ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಧೋರ್‌ ಐಐಎಂ ವಿದ್ಯಾರ್ಥಿಗೆ ವಾರ್ಷಿಕ ₹1 ಕೋಟಿ ವೇತನ

Published 13 ಫೆಬ್ರುವರಿ 2024, 15:32 IST
Last Updated 13 ಫೆಬ್ರುವರಿ 2024, 15:32 IST
ಅಕ್ಷರ ಗಾತ್ರ

ಇಂಧೋರ್‌ : ಇಂಧೋರ್‌ನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನ (ಐಐಎಂ) ವಿದ್ಯಾರ್ಥಿಗೆ ಇ–ಕಾಮರ್ಸ್‌ ಕಂಪನಿಯೊಂದರಲ್ಲಿ ವಾರ್ಷಿಕ ₹1 ಕೋಟಿ ವೇತನದ ಉದ್ಯೋಗ ದೊರೆಕಿದೆ.  ‌

ಪ್ರಸಕ್ತ ವರ್ಷ ಸಂಸ್ಥೆಯಲ್ಲಿ ನಡೆದ ಉದ್ಯೋಗ ನೇಮಕಾತಿಯ ಅಂತಿಮ ಸುತ್ತಿನಲ್ಲಿ ದೊರೆತಿರುವ ಅತಿಹೆಚ್ಚಿನ ವಾರ್ಷಿಕ ವೇತನದ ಪ್ಯಾಕೇಜ್ ಇದಾಗಿದೆ.‌

‘ಇ–ಕಾಮರ್ಸ್‌ ಕಂಪನಿಯ ಮಾರಾಟ ಮತ್ತು ಮಾರುಕಟ್ಟೆ ವಿಭಾಗದಲ್ಲಿ ಈ ವಿದ್ಯಾರ್ಥಿಗೆ ದೇಶದಲ್ಲಿಯೇ ಕೆಲಸ ನಿರ್ವಹಿಸಲು ಅವಕಾಶ ಲಭಿಸಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.‌

ಮಾಹಿತಿ ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೊಸ ನೇಮಕಾತಿ ಪ್ರಕ್ರಿಯೆ ನಿಧಾನಗತಿಯಲ್ಲಿದೆ. ಈ ನಡುವೆಯೂ ಐಐಎಂನಲ್ಲಿ ಸ್ನಾತಕೋತ್ತರ ಪದವಿ ಮತ್ತು ಐದು ವರ್ಷದ ಇಂಟಿಗ್ರೇಟೆಡ್‌ ಪದವಿ ಅಧ್ಯಯನ ಮಾಡುತ್ತಿರುವ 594 ವಿದ್ಯಾರ್ಥಿಗಳಿಗೆ 150ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ನೀಡಿವೆ. ಇದು ಸಂಸ್ಥೆ ಮತ್ತು ವಿದ್ಯಾರ್ಥಿಗಳ ಮೇಲೆ ಇಟ್ಟಿರುವ ಅಚಲ ನಂಬಿಕೆಗೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.  

ಉದ್ಯೋಗ ಪಡೆದಿರುವ ವಿದ್ಯಾರ್ಥಿಗಳ ವಾರ್ಷಿಕ ಸರಾಸರಿ ಸಂಬಳ (ಸಿಟಿಸಿ) ₹25.68 ಲಕ್ಷವಿದೆ ಎಂದು ತಿಳಿಸಿದ್ದಾರೆ. ‌ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT