ಶುಕ್ರವಾರ, ಮಾರ್ಚ್ 31, 2023
23 °C

2022ರಲ್ಲಿ ಚಿನ್ನಕ್ಕೆ ಬೇಡಿಕೆ ಅಲ್ಪ ಇಳಿಕೆ: ವಿಶ್ವ ಚಿನ್ನ ಸಮಿತಿ ಮಾಹಿತಿ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: 2022ರಲ್ಲಿ ದೇಶದಲ್ಲಿ ಚಿನ್ನದ ಬೇಡಿಕೆಯು ಶೇಕಡ 2.92ರಷ್ಟು ತಗ್ಗಿದ್ದು, 774 ಟನ್‌ಗಳಿಗೆ ತಲುಪಿದೆ ಎಂದು ವಿಶ್ವ ಚಿನ್ನ ಸಮಿತಿ (ಡಬ್ಲ್ಯುಜಿಸಿ) ತಿಳಿಸಿದೆ. 2023ರಲ್ಲಿ ಚಿನ್ನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ಬರುವ ನಿರೀಕ್ಷೆ ಇದೆ ಎಂದು ಅದು ಹೇಳಿದೆ.

2021ರಲ್ಲಿ ಒಟ್ಟು 797.3 ಟನ್‌ ಚಿನ್ನಕ್ಕೆ ಬೇಡಿಕೆ ಬಂದಿತ್ತು ಎಂದು ಸಮಿತಿಯ ವಾರ್ಷಿಕ ವರದಿಯಲ್ಲಿ ಹೇಳಲಾಗಿದೆ. 2022ರಲ್ಲಿ 600.4 ಟನ್ ಆಭರಣ ಚಿನ್ನಕ್ಕೆ ಬೇಡಿಕೆ ಬಂದಿತ್ತು. ಹೂಡಿಕೆಯ ಉದ್ದೇಶದಿಂದ ಒಟ್ಟು 173.6 ಟನ್ ಚಿನ್ನಕ್ಕೆ ಬೇಡಿಕೆ ಬಂದಿತ್ತು ಎಂದು ಸಮಿತಿಯ ಭಾರತದ ವ್ಯವಸ್ಥಾಪಕ ನಿರ್ದೇಶಕ ಪಿ.ಆರ್. ಸೋಮಸುಂದರಂ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು