ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸೆಂಬರ್‌ನಲ್ಲಿ ಶೇ 12ರಷ್ಟು ತಗ್ಗಿದ ರಫ್ತು ವಹಿವಾಟು

Last Updated 16 ಜನವರಿ 2023, 21:06 IST
ಅಕ್ಷರ ಗಾತ್ರ

ನವದೆಹಲಿ: ದೇಶದ ರಫ್ತು ವಹಿವಾಟು 2021ರ ಡಿಸೆಂಬರ್‌ಗೆ ಹೋಲಿಸಿದರೆ 2022ರ ಡಿಸೆಂಬರ್‌ನಲ್ಲಿ ಶೇಕಡ 12.2ರಷ್ಟು ಇಳಿಕೆ ಆಗಿದ್ದು ₹ 2.81 ಲಕ್ಷ ಕೋಟಿಗೆ ತಲುಪಿದೆ.

ಕೇಂದ್ರ ವಾಣಿಜ್ಯ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, 2021ರ ಡಿಸೆಂಬರ್‌ನಲ್ಲಿ ₹ 3.20 ಲಕ್ಷ ಕೋಟಿ ಮೌಲ್ಯದ ವಹಿವಾಟು ನಡೆದಿತ್ತು.

ಆಮದು ವಹಿವಾಟು 2021ರ ಡಿಸೆಂಬರ್‌ನಲ್ಲಿ ₹ 4.92 ಲಕ್ಷ ಕೋಟಿಯಿಂದ 2022ರ ಡಿಸೆಂಬರ್‌ನಲ್ಲಿ ₹ 4.75 ಲಕ್ಷ ಕೋಟಿಗೆ ಇಳಿಕೆ ಕಂಡಿದೆ.

ಏಪ್ರಿಲ್‌–ಡಿಸೆಂಬರ್ ಅವಧಿಯಲ್ಲಿ ರಫ್ತು ವಹಿವಾಟು ಶೇ 9ರಷ್ಟು ಹೆಚ್ಚಾಗಿ ₹ 27.15 ಲಕ್ಷ ಕೋಟಿಗೆ ತಲುಪಿದೆ. ಇದೇ ಅವಧಿಯಲ್ಲಿ ಆಮದು ವಹಿವಾಟು ಶೇ 24.96ರಷ್ಟು ಹೆಚ್ಚಾಗಿ ₹ 45.02 ಲಕ್ಷ ಕೋಟಿಗೆ ಏರಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT