ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಭರಣದ ಚಿಲ್ಲರೆ ವ್ಯಾಪಾರ: ಶೇ 12ರಷ್ಟು ಬೆಳೆಯುವ ನಿರೀಕ್ಷೆ

Published 22 ಡಿಸೆಂಬರ್ 2023, 14:27 IST
Last Updated 22 ಡಿಸೆಂಬರ್ 2023, 14:27 IST
ಅಕ್ಷರ ಗಾತ್ರ

ಕೋಲ್ಕತ್ತ: ಚಿನ್ನದ ದರ ಏರಿಕೆಯ ಕಾರಣದಿಂದ ದೇಶೀಯ ಆಭರಣದ ಚಿಲ್ಲರೆ ಉದ್ಯಮವು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 10-12ರಷ್ಟು ಬೆಳವಣಿಗೆ ಆಗುವ ನಿರೀಕ್ಷೆ ಇದೆ ಎಂದು ಕ್ರೆಡಿಟ್ ರೇಟಿಂಗ್ ಸಂಸ್ಥೆ ಐಸಿಆರ್‌ಎ ತಿಳಿಸಿದೆ.

ಕಳೆದ ಹಣಕಾಸು ವರ್ಷದಲ್ಲಿ ಉದ್ಯಮವು ಶೇ 15ಕ್ಕಿಂತಲೂ ಹೆಚ್ಚು ಬೆಳವಣಿಗೆ ಆಗಿತ್ತು. ಪ್ರಸಕ್ತ ಹಬ್ಬದ ಋತುವಿನಲ್ಲಿ ಚಿನ್ನದ ದರ ಏರುಗತಿಯಲ್ಲಿಯೇ ಇದ್ದರೂ ಬೇಡಿಕೆಯ ಪ್ರಮಾಣವು ಸ್ಥಿರವಾಗಿತ್ತು ಎಂದು ಐಸಿಆರ್‌ಎ ಹೇಳಿದೆ. 

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಚಿನ್ನದ ಬೆಲೆಯು ಪ್ರತಿ ಗ್ರಾಂ.ಗೆ ₹5,600ರಿಂದ ₹5,700ರ ವ್ಯಾಪ್ತಿಯಲ್ಲಿ ಸ್ಥಿರವಾಗಿವೆ. ಅದಕ್ಕೂ ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಇದು ಅಂದಾಜು ಶೇ 14ರಷ್ಟು ಏರಿಕೆ ಆಗಿದೆ.

ಸ್ಥಿರ ಬೇಡಿಕೆಯಿಂದಾಗಿ ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಆಭರಣ ಉದ್ಯಮವು ವರ್ಷದಿಂದ ವರ್ಷಕ್ಕೆ ಶೇ 6-8 ರಷ್ಟು ಬೆಳವಣಿಗೆಯಾಗಲಿದೆ ಎಂದು ಅದು ಅಂದಾಜಿಸಿದೆ.

ಚಿನ್ನದ ದರ ₹300,ಬೆಳ್ಳಿ ₹400 ಏರಿಕೆ

ನವದೆಹಲಿ (ಪಿಟಿಐ): ಇಲ್ಲಿನ ಚಿನಿವಾರ ಪೇಟೆಯಲ್ಲಿ ಶುಕ್ರವಾರ ಚಿನ್ನ ಮತ್ತು ಬೆಳ್ಳಿ ದರ ಏರಿಕೆ ಆಗಿದೆ. ಚಿನ್ನದ ದರ 10 ಗ್ರಾಂ. ಗೆ ₹300 ಏರಿಕೆಯಾಗಿ, ₹63,350ರಂತೆ ಮಾರಾಟವಾಯಿತು.

ಬೆಳ್ಳಿ ಧಾರಣೆ ಕೆ.ಜಿಗೆ ₹400 ಹೆಚ್ಚಳವಾಗಿ, ₹79,500 ತಲುಪಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆ ಆಗಿದ್ದು, ದೇಶೀಯ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿತು ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ ಸೌಮಿಲ್‌ ಗಾಂಧಿ ಹೇಳಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಒಂದು ಔನ್ಸ್‌ಗೆ (28.34 ಗ್ರಾಂ) ಕ್ರಮವಾಗಿ 2,050 ಡಾಲರ್‌ ಮತ್ತು 24.45 ಡಾಲರ್‌ನಂತೆ ಮಾರಾಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT