ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಬರ್‌ ಅಪರಾಧ ತಡೆಯಲು Infosysನಿಂದ ಕರ್ನಾಟಕ ಪೊಲೀಸ್‌ ಇಲಾಖೆಗೆ ₹33 ಕೋಟಿ ನೆರವು

ಸೈಬರ್‌ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವುದಕ್ಕೆ ನೆರವಾಗಲು ಇನ್ಫೊಸಿಸ್‌ ಫೌಂಡೇಶನ್‌ನಿಂದ ಕರ್ನಾಟಕ ಪೊಲೀಸ್‌ ಇಲಾಖೆಗೆ ₹33 ಕೋಟಿ ಆರ್ಥಿಕ ನೆರವು ನೀಡಲಾಗಿದೆ.
Published 10 ಏಪ್ರಿಲ್ 2024, 16:00 IST
Last Updated 10 ಏಪ್ರಿಲ್ 2024, 16:00 IST
ಅಕ್ಷರ ಗಾತ್ರ

ನವದೆಹಲಿ: ಸೈಬರ್‌ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವುದಕ್ಕೆ ನೆರವಾಗಲು ಇನ್ಫೊಸಿಸ್‌ ಫೌಂಡೇಶನ್‌ನಿಂದ ಕರ್ನಾಟಕ ಪೊಲೀಸ್‌ ಇಲಾಖೆಗೆ ₹33 ಕೋಟಿ ಆರ್ಥಿಕ ನೆರವು ನೀಡಲಾಗಿದೆ.  

ಬೆಂಗಳೂರಿನಲ್ಲಿ ಇರುವ ಸಿಐಡಿ ಘಟಕ, ಭಾರತೀಯ ದತ್ತಾಂಶ ಭದ್ರತಾ ಸಮಿತಿ (ಡಿಎಸ್‌ಸಿಐ) ಹಾಗೂ ಸೈಬರ್ ಅಪರಾಧಗಳ ತನಿಖೆ ತರಬೇತಿ ಮತ್ತು ಸಂಶೋಧನಾ ಕೇಂದ್ರದ (ಸಿಸಿಐಟಿಆರ್) ಜೊತೆಗೆ ಈ ಕುರಿತ ಒಡಂಬಡಿಕೆಗೆ ಫೌಂಡೇಶನ್‌ ಅಂಕಿತ ಹಾಕಿದೆ. 

ಸೈಬರ್‌ ಅಪರಾಧಗಳ ತನಿಖಾ ಸಾಮರ್ಥ್ಯವನ್ನು ಮತ್ತಷ್ಟು ಬಲಗೊಳಿಸಲು ಈ ನೆರವು ನೀಡಲಾಗಿದೆ. ಈ ನಿಟ್ಟಿನಲ್ಲಿ ಸಿಸಿಐಟಿಆರ್ ಜೊತೆಗಿನ ಒಡನಾಟವನ್ನು ಮತ್ತೆ ನಾಲ್ಕು ವರ್ಷಗಳವರೆಗೆ ವಿಸ್ತರಿಸಲಾಗಿದೆ. ಡಿಜಿಟಲ್‌ ಫೊರೆನ್ಸಿಕ್‌ ಹಾಗೂ ಸೈಬರ್‌ ಅಪರಾಧದ ತನಿಖೆ ಬಗೆಗಿನ ತರಬೇತಿ ಮತ್ತು ಸಂಶೋಧನೆಗೆ ಇದರಿಂದ ನೆರವಾಗಲಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT