ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ಟ್ರಿಲಿಯನ್‌ ಡಾಲರ್‌ಗೆ ಬಿಎಸ್‌ಇ ಮೌಲ್ಯ

Published 29 ನವೆಂಬರ್ 2023, 14:55 IST
Last Updated 29 ನವೆಂಬರ್ 2023, 14:55 IST
ಅಕ್ಷರ ಗಾತ್ರ

ನವದೆಹಲಿ: ಮುಂಬೈ ಷೇರುಪೇಟೆಯ (ಬಿಎಸ್‌ಇ) ಮಾರುಕಟ್ಟೆ ಬಂಡವಾಳ ಮೌಲ್ಯವು ಬುಧವಾರದ ವಹಿವಾಟಿನಲ್ಲಿ ದಾಖಲೆಯ 4 ಟ್ರಿಲಿಯನ್‌ ಡಾಲರ್‌ಗೆ (₹333.29 ಲಕ್ಷ ಕೋಟಿ) ಏರಿಕೆ ಕಂಡಿದ್ದು, ಹೊಸ ಮೈಲಿಗಲ್ಲು ತಲುಪಿದೆ.

ಷೇರುಪೇಟೆಯು ಎರಡೂವರೆ ವರ್ಷಗಳಲ್ಲಿ ಈ ಮಟ್ಟವನ್ನು ತಲುಪಿದೆ. 2021ರ ಮೇ 24ರಂದು ಮಾರುಕಟ್ಟೆ ಮೌಲ್ಯವ 3 ಟ್ರಿಲಿಯನ್ ಡಾಲರ್‌ ಇತ್ತು. 2023ರಲ್ಲಿ ಈವರೆಗೆ ಬಿಎಸ್‌ಇ 6,061 ಅಂಶ ಏರಿಕೆ ಕಂಡಿದ್ದು, ಮಾರುಕಟ್ಟೆ ಮೌಲ್ಯವು ₹50.90 ಲಕ್ಷ ಕೋಟಿಯಷ್ಟು ಹೆಚ್ಚಾಗಿದೆ.

ಷೇರುಪೇಟೆಗಳಲ್ಲಿ ಬುಧವಾರ ಸಕಾರಾತ್ಮಕ ಮಟ್ಟದಲ್ಲಿಯೇ ವಹಿವಾಟು ಆರಂಭ ಆಯಿತು. ಎಚ್‌ಡಿಎಫ್‌ಸಿ ಬ್ಯಾಂಕ್‌, ಎಕ್ಸಿಸ್ ಬ್ಯಾಂ್‌, ಐಸಿಐಸಿಐ ಮತ್ತು ಟಿಸಿಎಸ್‌ ಷೇರುಗಳನ್ನು ಹೂಡಿಕೆದಾರರು ಹೆಚ್ಚಾಗಿ ಖರೀದಿ ನಡೆಸಿದ್ದರಿಂದ ಸೂಚ್ಯಂಕಗಳು ಏರಿಕೆ ಕಾಣುವಂತಾಯಿತು. ‌

ಬಿಎಸ್‌ಇ ಸೆನ್ಸೆಕ್ಸ್‌ 728 ಅಂಶ ಏರಿಕೆ ಕಂಡು 66,901 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 207 ಅಂಶ ಏರಿಕೆ ಕಂಡು 20 ಸಾವಿರದ ಗಡಿ ದಾಟಿ 20,096 ಅಂಶಗಳಿಗೆ ತಲುಪಿತು.

ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರ ಶೇ 0.54ರಷ್ಟು ಹೆಚ್ಚಾಗಿ ಬ್ಯಾರಲ್‌ಗೆ 82.12 ಡಾಲರ್‌ಗೆ ತಲುಪಿತು.

ವಿದೇಶಿ ಬಂಡವಾಳ ಒಳಹರಿವು ಮತ್ತು ಕಂಪನಿಗಳ ಎರಡನೇ ತ್ರೈಮಾಸಿಕ ಫಲಿತಾಂಶ ಉತ್ತಮ ಆಗಿರುವುದು ಷೇರುಪೇಟೆಯ ಈ ಸಾಧನೆಗೆ ನೆರವಾಗಿವೆ.
-ದೀಪಕ್ ಜಸನಿ ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ರಿಟೇಲ್‌ ರಿಸರ್ಚ್‌ನ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT