ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೀಸೆಲ್‌ ವಾಹನ ಮಾರಾಟ ನಿಲ್ಲಿಸುವುದಿಲ್ಲ: ಫೋರ್ಡ್‌

Last Updated 30 ಏಪ್ರಿಲ್ 2019, 16:18 IST
ಅಕ್ಷರ ಗಾತ್ರ

ನವದೆಹಲಿ: ‘ಭಾರತದಲ್ಲಿ ಡೀಸೆಲ್‌ ಎಂಜಿನ್‌ ವಾಹನಗಳ ಮಾರಾಟ ನಿಲ್ಲಿಸುವ ಯಾವುದೇ ಚಿಂತನೆ ಇಲ್ಲ’ ಎಂದು ಫೋರ್ಡ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ವಿನಯ್‌ ರೈನಾ ತಿಳಿಸಿದ್ದಾರೆ.

‘2020ರ ಏಪ್ರಿಲ್‌1ರ ಗಡುವಿಗೂ ಮೊದಲೇಬಿಎಸ್‌–6 ಮಾನದಂಡಕ್ಕೆ ಅನುಗುಣವಾಗಿ ಡೀಸೆಲ್‌ ಎಂಜಿನ್‌ ಮಾದರಿಗಳು ಸಿದ್ಧಗೊಂಡಿವೆ. ಭಾರತದ ಗ್ರಾಹಕರಿಗೆ ನೀಡುತ್ತಿರುವ ಆಯ್ಕೆಯ ಅವಕಾಶವನ್ನು ಮುಂದುವರಿಸಲಾಗುವುದು’ ಎಂದು ಅವರು ಹೇಳಿದ್ದಾರೆ.

‘ಒಟ್ಟಾರೆ ವಾಹನ ಖರೀದಿಯಲ್ಲಿ ಪೆಟ್ರೋಲ್‌ ಎಂಜಿನ್‌ಗೆ ಹೋಲಿಸಿದರೆ ಶೇ 65 ರಷ್ಟು ಮಂದಿ ಡೀಸೆಲ್ ಎಂಜಿನ್‌ ಇರುವ ಇಕೊಸ್ಪೋರ್ಟ್ಸ್‌ ಖರೀದಿಸುತ್ತಿದ್ದಾರೆ. ಸದ್ಯ, ಡೀಸೆಲ್‌ ವಾಹನಗಳಿಗೆ ಬೇಡಿಕೆ ಇದೆ. 2020ರ ನಂತರವೂ ಬೇಡಿಕೆ ಹೆಚ್ಚಾಗಲಿದೆ ಎಂದು ನಂಬಿದ್ದೇವೆ.

‘ಬಿಎಸ್‌–6ನಿಂದಾಗಿ ವಾಹನಗಳ ಬೆಲೆ ಶೇ 8 ರಿಂದ ಶೇ 10ರವರೆಗೂ ಏರಿಕೆಯಾಗಲಿದೆ. ಡೀಸೆಲ್‌ ವಾಹನಗಳ ಬೆಲೆಯಲ್ಲಿ ಮಾತ್ರವೇ ಏರಿಕೆ ಆಗುವುದಿಲ್ಲ. ಎಲ್ಲಾ ಮಾದರಿಯ ಬೆಲೆಯೂ ಹೆಚ್ಚಾಗಲಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT