ಭಾನುವಾರ, ಏಪ್ರಿಲ್ 2, 2023
23 °C

ಬಡ್ಡಿ ದರ ಹೆಚ್ಚಿಸಿದ ಎಚ್‌ಡಿಎಫ್‌ಸಿ ಬ್ಯಾಂಕ್

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್‌ ಆಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್, ಎಂಸಿಎಲ್‌ಆರ್ ಆಧಾರಿತ ಸಾಲದ ಬಡ್ಡಿ ದರವನ್ನು ಶೇಕಡ 0.20ರಷ್ಟು ಹೆಚ್ಚಿಸುತ್ತಿರುವುದಾಗಿ ಗುರುವಾರ ಹೇಳಿದೆ.

ಸಾಲದ ಬಡ್ಡಿ ದರವನ್ನು ಎಚ್‌ಡಿಎಫ್‌ಸಿ ಬ್ಯಾಂಕ್‌ ಹೆಚ್ಚಿಸುತ್ತಿರುವುದು ಮೇ ನಂತರ ಇದು ಮೂರನೆಯ ಬಾರಿ. ಈಗಿನ ಹೆಚ್ಚಳವನ್ನೂ ಪರಿಗಣಿಸಿದರೆ, ಬಡ್ಡಿ ದರವು ಒಟ್ಟು ಶೇ 0.80ರಷ್ಟು ಜಾಸ್ತಿ ಆದಂತಾಗಿದೆ.

ಒಂದು ವರ್ಷ ಅವಧಿಯ ಎಂಸಿಎಲ್‌ಆರ್ ಆಧಾರಿತ ಬಡ್ಡಿ ದರವು ಇನ್ನು ಶೇ 8.05 ಆಗಲಿದೆ. ಅದು ಈವರೆಗೆ ಶೇ 7.85 ಆಗಿತ್ತು. ಮೂರು ವರ್ಷಗಳ ಅವಧಿಯ ಬಡ್ಡಿ ದರವು ಶೇ 8.25 ಆಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು