ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ₹1 ಲಕ್ಷ ಕೋಟಿ ನಷ್ಟ

Published 17 ಜನವರಿ 2024, 16:06 IST
Last Updated 17 ಜನವರಿ 2024, 16:06 IST
ಅಕ್ಷರ ಗಾತ್ರ

ನವದೆಹಲಿ: ಷೇರುಪೇಟೆಯಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಷೇರುಗಳು ಇಳಿಕೆಯಾಗಿದ್ದು, ಕಂಪನಿಯ ಮಾರುಕಟ್ಟೆ ಮೌಲ್ಯವೂ ನಷ್ಟ ಕಂಡಿದೆ.  

ಬಿಎಸ್‌ಇಯಲ್ಲಿ ಶೇ 8.46ರಷ್ಟು ಇಳಿಕೆ ಕಂಡು, ಪ್ರತಿ ಷೇರಿನ ಬೆಲೆ ₹1,536ಕ್ಕೆ ಮುಟ್ಟಿತ್ತು. ಎನ್‌ಎಸ್‌ಇಯಲ್ಲಿ ಷೇರಿನ ಬೆಲೆ ಶೇ 8.15ರಷ್ಟು ಕಡಿಮೆಯಾಗಿ, ಪ್ರತಿ ಷೇರಿಗೆ ₹1,542ಕ್ಕೆ ಕೊನೆಗೊಂಡಿತು. ಕಂಪನಿಯ ಮಾರುಕಟ್ಟೆ ಬಂಡವಾಳ (ಎಂ–ಕ್ಯಾಪ್‌) ₹1.07 ಲಕ್ಷ ಕೋಟಿ ನಷ್ಟ ಕಂಡಿದೆ. 

2023ರ ಡಿಸೆಂಬರ್ ತ್ರೈಮಾಸಿಕದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ ₹17,258 ಕೋಟಿ ನಿವ್ವಳ ಲಾಭ ಗಳಿಸಿತ್ತು. ಆದರೆ, ಈ ಗಳಿಕೆಯು ಹೂಡಿಕೆದಾರರನ್ನು ಸೆಳೆಯಲು  ವಿಫಲವಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT