ನವದೆಹಲಿ/ಬೆಂಗಳೂರು: ದೇಶದಾದ್ಯಂತ ಚಿನ್ನದ ಧಾರಣೆ ಬುಧವಾರ ಗರಿಷ್ಠ ₹ 457ರಂತೆ ಏರಿಕೆಯಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆ ಆಗಿರುವುದು ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯ ಇಳಿಕೆ ಕಂಡಿರುವುದರಿಂದಾಗಿ ಚಿನ್ನದ ದರ ಹೆಚ್ಚಾಗಿದೆ ಎಂದು ಎಚ್ಡಿಎಫ್ಸಿ ಸೆಕ್ಯುರಿಟೀಸ್ ತಿಳಿಸಿದೆ.
ಬೆಂಗಳೂರಿನಲ್ಲಿ 10 ಗ್ರಾಂ ದರ ₹ 457ರಂತೆ ಹೆಚ್ಚಾಗಿ ₹48,609ಕ್ಕೆ ಹಾಗೂ ದೆಹಲಿಯಲ್ಲಿ ₹ 423ರಂತೆ ಹೆಚ್ಚಾಗಿ ₹ 49,352ಕ್ಕೆ ಏರಿಕೆಯಾಗಿದೆ.
ಬೆಳ್ಳಿ ಧಾರಣೆಯೂ ಕೆ.ಜಿಗೆ ಬೆಂಗಳೂರಿನಲ್ಲಿ ₹ 600 ಮತ್ತು ದೆಹಲಿಯಲ್ಲಿ ₹ 174 ಹೆಚ್ಚಾಗಿದ್ದು, ಕ್ರಮವಾಗಿ ₹ 49,500 ಮತ್ತು ₹ 49,666ರಂತೆ ಮಾರಾಟವಾಗಿದೆ.