ ಗಡುವನ್ನು ಮೂರು ತಿಂಗಳವರೆಗೆ ವಿಸ್ತರಿಸಲಾಗಿದೆ ಎಂದು ಕಾರ್ಮಿಕ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ಶುಕ್ರವಾರದವರೆಗಿನ ಮಾತಿಯ ಪ್ರಕಾರ, ಇನ್ನೂ 5.52 ಲಕ್ಷ ಅರ್ಜಿಗಳನ್ನು ಉದ್ಯೋಗದಾತರು ದೃಢಪಡಿಸಬೇಕಿದೆ. ಹೀಗಾಗಿ ಕೇಂದ್ರೀಯ ಧರ್ಮದರ್ಶಿಗಳ ಮಂಡಳಿಯು ಅನುಕಂಪದ ಆಧಾರದ ಮೇಲೆ ಮನವಿಯನ್ನು ಪರಿಗಣಿಸಿದೆ ಎಂದು ಸಚಿವಾಲಯವು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT