ಗುರುವಾರ , ಜುಲೈ 29, 2021
21 °C

ಕೋವಿಡ್‌: ಕಂಪನಿಗಳ ಐ.ಟಿ ಬಜೆಟ್‌ ಖೋತಾ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ  : ಆರ್ಥಿಕತೆಯು ಕೋವಿಡ್‌ ಪಿಡುಗಿನಿಂದಾಗಿ ತೀವ್ರವಾಗಿ ಬಾಧಿತವಾಗಿರುವುದರಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ಉದ್ದಿಮೆಗಳು ಐ.ಟಿ ಮೂಲ ಸೌಕರ್ಯಕ್ಕೆ ಮಾಡುವ ವೆಚ್ಚ ಕಡಿತಗೊಳಿಸಲಿವೆ.

ಐದು ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಕಾರ್ಪೊರೇಟ್‌ಗಳ ಐ.ಟಿ ಬಜೆಟ್‌ ಕಡಿಮೆಯಾಗಲಿದೆ ಎಂದು ಗಾರ್ಟನರ್‌ ಕಂಪನಿ ವಿಶ್ಲೇಷಿಸಿದೆ.

2020ರಲ್ಲಿ ಐ.ಟಿ ವೆಚ್ಚವು ಶೇ 6.6ರಷ್ಟು ಹೆಚ್ಚಾಗಿ  ₹  7.05 ಲಕ್ಷ ಕೋಟಿಗಳಷ್ಟಾಗಲಿದೆ ಎಂದು 2019ರ ನವೆಂಬರ್‌ನಲ್ಲಿ ಅಂದಾಜಿಸಲಾಗಿತ್ತು. ಕೋವಿಡ್‌ ಪಿಡುಗಿನ ಕಾರಣಕ್ಕೆ ಈ ವೆಚ್ಚ ಈಗ ಶೇ 8ರಷ್ಟು ಕಡಿಮೆಯಾಗುವ (₹ 6.25 ಲಕ್ಷ ಕೋಟಿ) ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

‘ಜಾಗತಿಕ ಆರ್ಥಿಕ ಹಿಂಜರಿತದ ಭೀತಿ ಎದುರಾಗಿರುವುದರಿಂದ ದೇಶಿ ಕಂಪನಿಗಳು ತಮ್ಮ ಐ.ಟಿ ವೆಚ್ಚದ ಬಗ್ಗೆ ಹೆಚ್ಚು ಜಾಗರೂಕ ಧೋರಣೆ ತಳೆದಿವೆ. ಹೀಗಾಗಿ ಹೊಸ ಸಾಧನಗಳ ಖರೀದಿ ಮುಂದಕ್ಕೆ ಹೋಗಲಿದೆ’ ಎಂದು ಗಾರ್ಟನರ್‌ನ ಹಿರಿಯ ಸಂಶೋಧನಾ ನಿರ್ದೇಶಕ ನವೀನ್‌ ಮಿಶ್ರಾ ಹೇಳಿದ್ದಾರೆ.

₹ 7.05 ಲಕ್ಷ ಕೋಟಿ: ಐ.ಟಿ ವೆಚ್ಚ ಹೆಚ್ಚಳದ ಮೊದಲಿನ ಅಂದಾಜು

₹ 6.25 ಲಕ್ಷ ಕೋಟಿ: ಕೋವಿಡ್‌ ಕಾರಣಕ್ಕೆ ವೆಚ್ಚದಲ್ಲಿನ ಕಡಿತದ ಅಂದಾಜು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.